ಕೃಷಿ ಪ್ರಧಾನವಾಗಿರುವ ಭಾರತದಲ್ಲಿ ಹೆಚ್ಚಗಿ ಕೃಷಿಯನ್ನು ಅವಲಂಭಿತವಾಗಿರುವ ಕುಟುಂಬಗಳೇ ಹೆಚ್ಚಾಗಿವೆ ಹಾಗಾಗಿ ದೇಶದಲ್ಲಿ ಹಲವು ರೀತಿಯಾದ ಹೊಸ ಹೊಸ ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ ಅದರಲ್ಲಿ ಈ ಬೆಳೆ ಪರಿಹಾರ ಸಹ ಒಂದಾಗಿದೆ ರೈತನಿಗೆ ನೇರವಾಗಿ ಅವರ ಖಾತೆಗೆ ಬೆಳೆ ಪರಿಹಾರ ಹಣವನ್ನು ಸರ್ಕಾರ ಹಾಕಲಾಗುತ್ತದೆ ಆದರೆ ಎಷ್ಟೋ ಜನ ರೈತರಿಗೆ ಈ ಹಣವನ್ನು ತಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಲು ಬರುವುದಿಲ್ಲ ಮತ್ತು ಕೆಲವೊಮ್ಮೆ ಹಲವು ಕೆಲಸ ಕಾರ್ಯಗಳು ಇದ್ದರು ಅವನೆಲ್ಲ ಬಿಟ್ಟು ಬ್ಯಾಂಕ್ ಕಡೆ ಹೋಗುತ್ತಾರೆ ಹಾಗಾಗಿ ನೀವು ಅಲ್ಲಿ ಹೋಗುವುದಕ್ಕಿಂತ ನಿಮ್ಮ ಖಾತೆಗೆ ಹಣ ಬಂದಿದೆಯೋ? ಇಲ್ಲವೋ ತಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು ನೋಡಿ.
ಬೆಳೆ ಪರಿಹಾರದ ಹಣವನ್ನು ತಿಳಿಯಬೇಕು ಎಂದರೆ ಒಂದು ವೆಬ್ಸೈಟ್ ಓಪನ್ ಮಾಡಬೇಕು. ಯಾವುದೇ ರೀತಿಯ ವೆಬ್ಸೈಟ್ ಇದ್ದರೆ ಸಾಕು ಆ ವಿಷಯದ ಬಗ್ಗೆ ಮಾಹಿತಿಯನ್ನು ತಿಳಿಯಬಹುದು. ಮೊದಲು parihara.karnataka.gov.in. ಎಂದು ವೆಬ್ಸೈಟ್ ನ್ನು ಓಪನ್ ಮಾಡಬೇಕು.
ನಂತರ ಓಪನ್ ಆದಾಗ ರೈತರಿಗೆ ಪರಿಹಾರ ಒದಗಿಸುವ ಬಗ್ಗೆ ತಿಳಿಯುತ್ತದೆ. ಪರಿಹಾರ ಸೇವೆಗಳು ಎಂಬ ಆಯ್ಕೆಯನ್ನು ನೋಡಿ ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ಹಣ ಸಂದಾಯ ವರದಿ ಒಪನ್ ಆಗುತ್ತದೆ. ಆಧಾರ್ ಐಡಿಯನ್ನು ಬರೆಯಬೇಕು. ನಂತರ ಯಾವ ವರ್ಷ ಎಂದು ಅಂದರೆ 2020 ಮತ್ತು 21 ಎಂದು ಸೆಲೆಕ್ಟ್ ಮಾಡಬೇಕು. ನಂತರ ವಿವರಗಳನ್ನು ಪಡೆಯಲು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಈಗ ಹಣ ಸಂದಾಯದ ವಿವರ ದೊರೆಯುತ್ತದೆ. ಹಣ ಬಂದಿದ್ದರೆ ಗ್ರಾಮ ಲೆಕ್ಕಿಗರು ಇದನ್ನು ಅಲ್ಲಿ ಎಂಟ್ರಿ ಮಾಡಿರುತ್ತಾರೆ. ಹಣ ಬರದೆ ಇದ್ದರೆ ಎಂಟ್ರಿ ಮಾಡಿರುವುದಿಲ್ಲ.
ಇನ್ನು ಯಾವ ಯಾವ ಊರಿನ ರೈತರಿಗೆ ಬೆಳೆ ಪರಿಹಾರ ಹಣ ಬಂದಿದೆ ಎಂದು ಸಹ ನೀವು ಚೆಕ್ ಮಾಡಬಹದು ಅದು ಹೇಗೆ ಅನ್ನೋದು ಇಲ್ಲಿದೆ ನೋಡಿ. ವೆಬಸೈಟ್ ನಲ್ಲಿ ಹೋಮ್ ಪೇಜ್ ಗೆ ಹೋಗಿ ಗ್ರಾಮ ವರ್ಗೀಕರಣವಾರು ಫಲಾನುಭವಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಜಿಲ್ಲೆ, ತಾಲೂಕು ಮತ್ತು ಹಳ್ಳಿಯನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಬೇಕು. ಬೆಳೆ ಹಾನಿಯಾದ ವರ್ಷವನ್ನು ಸೆಲೆಕ್ಟ್ ಮಾಡಬೇಕು. ಹಾಗೆಯೇ ಸೀಸನ್ ನಲ್ಲಿ ಖಾರೀಫ್ ನ್ನು ಸೆಲೆಕ್ಟ್ ಮಾಡಬೇಕು. ಎಲ್ಲಾ ಮುಗಿದ ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಯಾವ ರೈತರಿಗೆ ಎಷ್ಟು ಹಣ ಜಮಾ ಆಗಿದೆ ಎಂದು ತಿಳಿಯಬಹುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.