ಪೆಟ್ರೋಲ್ ಬೆಲೆ ಕೇಳಿದರೆ ಶಾಕ್ ಆಗುತ್ತೆ ಹಾಗಾಗಿ ವಾಹನದಲ್ಲಿ ಈ ಟಿಪ್ಸ್ ಬಳಸಿ ಪೆಟ್ರೋಲ್ ಉಳಿಸಿ ಸೂಪರ್ ಮಾಹಿತಿ..!

Hit

ಇವತ್ತಿನ ದಿನಗಳಲ್ಲಿ ಪೆಟ್ರೋಲ್ ಬೆಲೆ ನೋಡಿದರೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಇದರಿಂದ ಅದೆಷ್ಟೋ ಜನರಿಗೆ ತುಂಬ ಕಷ್ಟವಾಗಿದೆ ಪೆಟ್ರೋಲ್ ಹಾಕಿಸೋದು ಹೇಗಪ್ಪಾ ಅಂತ ಇನ್ನು ಮಂದಿಗೆ ಮೊದಲು ಎಲ್ಲ ಕಡೆ ತಮ್ಮ ವಾಹನದಲ್ಲೇ ಹೋಗುತಿದ್ದರು ಆದರೆ ಇದೀಗ ಹತ್ತಿರ ಸ್ಥಳಗಳಿಗೆ ವಾಕಿಂಗ್ ಮಾಡಿಕೊಂಡೆ ಹೋಗುತ್ತಾರೆ ಹಾಗೆ ಸ್ವಂತ ವಾಹನ ಬಳಸುವುದಕ್ಕಿಂತ ಸರ್ಕಾರೀ ಬಸ್ಸುಗಳಲ್ಲಿ ಹೋಗುವುದೇ ಉತ್ತಮ ಅನ್ನೋದು ಕೆಲವರ ಮಾಹಿತಿ ಹಾಗಾಗಿ ಇಂತಹ ಸಂಕಷ್ಟಗಳಿಂದ ದೂರ ಬರಬೇಕು ಮತ್ತು ನಮ್ಮ ಬೈಕ್ ನಲ್ಲಿ ಹೆಚ್ಚು ಮೈಲೇಜ್ ಬಂದು ಪೆಟ್ರೋಲ್ ಉಳಿತಾಯ ಆಗಬೇಕು ಅಂದ್ರೆ ಈ ವಿಧಾನವನ್ನು ಅನುಸರಿಸಿ.

ಇನ್ನು ನಿಮ್ಮ ವಾಹನವನ್ನು ಅತಿ ವೇಗವಾಗಿ ಚಲಾಯಿಸುವುದರಿಂದ ಹಲವು ಅಪಾಯಗಳು ಬರುತ್ತವೆ ಹಾಗೆ ಅತಿಯಾಗಿ ಜೋರಾಗಿ ಹೋಗುವುದರಿಂದ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗಿ ಪೆಟ್ರೋಲ್ ಸಹ ಖರ್ಚಾಗುತ್ತದೆ ಹಾಗಾಗಿ ನಿಮಗೆ ಪೆಟ್ರೋಲ್ ಉಳಿತಾಯ ಆಗಬೇಕು ಮತ್ತು ನಿಮ್ಮ ವಾಹನ ಸುರಕ್ಷಿತವಾಗಲಿರಬೇಕು ಅಂದರೆ ಈ ಟಿಪ್ಸ್ ಫಾಲೋ ಮಾಡಿ.

ಮೊದಲನೆಯದಾಗಿ ನೀವು ಪದೇ ಪದೇ ಗೇರು ಬದಲಾಯಿಸುವುದರಿಂದ ಗಾಡಿ ಮೈಲೇಜ್ ಕಡಿಮೆಯಾಗುತ್ತದೆ ಹಾಗಾಗಿ ಆದೊಷ್ಟು ದೂರ ಒಂದೇ ಗೇರಿನಲ್ಲಿ ಹೋಗುವಂತೆ ನೋಡಿಕೊಳ್ಳಿ ಮತ್ತೆ ನೀವು ಎಮಿಷನ್ ಟೆಸ್ಟ್ ಮಾಡಿಸುವುದರಿಂದ ನಿಮ್ಮ ವಾಹನ ಶೇಕಡಾ ೪ರಷ್ಟು ಪೆಟ್ರೋಲ್ ಉಳಿತಾಯ ಮಾಡುತ್ತದೆ. ಆಕ್ಸಿಜನ್ ಸೆನ್ಸಾರ್‌ನಿಂದ ಶೇ.40ರಷ್ಟು ಮೈಲೇಜ್ ಹೆಚ್ಚುತ್ತದೆ. ಟೈಯರ್‌ಗಳು ಒಳ್ಳೆಯ ಕಂಡೀಷನ್‌ನಲ್ಲಿ ಇದ್ದರೆ ಪೆಟ್ರೋಲ್ ಸಹ ಉಳಿತಾಯ ಆಗುತ್ತದೆ. ಓನರ್ಸ್ ಗೈಡ್‍ನಲ್ಲಿ ಸೂಚಿಸಿರುವ ಗ್ರೇಡ್ ಮೋಟಾರ್ ಆಯಿಲನ್ನು ಮಾತ್ರ ಬಳಸಬೇಕು. ಸೂಕ್ತ ಮೋಟಾರ್ ಆಯಿಲ್ ಬಳಸದಿದ್ದರೆ ಪೆಟ್ರೋಲ್ ಖರ್ಚು ಶೇ.2ರಷ್ಟು ಹೆಚ್ಚುತ್ತದೆ. ಫ್ಯೂಯಲ್ ಫಿಲ್ಟರ್ಸ್, ಸ್ಪಾರ್ಕ್ ಪ್ಲಗ್ಸ್, ವೀಲ್ ಅಲೈನ್‌ಮೆಂಟ್, ಎಮಿಷನ್ ಸಿಸ್ಟಂ ನಿತ್ಯ ಪರಿಶೀಲಿಸುತ್ತಿರಬೇಕು. ಇನ್ನು ಬೆಳಗ್ಗೆ ಹೊತ್ತು ಪೆಟ್ರೋಲ್ ಟ್ಯಾಂಕ್ ತುಂಬಿಸಬೇಕು.

ಇನ್ನು ಯಾವುದೇ ವಾಹನಕ್ಕೆ ಪೆಟ್ರೋಲ್ ಸಂಪೂರ್ಣ ಖಾಲಿ ಆಗುವ ಮುನ್ನವೇ ಅರ್ಧ ಖಾಲಿಯಾದಾಗ ಟ್ಯಾಂಕ್ ತುಂಬಬೇಕು. ಹಾಗೆ ಲೋಯೆಸ್ಟ್ ಗೇರ್‌ಗಿಂತಲೂ ಹೈಯಸ್ಟ್ ಗೇರ್‌ನಲ್ಲೇ ಡ್ರೈವಿಂಗ್ ಮಾಡಬೇಕು. ನಂತರ ವಾಹವನ್ನು ನಿಯಮಿತವಾಗಿ ಸರ್ವೀಸಿಂಗ್ ಮಾಡಿಸಬೇಕು.

ಇನ್ನು ಬ್ರೇಕ್ಸ್, ಆಕ್ಸಿಲೇಟರನ್ನು ಹಾರ್ಡ್ ಆಗಿ ಬಳಸಬಾರದು. ಟೈರ್ ಪ್ರೆಷರ್ ಪರೀಕ್ಷಿಸುತ್ತಿರಬೇಕು. ವೇಗ ಹೆಚ್ಚಿಸುತ್ತಾ, ಕಡಿಮೆ ಮಾಡದೆ ಒಂದೇ ಸ್ಪೀಡ್‌ನಲ್ಲಿ ವಾಹನವನ್ನು ಓಡಿಸಬೇಕು. ಟ್ರಾಫಿಕ್ ಕಡಿಮೆ ಇರುವ ಸಮಯದಲ್ಲಿ ಪ್ರಯಾಣಿಸುವುದು ಉತ್ತಮ. ಪೆಟ್ರೋಲ್ ಲೀಕೇಜ್ ಸಮಸ್ಯೆಗಳಿದ್ದರೆ ರಿಪೇರಿ ಮಾಡಿಸಬೇಕು. ಕಾರ್ ಪೂಲಿಂಗ್, ಬೈಕ್ ಪೂಲಿಂಗ್ ಸೇವೆಗಳನ್ನು ಬಳಸಿಕೊಳ್ಳಬೇಕು.

ಇನ್ನು ಎಲ್ಲದಕ್ಕಿಂತ ಮುಖ್ಯವಾದ ವಿಚಾರ ಇಲ್ಲಿದೆ ನೋಡಿ ನಿಮ್ಮ ಸ್ನೇಹಿತರು ನಿಮ್ಮ ವಾಹನ ಕೇಳಿದರೆ ಯಾವುದೇ ಮುಜಗರ ಮತ್ತು ಬೇಸರವಿಲ್ಲದೆ ಹೇಳಿ ಹೋಗುವ ಮುನ್ನ ಪೆಟ್ರೋಲ್ ಹಾಕಿಸಿಕೊಂಡು ಹೋಗಿ ಅಂತ ಹೇಳುವುದು ಉತ್ತಮ.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ..ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *