ಹೊಟ್ಟೆ ಬೊಜ್ಜು ಕರಗಿಸಿ ದೇಹದ ತೂಕ ಕಡಿಮೆ ಮಾಡುವ ದೋಸೆ ..!

Hit

ಇತ್ತೀಚಿನ ದಿನಗಲ್ಲಿ ಎಲ್ಲರದ್ದೂ ಒಂದೇ ಸಮಸ್ಯೆ ಹೊಟ್ಟೆ ದಪ್ಪ ಆಗಿದೆ ದೇಹದ ತೂಕ ಜಾಸ್ತಿ ಆಗಿದೆ ಏನು ಮಾಡೋದು ಅನ್ನೋದು ಹಲವು ಜನರ ಸಮಸ್ಯೆ, ನಮ್ಮ ದೇಹದ ತೂಕ ಹೆಚ್ಚಾಗಲು ನಾವಿ ಸೇವಿಸುವ ಆಹಾರ ಕಾರಣ ಎಷ್ಟೋ ಜನ ಏನು ಸಿಗುತ್ತೋ ಅದನ್ನು ತಿಂದು ತಮ್ಮ ದೇಹವನ್ನು ದಪ್ಪ ಮಾಡಿಕೊಳ್ಳುತ್ತಾರೆ ನಂತರ ಕರಗಿಸಲು ಹಲವು ರೀತಿಯಾದ ಪ್ರಯತ್ನಗಳನ್ನು ಮಾಡುತ್ತಾರೆ.

ಏನೇ ಇರಲಿ ನಮ್ಮ ದೇಹದ ತೂಕವನ್ನು ಯಾವ ರೀತಿಯಲ್ಲಿ ಆದೊಷ್ಟು ಬೇಗ ಕಡಿಮೆ ಮಾಡಿಕೊಳ್ಳಬಹುದು ಅನ್ನೋದನ್ನು ಇಲ್ಲಿ ತಿಳಿಸಲಾಗಿದೆ ನೋಡಿ. ನಾವು ಪ್ರತಿನಿತ್ಯ ಬೆಳಗಿನ ಉಪಹಾರಕ್ಕೆ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ತಯಾರು ಮಾಡಿಕೊಂಡು ಸೇವಿಸುತ್ತೇವೆ.

ಅದರ ಬದಲಿಗೆ ಆರೋಗ್ಯಕ್ಕೆ ಹಿತಕರವಾಗಿರುವ ಹಾಗೂ ದೇಹಕ್ಕೆ ಉತ್ತಮ ಆರೋಗ್ಯವನ್ನು ಕೊಡುವಂತಹ ಓಟ್ಸ್ ದೋಸೆ ಮಾಡುವ ವಿಧಾನ ಹೇಗೆ ಎಂಬುದನ್ನು ತಿಳಿಸುತ್ತೇವೆ. ಮೊದಲಿಗೆ ಒಂದು ಕಪ್ ಓಟ್ಸ್ ಅನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪೌಡರ್ ಮಾಡಿಕೊಳ್ಳಿ ಈಗ ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ.

ನಂತರ ಅದಕ್ಕೆ ಅರ್ಧ ಕಪ್ ಮೊಸರು ಹಾಗೂ ಅರ್ಧ ಕಪ್ಪು ನೀರು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಸ್ವಲ್ಪ ಸಮಯದವರೆಗೂ ನೆನೆಯಲು ಬಿಡಬೇಕು. ಮತ್ತೊಂದು ಕಡೆ ಒಂದು ಈರುಳ್ಳಿ, ಎರಡು ಹಸಿ ಮೆಣಸಿನಕಾಯಿ, ಒಂದು ಟೇಬಲ್ ಸ್ಪೂನ್ ಜೀರಿಗೆ, ಒಂದು ಇಂಚು ಶುಂಠಿ ಹಾಗೂ ಸ್ವಲ್ಪ ಕೊತ್ತಂಬರಿ ಸೊಪ್ಪು, ಇವೆಲ್ಲವನ್ನೂ ಕೂಡ ಚಿಕ್ಕದಾಗಿ ಮಾಡಿಕೊಳ್ಳಬೇಕು.

ನಂತರ ಗ್ಯಾಸ್ ಮೇಲೆ ದೋಸೆ ತವಾವನ್ನು ಇಟ್ಟು ಅದಕ್ಕೆ ಒಂದು ಟೇಬಲ್ ಸ್ಪೂನ್ ತುಪ್ಪವನ್ನು ಹಾಕಿ ತಯಾರಿಸಿ ಕೊಂಡಿರುವ ಓಟ್ಸ್ ಮಿಶ್ರಣವನ್ನು ಅದರ ಮೇಲೆ ಹಾಕಿ. ನಂತರ ಚಿಕ್ಕದಾಗಿ ಕಟ್ ಮಾಡಿಕೊಂಡಿರುವ ಮಸಾಲೆ ಪದಾರ್ಥಗಳನ್ನು ದೋಸೆ ಮೇಲೆ ಹಾಕಿ ಚೆನ್ನಾಗಿ ಬೇಯಿಸಬೇಕು.

ನೋಡಿ ಈ ರೀತಿಯಾದ ಓಟ್ಸ್ ಮಿಶ್ರಣದ ದೋಸೆ ತಿನ್ನುವುದರಿಂದ ನಿಮ್ಮ ಅರೋಗ್ಯ ತುಂಬ ಚನ್ನಾಗಿರುತ್ತದೆ ಮತ್ತು ದೇಹದ ತೂಕ ಸಹ ಆದೊಷ್ಟು ಕಡಿಮೆ ಇರುತ್ತದೆ ಹಾಗಾಗಿ ಜಂಕ್ ಪದಾರ್ಥಗಳನ್ನು ತಿನ್ನುವು ಬದಲಾ ಈ ರೀತಿಯಾದ ಆಹಾರಗಳನ್ನು ಸೇವನೆ ಮಾಡಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *