ಮೂಲವ್ಯಾಧಿ ಹಾಗು ಕಜ್ಜಿ ಮತ್ತು ಹುಳಕಡ್ಡಿ ಜೊತೆ ಈ ರೋಗಗಳಿಗೂ ರಾಮಬಾಣ ಕಣಗಿಲೆ ಹೂ..!

Hit

ಕಣಗಿಲೆ ಹೂವಿನ ಗಿಡವು ಹಳ್ಳಿಕಡೆ ಸರ್ವೇ ಸಾಮಾನ್ಯಾವಾಗಿ ಕಾಣಸಿಗುತ್ತದೆ. ಇನ್ನು ಕಣಗಿಲೆಯ ಹೂವಿನ ಗಿಡಕ್ಕೆ ಹಳ್ಳಿಯ ಕಡೆ ಬಸವನ ಪಾದದ ಹೂವಿನ ಗಿಡ ಎಂತಲೂ ಕರೆಯುತ್ತಾರೆ. ಈ ಹೂವಿನ ಗಿಡಕ್ಕೆ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದು ಈ ಗಿಡವು ಹಲವಾರು ರೋಗಗಳನ್ನು ಗುಣಪಡಿಸುವ ವಿಶಿಷ್ಟ ಶಕ್ತಿಯನ್ನು ಹೊಂದಿದ್ದು ಇದರ ಒಂದು ಶಕ್ತಿ ಯಾರಿಗೂ ಸಹ ಅಷ್ಟೊಂದು ತಿಳಿದಿಲ್ಲ ಆಗಾಗಿ ಈ ಒಂದು ಕಣಗಿಲೆಯ ಹೂವಿನ ಗಿಡವು ವೈದ್ಯರಿಗೂ ಕೂಡ ವಾಸಿಮಾಡದ ಎಷ್ಟೋ ಕಾಯಿಲೆಗಳನ್ನು ಈ ಕಣಗಿಲೆಯ ಹೂವಿನ ಗಿಡದಿಂದ ವಾಸಿಮಾಡಬಹುದಾಗಿದೆ.

ಈ ಒಂದು ಕಣಗಿಲೆಯ ಹೂವಿನ ಗಿಡವು ಹಲವಾರು ಔಷಧೀಯ ಗುಣಗಳು ಇವೆ ಅವುಗಳನ್ನು ನಾವು ಒಂದೊಂದಾಗಿ ಈ ಒಂದು ಮಾಹಿತಿಯಲ್ಲಿ ಸಂಪೂರ್ಣವಾಗಿ ನೋಡಬಹುದಾಗಿದೆ. ಕಣಗಿಲೆಯ ತೊಗಟೆಯ ಕಷಾಯ ತಯಾರಿಕೆ ಅದಕ್ಕೆ ಸಮ ಪ್ರಮಾಣದ ಸಾಸುವೆ ಎಣ್ಣೆ ಬೆರಸಿ ತೈಲ ತಯಾರಿಸಿ ಕುಷ್ಠರೋಗಿಗಳ ಗಾಯಗಳಿಗೆ ಲೇಪಿಸಬೇಕು. ಕಜ್ಜಿಯಿಂದ ಬಳಲುವವರು ಎಳೆಯ ರಸಕ್ಕೆ ಸಾಸುವೆ ಎಣ್ಣೆ ಸೇರಿಸಿ ಕಾಯಿಸಿ ತಯಾರಿಸಿದ ತೈಲವನ್ನು ಮೇಲೆ ಹಚ್ಚುವುದ್ಕಕೆ ಉಪಯೋಗಿಸಬೇಕು. ಮೂಲವ್ಯಾಧಿಯಿಂದ ಬಳಲುವವರು ಕಣಗಿಲೆಯ ಬೇರನ್ನು ನೀರಿನಲ್ಲಿ ಅರೆದು ಲೇಪಿಸುವುದರಿಂದ ಹುಳುಕಡ್ಡಿ ವಾಸಿಯಾಗುತ್ತದೆ.

ಹುಳಕಡ್ಡಿಯಿಂದ ಬಳಲುವವರು ಕಣಗಿಲೆಯ ಎಲೆಯನ್ನು ಅರೆದು ಚೆನ್ನಾಗಿ ಲೇಪಿಸುವುದರಿಂದ ಹುಳಕಡ್ಡಿ ವಾಸಿಯಾಗುತ್ತದೆ. ಉಗುರುಸುತ್ತು ಉಂಟಾದಾಗ ಕಣಗಿಲೆ ಎಲೆಯನ್ನು ಹಾಗೂ ಎಣ್ಣೆ ಮತ್ತು ವೀಳ್ಯಕ್ಕೆ ಹಾಕುವ ಸುಣ್ಣ ಇವುಗಳನ್ನು ಸೇರಿಸಿ ಅರೆದು ಕಟ್ಟುವುದರಿಂದ ಶೀಘ್ರವಾಗಿ ಗುಣಪಡಿಸಬಹುದು.

ಕಣಗಿಲೆಯ ಎಲೆಯನ್ನು ಬಾಂಡಲಿಯಲ್ಲಿ ಹಾಕಿ ಹುರಿದು ಕರಕು ಮಾಡಿ ಅದನ್ನು ಒಂದು ಅಗಲವಾದ ತಟ್ಟೆಗೆ ಹಾಕಿ ತಕ್ಕಷ್ಟು ನಿಂಬೆಹಣ್ಣಿನ ರಸ ಹಾಕಿ ಚೆನ್ನಾಗಿ ಉಜ್ಜಿ ಮುಲಾಮು ಮಾಡಿ ನರೋಲಿ ಇರುವ ಜಾಗದಲ್ಲಿ ಪ್ರತಿದಿನ ಉಜ್ಜಿಕೊಳ್ಳುವುದರಿಂದ ನರೋಲಿ ಮಾಯವಾಗುತ್ತದೆ. ತಲೆನೋವಿನಿಂದ ಬಳಲುವವರು ಬೇರಿನ ಪುಡಿಯನ್ನು ಹಣೆಗೆ ಹಚ್ಚಿ ಉಜ್ಜುವುದರಿಂದ ನೋವು ಮಾಯವಾಗುತ್ತದೆ.

ಜ್ವರದ ತಾಪ ಅತಿಯಾಗಿರುವಾಗ ಕಣಗಿಲೆಯ ಬೇರನ್ನು ತುಂಡು ಮಾಡಿ ದಾರದಲ್ಲಿ ಕಟ್ಟಿ ಕುತ್ತಿಗೆಗೆ ಹಾಕುತ್ತಾರೆ ಇದರಿಂದ ಜ್ವರದ ತಾಪ ಕಡಿಮೆ ಆಗುತ್ತದೆ, ಹಾಗೂ ಇದಕ್ಕಾಗಿ ಬಾನುವಾರ ಮಾತ್ರ ಬೇರನ್ನು ಕೀಳುತ್ತಾರೆ. ಹಾವು ಕಚ್ಚಿದಾಗ ಬಿಳಿ ಕಣಗಿಲೆಯ ಹೂವುಗಳನ್ನು ಒಣಗಿಸಿ ಪುಡಿ ಮಾಡಿ ಸಮ ಭಾಗ ತಂಬಾಕಿನ ಪುಡಿಯೊಂದಿಗೆ ಬೆರೆಸಿ ಇದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ ನುಣ್ಣಗಿನ ಪುಡಿ ಮಾಡಿ ನಸ್ಯ ಮಾಡಿಸಬೇಕು.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ..ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *