ಎಲ್ಲರ ಮನೆಯಲ್ಲಿ ತಮ್ಮ ಮಕ್ಕಳು ಒಂದು ಒಳ್ಳೆ ಸರ್ಕಾರಿ ಕೆಲಸಕ್ಕೆ ಹೋಗಬೇಕು ಅನ್ನೋ ಅಸೆ ಪ್ರತಿಯೊಬ್ಬ ತಂದೆ ತಾಯಿಗೂ ಇರುತ್ತದೆ ಅದರಂತೆ ಈ ಯುವ ರೈತನ ತಂದೆ ತಾಯಿಯ ಅಸೆ ಕೂಡ ಅದೇ ಆಗಿತ್ತು ತನ್ನ ಮಗ ಸರ್ಕಾರಿ ಕೆಲ್ಸಕ್ಕೆ ಹೋಗಬೇಕು ಅನ್ನೋದು ಅದರಂತೆ ಈ ಯುವ ರೈತ ಸರ್ಕಾರಿ ಕೆಲ್ಸಕ್ಕೆ ಹೋದ ಅದು ಸರಕಾರಿ ಎಂಜಿನಿಯರ್ ಆಗಿ ಆದ್ರೆ ಅಲ್ಲಿ ಈ ಯುವ ರೈತ ಮಾಡಿದ್ದೆ ಬೇರೆ.
ತನ್ನ ಬಂದು ಬಳಗ ತಂದೆ ತಾಯಿ ಸ್ನೇಹಿತರು ಪ್ರತಿಯೊಬ್ಬರು ಹೇಳಿದ್ದು ಒಂದೇ ಮಾತು ನೀವು ಸರ್ಕಾರಿ ಕೆಲಸ ಬಿಡಬೇಡ ಅಂತ ಆದ್ರೆ ಈ ಯುವ ರೈತ ಯಾರ ಮಾತು ಕೇಳದೆ ತನ್ನ ಸರ್ಕಾರಿ ಕೆಲ್ಸಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಬಂದ ಅದಕ್ಕೆ ಕಾರಣ ಕೃಷಿ ಮೇಲೆ ವಲವಿದ್ದ ಕಾರಣ ಸರ್ಕಾರಿ ಕೆಲಸ ಬಿಟ್ಟು ಕೃಷಿ ಕಡೆ ತನ್ನ ಅಸೆ ಬಂತು, ಇದಕ್ಕೆ ಕಾರಣ ಸಹ ಇದೆ ಇವರ ಹೆಸರು ಹರೀಶ್ ಧಾಂಡೇವಿ ಅಂತ ಇವರು ಮೂಲತಃ ರಾಜಸ್ಥಾನದವರು ಒಮ್ಮೆ ದೆಹಲಿಯಲ್ಲಿ ನಡೆದ ಕೃಷಿ ವಸ್ತು ಪ್ರದರ್ಶನದಲ್ಲಿ ಭಾಗಿಯಾಗಿದ್ದರು ಅಲ್ಲಿಂದ ಇವರಿಗೆ ಕೃಷಿ ಮೇಲೆ ಹೆಚ್ಚು ಆಸಕ್ತಿ ಬಂತು ಅಂದು ಒಂದು ದೃಢ ನಿರ್ಧಾರ ತೆಗೆದುಕೊಂಡ ಹರೀಶ್ ಇಂದು ವರ್ಷಕ್ಕೆ ೨ ಕೋಟಿ ಆದಾಯದ ಮೂಲವನ್ನು ತನ್ನ ಕೃಷಿಯಲ್ಲಿ ಹೊಂದಿದ್ದಾರೆ ಹೇಗೆ ಅನ್ನೋದು ಮುಂದೆ ಹೇಳ್ತಿವಿ ನೋಡಿ.
ಛಲ ಬಿಡದೆ ತನ್ನ ಆಸೆಯಂತೆ ಕೃಷಿಯಲ್ಲಿ ತೊಡಗಿಸಿಕೊಂಡು ತಮ್ಮ ೧೨೫ ಎಕರೆ ಜಮೀನಿನಲ್ಲಿ ಅಲೋವೆರಾ ಜೊತೆಗೆ ಹಲವು ಬೆಳೆಗಳನ್ನು ಬೆಳೆಯಲು ಆರಂಭಿಸಿ ವರ್ಷಕ್ಕೆ ಒಂದೂವರೆ ಕೋಟಿ ಆದಾಯವನ್ನು ಪಡೆಯುತ್ತಿದ್ದಾರೆ. ರಾಜಸ್ಥಾನದ ಜೈಸಲ್ ಮೇರ್ ನಿಂದ ೪೫ ಕೆ. ಮೀ. ದೂರದಲ್ಲಿರುವ ಧೈಸರ್ ನಲ್ಲಿ ನ್ಯೂಟ್ರೇನೋ ಆಗ್ರೋ ಎಂಬ ಕಂಪನಿಯನ್ನು ಆರಂಭಿಸುತ್ತಾರೆ.
ತಮ್ಮ ಜಮೀನಲ್ಲಿ ಬೆಳೆದ ಅಲೋವೆರಾಕ್ಕೆ ಪತಂಜಲಿ ಕಂಪನಿ ಕಡೆಯಿಂದ ಬಹುಬೇಡಿಕೆ ಬಂದಿದೆ ಯಾಕೆ ಅಂದ್ರೆ ಇವರ ಅಲೋವೆರಾ ಒಳ್ಳೆಯ ಸಮೃದ್ಧವಾಗಿ ಮತ್ತು ಒಳ್ಳೆಯ ಇಳುವರಿ ಬಂದಿರುವ ಕಾರಣ ಪತಂಜಲಿ ಕಂಪನಿ ನೇರವಾಗಿ ಇವರ ಅಲೋವೆರಾವನ್ನು ಖರೀದಿ ಮಾಡಿ ಬಳಕೆ ಮಾಡಿಕೊಳ್ಳುತ್ತಿದೆ. ಜ್ಯೂಸ್ ಮತ್ತು ಮೆಡಿಸಿನ್ ಗಳಿಗೆ ಅತಿ ಹೆಚ್ಚು ಇವರ ಜಮೀನಿನ ಅಲೋವೆರಾ ಬಳಕೆ ಆಗುತ್ತಿದೆ ಹಾಗಾಗಿ ಇವರಿಗೆ ಹೆಚ್ಚು ಆದಾಯ ಸಿಗುತ್ತಿದೆ.
ಕಷ್ಟ ಪಟ್ಟು ಮತ್ತು ಛಲ ಬಿಡದೆ ಸಾಧಿಸುವ ಹಂಬಲ ಇದ್ರೆ ಯಾವ ಸಾಧನೆ ಮಾಡಬುದು ಅನ್ನೋದಕ್ಕೆ ಈ ಹರೀಶ್ ಧಾಂಡೇವಿ ಅವರೇ ಒಂದು ಬೆಸ್ಟ್ ಉದಾಹರಣೆ ಅನ್ನೋದರಲ್ಲಿ ಯಾವುದೇ ಮಾತಿಲ್ಲ ನೀವು ಸಹ ಏನಾದರು ಮಾಡಬೇಕು ಅನ್ನೋವ ಛಲ ಇದ್ದಾರೆ ನಮ್ಮ ಪ್ರಯತ್ನ ಬಿಡದೆ ಮುಂದೆ ಬನ್ನಿ ಒಳ್ಳೆ ಯಶಸು ಸಿಕ್ಕೇ ಸಿಗುತ್ತದೆ ಮತ್ತು ಇದರ ಬಗ್ಗೆ ನಮಗೆ ತಿಳಿದಿರುವ ಮತ್ತು ನಮಗೆ ಸಿಕ್ಕಿರುವ ಮಾಹಿತಿಯನ್ನು ಹಾಕಿದ್ದೇವೆ ಈ ಅಲೋವೆರಾ ಬೆಳೆಯುವ ಬಗ್ಗೆ ನಿಮ್ಮ ಹತ್ತಿರದ ಕೃಷಿ ಇಲಾಖೆಯಲ್ಲಿ ವಿಚಾರಾಸಿ ಮಾಹಿತಿ ಪಡೆದುಕೊಳ್ಳಿ.
ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.