ಮಲಬದ್ಧತೆ ಜೊತೆ ದೇಹದ ಬೊಜ್ಜು ಕರಗಿಸುವ ತಾಳೆಹಣ್ಣು ಈ ಹತ್ತು ರೋಗಗಳಿಗೂ ರಾಮಬಾಣ..!

Hit

ಸಾಮಾನ್ಯವಾಗಿ ರಸ್ತೆಯ ಬದಿಯಲ್ಲಿ ಕಪ್ಪಗಿರುವ ಈ ಹಣ್ಣನ್ನು ಮಾರುತ್ತಿರುವುದನ್ನು ನೋಡಿರುತ್ತೇವೆ, ಅದೇ ತಾಟಿಲಿಂಗು ಹಣ್ಣು ಅಥವಾ ತಾಳೆಹಣ್ಣು. ಈ ಹಣ್ಣನ್ನು ಸಾಮಾನ್ಯವಾಗಿ ಬೇಸಿಗೆಯ ಸಂದರ್ಭದಲ್ಲಿ ಮಾರುತ್ತಿರುವುದನ್ನು ಕಂಡಿರುತ್ತೇವೆ. ಈ ಹಣ್ಣು ದೇಹಕ್ಕೆ ತುಂಬಾ ತಂಪು. ಆದರೆ ಈ ಹಣ್ಣು ಇನ್ನು ಹಲವಾರು ಆರೋಗ್ಯಕ್ಕೆ ಸಂಭಂದಿಸಿದ ಸಮಸ್ಯೆಗಳಿಗೆ ಪರಿಹಾರವಾಗಿದೆ. ಹಾಗಾದರೆ ಈ ಹಣ್ಣನ್ನು ತಿನ್ನುವುದರಿಂದ ಏನೆಲ್ಲಾ ಪ್ರಯೋಜನ ಇರಬಹುದು ನೋಡೋಣ ಬನ್ನಿ.

ತಾಟಿಲಿಂಗು ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್ ಬಿ, ಕಬ್ಬಿಣದಂಶ ಮತ್ತು ಕ್ಯಾಲ್ಸಿಯಂ ಅಂಶಗಳ ಸಾಗರವೇ ಅಡಗಿದೆ, ಈ ಹಣ್ಣನ್ನು ತಿನ್ನುವವರಿಗೆ ವಾಕರಿಕೆಯ ಭಾವನೆಗಳು ಬರಲಾರವು ಜೊತೆಯಲ್ಲಿ ಬಿಸಿಲಿನಲ್ಲಿ ಸಾಮಾನ್ಯವಾಗಿ ಕಾಡುವ ತಲೆಸುತ್ತು ಹಾಗೂ ಸುಸ್ತು ನಂತಹ ಸಮಸ್ಯೆಗಳು ದೂರವಾಗಿ ಬಿಡುತ್ತದೆ. ಹಲವು ರೀತಿಯ ಹೊಟ್ಟೆಯ ನೋವು ಅಥವಾ ಹೊಟ್ಟೆಯ ಸಮಸ್ಯೆಗಳಿಗೆ ನೈಸರ್ಗಿಕ ಮನೆ ಮದ್ದಾಗಿ ತಾಟಿಲಿಂಗು ಉತ್ತಮ ಉಪಯೋಗಗಳನ್ನು ನೀಡುತ್ತದೆ.

ನಿಮಗೆ ಬಹಳ ಬೇಗ ಬೆವರುವ ಅಥವಾ ದಣಿವಾಗುವ ಸಮಸ್ಯೆಗಳೇನಾದರೂ ಇದ್ದರೆ ನೀವು ತಪ್ಪದೇ ತಾಟಿಲಿಂಗು ಹಣವನ್ನು ಸೇವಿಸಲೇಬೇಕು ಇದರಿಂದ ನಿಮ್ಮ ಈ ಸಮಸ್ಯೆಗಳು ಬಹುಬೇಗ ದೂರವಾಗುತ್ತದೆ. ಅಮ್ಮ ಅಥವಾ ದಡಾರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ತಾಟಿಲಿಂಗು ಒಳ್ಳೆಯ ಮದ್ದಿನ ಆಹಾರ, ಈ ಹಣ್ಣನ್ನು ಪ್ರತಿ ದಿನ ಸೇವಿಸಿದರೆ ಅಮ್ಮ ಅಥವಾ ದಡಾರ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು.

ಬೇಸಿಗೆಯಲ್ಲಿ ತೂಕ ಇಳಿಸಲು ಬಯಸುವವರಿಗೆ ತಾಟಿಲಿಂಗು ಉತ್ತಮ ಆಹಾರ, ವ್ಯಾಯಾಮದ ಜೊತೆಯಲ್ಲಿ ಈ ಹಣ್ಣನ್ನು ತಿನ್ನಲು ಶುರು ಮಾಡಿದರೆ ಹೊಟ್ಟೆ ಸುತ್ತಲಿನ ಬೇಡದ ಬೊಜ್ಜು ಗಳು ಕರಗುತ್ತವೆ, ಹಾಗೂ ಹೊಟ್ಟೆಯ ಹಸಿವನ್ನು ಸಹ ಕಡಿಮೆ ಮಾಡುತ್ತದೆ, ಇದರಿಂದ ಬೇಗನೆ ದೇಹದ ತೂಕ ಇಳಿಸಿಕೊಳ್ಳಬಹುದು.

ಗರ್ಭಾವಸ್ಥೆ ಸಮಯದಲ್ಲಿ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಾದ ಅಜೀರ್ಣ, ಮಲ ಬದ್ಧತೆ ಹಾಗೂ ಆಮ್ಲೀಯತೆ ಇಂತಹ ಸಮಸ್ಯೆಗಳನ್ನು ತಾಟಿಲಿಂಗು ಬಹುಬೇಗ ನಿವಾರಿಸುತ್ತದೆ. ಅಷ್ಟೇ ಅಲ್ಲದೆ ತಾಟಿಲಿಂಗು ಹಣ್ಣನ್ನು ತಿನ್ನುವವರು ಹೃದಯಾಘಾತದಿಂದ ಸಹ ದೂರವುಳಿಯಬಹುದು, ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗದಂತೆ ಕಾಯ್ದುಕೊಳ್ಳಲು ಸಹಕರಿಸುತ್ತದೆ.

ದೇಹದಲ್ಲಿನ ಸಕ್ಕರೆ ಅಂಶವನ್ನು ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ ಹಾಗೂ ದೇಹಕ್ಕೆ ಬೇಕಾದ ಖನಿಜಗಳು ಮತ್ತು ಪೋಷಕಾಂಶಗಳನ್ನು ಸರಿಯಾಗಿ ಒದಗಿಸಿ, ಸಕ್ಕರೆ ಕಾಯಿಲೆಯಿಂದ ದೂರ ಉಳಿಯುವಂತೆ ಮಾಡುತ್ತದೆ.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *