ಸಕ್ಕರೆ ಕಾಯಿಲೆ ಅಂತ ಅದೆಷ್ಟೋ ಮಂದಿ ತುಂಬಾನೇ ತಲೆಕಿಡಿಸಿಕೊಂಡು ಹಲವು ರೀತಿಯಾದ ಔಷಧಿಗಳನ್ನು ಬಳಸುತ್ತಾರೆ ಆದ್ರೆ ಈ ಮಾವಿನ ಎಲೆ ಉಪಯೋಗ ಯಾರಿಗೂ ಗೊತ್ತಿಲ್ಲ ನೋಡಿ, ಸಕ್ಕರೆ ಕಾಯಿಲೆಗೆ ಯಾವ ರೀತಿಯಾಗಿ ಮಾವಿನ ಎಲೆ ರಾಮಬಾಣ ಅನ್ನೋದು ಇಲ್ಲಿದೆ ನೋಡಿ.
10 ರಿಂದ 15 ಮಾವಿನ ಎಲೆಗಳನ್ನು ತೆಗೆದುಕೊಳ್ಳಿ ನಂತರ ಎಲೆಗಳನ್ನು ಚೆನ್ನಾಗಿ ಕುದಿಸಿರಿ ರಾತ್ರಿವಿದೆ ಅದೇ ನೀರಿನಲ್ಲಿ ಎಲೆಗಳನ್ನು ಬಿಡಿ. ಬೆಳಗ್ಗೆ ಎದ್ದತಕ್ಷಣ ಖಾಲಿ ಹೊಟ್ಟೆಯಲ್ಲಿ ಎಲೆಗಳನ್ನು ತೆಗೆದು ನೀರಿನ್ನು ಕುಡಿಯಿರಿ. ಉತ್ತಮ ಫಲಿತಾಂಶಗಳಿಗಾಗಿ ನೀವು ಎರಡು ಅಥವಾ ಮೂರು ತಿಂಗಳ ಕಾಲ ಈ ವಿಧಾನವನ್ನು ಬಳಸಬೇಕು.
ಮಾವಿನ ಎಲೆಗಳನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಿ. ನಂತ್ರ ಅದನ್ನು ಪುಡಿ ಮಾಡಿ. ಪ್ರತಿದಿನ ಒಂದು ಚಮಚ ಈ ಪುಡಿಯನ್ನು ಸೇವನೆ ಮಾಡುವುದರಿಂದ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ. ಜ್ವರ, ಭೇದಿ, ನಿದ್ರಾಹೀನತೆ, ಉಬ್ಬಿರುವ ರಕ್ತನಾಳಗಳು, ಅಸ್ತಮಾ, ಗಂಟಲೂತ ಮತ್ತು ಶೀತಗಳ ಮತ್ತು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಮಾಡಬಹುದು. ಈ ಎಲೆಗಳು ನಿಮ್ಮ ರಕ್ತದ ಒತ್ತಡ ಕಡಿಮೆ ಮತ್ತು ನಿಮ್ಮ ರಕ್ತನಾಳಗಳನ್ನು ಬಲಪಡಿಸುವಲ್ಲಿ ಸಹಾಯಮಾಡುತ್ತದೆ.
ಮಾವಿನ ಕಾಯಿ, ಮಾವಿನ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎನ್ನುವುದನ್ನು ನಿಮಗೆ ಸಾಮಾನ್ಯವಾಗಿ ಗೊತ್ತು. ಆದ್ರೆ ಮಾವಿನ ಎಲೆಗಳಲ್ಲೂ ಕೂಡ ಸಾಕಷ್ಟು ಔಷಧಿ ಗುಣಗಳಿವೆ. ಮಾವಿನ ಎಲೆಗಳಲ್ಲಿ ಪತ್ರಹರಿತ್ತಿನ ಪ್ರಮಾಣ ಹೆಚ್ಚಾಗಿರುತ್ತದೆ. ಪತ್ರಹರಿತ್ತು ಹೆಚ್ಚಾಗಿರುವ ಎಲೆಗಳು ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಶುಭ ಕಾರ್ಯ ನಡೆಯುವ ಮನೆಯಲ್ಲಿ ಬಹಳ ಜನ ಸೇರುವುದು ಸಾಮಾನ್ಯವಾಗಿರುತ್ತದೆ. ಹಾಗೆ ಬಹಳಜನ ಸೇರಿದಾಗ ಅಷ್ಠೂ ಜನಕ್ಕೆ ಸರಿಹೊಂದುವ ಆಮ್ಲಜನಕ ವಾತಾವರಣದಲ್ಲಿ ಸೇರಿಸುವ ಸಲುವಾಗಿ ಮಾವಿನಸೊಪ್ಪು ಮತ್ತು ಬಾಳೆ ಎಲೆಗಳನ್ನು ಉಪಯೋಗಿಸುತ್ತಾರೆ.
ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ..ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.