ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಜಮೀರ್ ಮಗ ಅವರ ಕೈಯಲ್ಲಿ ಎಷ್ಟು ಸಿನಿಮಾಗಳಿವೆ ಗೊತ್ತಾ ಹಾಗು ಜಮೀರ್ ಹೇಗಿದ್ದಾರೆ ಗೊತ್ತಾ..!

Hit

ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ಮಕ್ಕಳು ಸಿನಿಮಾರಂಗದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಇದೀಗ ಸಮಸ್ತ ತಯಾರಿಯ ಜೊತೆಗೆ ಚಿತ್ರರಂಗಕ್ಕೆ ಬರುತ್ತಿರುವ ರಾಜಕಾರಣಿಯ ಮಗ ಯಾರೆಂದರೆ ಜಾಯದ್ ಖಾನ್. ಅವರ ತಂದೆ, ತಾಯಂದಿರು ರಾಜಕಾರಣದಲ್ಲಿ ಬ್ಯೂಸಿಯಾಗಿದ್ದಾರೆ. ಮಕ್ಕಳು ಈಗ ವಿಭಿನ್ನವಾದ ಕ್ಷೇತ್ರವನ್ನು ಆಯ್ದುಕೊಳ್ಳುತ್ತಿದ್ದಾರೆ. ಶಾಸಕ ಜಮೀರ್ ಅಹಮದ್ ಖಾನ್ ಅವರ ಪುತ್ರ ಜಾಯದ್ ಖಾನ್ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಜಯತೀರ್ಥ ಅವರ ಬನಾರಸ್ ಚಿತ್ರದ ಮೂಲಕ ಹೀರೊ ಆಗಿ ಎಂಟ್ರಿ ಕೊಡುತ್ತಿರುವ ಜಾಯದ್ ಅವರಿಗೆ ಚಿತ್ರ ಬಿಡುಗಡೆಗೂ ಮುಂಚೆಯೇ ಸಿನಿಮಾಗಳಲ್ಲಿ ಹೆಚ್ಚು ಆಫರ್ ಬರುತ್ತಿವೆ ಎಂದು ಸುದ್ದಿಯಾಗಿದೆ.

ನಾಗಶೇಖರ್ ಅವರ ಚಿತ್ರಕ್ಕೆ ಆಫರ್ ಕೂಡ ಬಂದಿದೆ. ಲವ್ ಮಾಕ್ಟೈಲ್ ಅನ್ನು ತೆಲುಗಿಗೆ ರಿಮೇಕ್ ಮಾಡಲಾಗುತ್ತಿದೆ ಅದರಲ್ಲೂ ಆಫರ್ ಬಂದಿದೆ. ಇದರ ಜೊತೆಗೆ ಜಾಯದ್ ಖಾನ್ ಅವರ ಹೊಸ ಸಿನಿಮಾಗಾಗಿ ನಾಗಶೇಖರ್ ಕಾಂಟ್ಯಾಕ್ಟ್ ಮಾಡಿದ್ದಾರೆ. ನಾಗಶೇಖರ್ ಅವರು ಜಾಯದ್ ಖಾನ್ ಅವರ ಜೊತೆ ಮೊದಲಿನಿಂದಲೂ ಹೆಚ್ಚು ಟಚ್ ನಲ್ಲಿದ್ದು ಮೈನ ಚಿತ್ರ ನಂತರವೂ ಸಹ ಇವರ ಜೊತೆ ಒಂದು ಚಿತ್ರ ಮಾಡಬೇಕು ಎಂದು ನಾಗಶೇಖರ್ ಅವರಿಗೆ ಅನಿಸಿತ್ತು. ಬನಾರಸ್ ಚಿತ್ರವನ್ನು ಒಪ್ಪಿಕೊಂಡ ಮೇಲೆ ಅದನ್ನು ಮುಗಿಸಿದ ನಂತರ ಒಂದು ಚಿತ್ರ ಮಾಡೋಣ ಎಂದು ಇವರ ಮಧ್ಯೆ ಮಾತುಕತೆ ಸಹ ನಡೆದಿತ್ತು. ಅದರಲ್ಲೂ ಜಾಯದ್ ಖಾನ್ ಸಿನಿಮಾ ಕಥೆಯನ್ನು ನೋಡಿ ಚಿತ್ರದಲ್ಲಿ ಆಕ್ಟ್ ಮಾಡುವುದಕ್ಕೆ ಒಪ್ಪಿಗೆಯನ್ನು ಕೊಡುತ್ತಾರೆ. ಬನಾರಸ್ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಮಿಸ್ಟೀರಿಯಸ್ ಲವ್ ಸ್ಟೋರಿಯನ್ನು ತೆರೆಮೇಲೆ ಎಳೆಎಳೆಯಾಗಿ ಬಿಚ್ಚಿಡುವ ಪ್ರಯತ್ನವನ್ನು ಮಾಡಲಾಗಿದೆ. ಈ ಚಿತ್ರವನ್ನು ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ರಿಲೀಸ್ ಮಾಡಲು ತಯಾರಿ ಮಾಡಲಾಗುತ್ತಿದೆ. ಬನಾರಸ್ ಚಿತ್ರತಂಡ ಶೇಕಡ 90 ರಷ್ಟು ಚಿತ್ರೀಕರಣವನ್ನು ಮುಗಿಸಿದೆ.

ಶಾಸಕ ಜಮೀರ್ ಅಹಮದ್ ಖಾನ್ ಅವರ ಪುತ್ರ ಜಾಯದ್ ಖಾನ್ ಇನ್ನೇನು ಕೆಲವೇ ತಿಂಗಳುಗಳಲ್ಲಿ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗುತ್ತಿದ್ದಾರೆ. ಜಾಯದ್ ಖಾನ್ ಗೆ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ ಆದರೆ ಆಕ್ಟಿಂಗ್ ಮಾಡಬೇಕು, ಹೀರೋ ಆಗಬೇಕು ಎಂಬ ಆಸೆ ಇದ್ದಿದ್ದರಿಂದ ಕನ್ನಡ ಕಲಿಯುವುದಕ್ಕೆ ಶುರುಮಾಡಿದರು. ರಂಗಕರ್ಮಿ ಗೌರಿರವರ ಬಳಿ ಎಂಟು ತಿಂಗಳುಗಳ ಕಾಲ ಕನ್ನಡ ಅಭ್ಯಾಸವನ್ನು ಮಾಡಿದ್ದಾರೆ. ಈಗ ಕನ್ನಡವನ್ನು ಸ್ಪಷ್ಟವಾಗಿ ಮತ್ತು ಚೆನ್ನಾಗಿ ಮಾತನಾಡುತ್ತೇನೆ ಎಂದು ಸ್ವತಃ ಅವರೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇವರ ಕನ್ನಡದ ಬಗ್ಗೆ ನಿರ್ದೇಶಕ ಜಯತೀರ್ಥ ಆವರು ಕೂಡ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಎಲ್ಲ ಸಿನಿಮಾಗಳು ಕನ್ನಡದಲ್ಲಿ ಮೊದಲು ಬರಬೇಕೆಂಬ ಆಸೆ ಜಾಯದ್ ಖಾನ್ ಅವರಿಗೆ ಇದೆ. ಜಾಯದ್ ಅವರ ನಟನೆ ಯಾವ ರೀತಿಯಾಗಿ ಇರುತ್ತದೆ, ಅದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *