ನೀರಿಗಾಗಿ ಈ ರೈತ ಮಾಡಿದ ಹೊಸ ಐಡಿಯಾ ಇಡೀ ಪ್ರಪಂಚ ಪೂರ್ತಿ ವೈರಲ್ ಆಗಿದೆ ನೋಡಿ..!

Hit

ಹೌದು ನೀರು ಇವತ್ತಿನ ದಿನಗಳಲ್ಲಿ ತುಂಬ ಕಡಿಮೆಯಾಗಿದೆ ಅದರಲ್ಲೂ ರೈತರಿಗೆ ತುಂಬ ಸಮಸ್ಯೆ ಆಗಿದೆ ಅನ್ನೋದರಲ್ಲಿ ಎರಡು ಮಾತಿಲ್ಲ ಹಾಗಾಗಿ ನೀರಿಗಾಗಿ ಈ ರೈತ ಮಾಡಿದ ಹೊಸ ಐಡಿಯಾ ಇಡೀ ಜಗತ್ತಿನ ಪೂರ್ತಿ ವೈರಲ್ ಆಗಿದೆ ನೋಡಿ. ಈ ಒಂದು ಘಟನೆ ಒರಿಸ್ಸಾ ರಾಜ್ಯದ ಮಯ್ಯುರ್ ಬನ್ ಎಂಬ ಜಿಲ್ಲೆಯ ವಾಸಿಸುತ್ತಿದ್ದ ಈ ಬಡ ರೈತನಿಗೆ ಮೂರು ಎಕರೆ ಜಮೀನು ಇತ್ತು. ಇನ್ನು‌ ಆ ಒಂದು ಜಮೀನಿನಲ್ಲಿ ಮಳೆ ಬಂದ ಮೇಲೆ ಬೆಳೆ ಹಾಕುತ್ತಿದ್ದರು ಆದರೆ ಆ ಒಂದು ಬೆಳೆಯಿಂದ ಒಂದು ರೂಪಾಯಿ ಕೂಡ ಲಾಭ ಸಿಗುತ್ತಿರಲಿಲ್ಲ. ಆತನಿಗೆ ತನ್ನ ಜೀವನ ನಡೆಸಲು ಹಾಗು ತನ್ನ ಮಕ್ಕಳನ್ನು ಸಾಕುವುದಕ್ಕೆ ತುಂಬಾನೇ ಕಷ್ಟ ಎನಿಸಿತ್ತು. ಆದರೆ ಈ ಬಡ ರೈತನ ಜಮೀನಿಂದ, ಸುಮಾರು ಎರಡು ಕಿಮೀ ದೂರದಲ್ಲಿ ಒಂದು ಚಿಕ್ಕದಾದ ನದಿಯಲ್ಲಿ ಪ್ರತಿದಿನ ನೀರು ಹರಿಯುತ್ತಿತ್ತು, ಇದ್ದನು ಗಮನಿಸಿದ ಆ ರೈತ, ಸುಮಾರು ಎರಡು ಕಿಮೀ ದೂರದಲ್ಲಿ ಹರಿಯುತ್ತಿದ್ದ ನದಿಯ ನೀರನ್ನು ಹೇಗೆ ಜಮೀನಿನ ಬಳಿ ತೆಗೆದುಕೊಂಡು ಬರುವುದು ಎಂದು ಆಲೋಚನೆ ಮಾಡಿ. ನಂತರ ಆ ಜಿಲ್ಲೆಯ ಅಧಿಕಾರಿಗಳ ಬಳಿ ಹೋಗಿ ನನ್ನ ಹಾಗೆ ವ್ಯವಸಾಯ ಮಾಡುವ ಬಡ ರೈತರಿಗೆ ನೀರಿನ ವ್ಯವಸ್ಥೆಯನ್ನು ಮಾಡಿಕೊಂಡಿ ಎಂದು ಅಲ್ಲಿನ ಅಧಿಕಾರಿಗಳ ಬಳಿ ಕೇಳಿದ.

ಆದರೆ ವರ್ಷಗಳ ಕಳೆದರು, ಯಾವೊಬ್ಬ ಅಧಿಕಾರಿಯು ರೈತರಿಗೆ ನೀರಿನ ವ್ಯವಸ್ಥೆ ಮಾಡುವ ಬಗ್ಗೆ ಸಹಾಯ ಅಲ್ಲದೆ ಯೋಚನೆ ಕೂಡ ಮಾಡಲಿಲ್ಲ. ನಂತರ ಪ್ರತಿಯೊಬ್ಬ ರೈತರಿಗೂ ಉಪಯೋಗ ಆಗಬೇಕು ಎಂದು ಒಂದು ಆಲೋಚನೆ ಮಾಡಿದ ಈ ರೈತ, ಅದೇನೆಂದರೆ ಗ್ರಾವಿಟಿ ನೀರಿನ ತೂಕದ ಸಮತೋಲನ ಆಧಾರದ ಮೇಲೆ ನೀರಿನ ಚಕ್ರವನ್ನು ತಯಾರಿಸಿದ ಈ ರೈತ, ಅದನ್ನು ತಯಾರು ಮಾಡುವುದಕ್ಕೆ ಹಳೆಯ ಕಬ್ಬಿಣದ ರಾಡ್ ಮತ್ತು ಒಂದಷ್ಟು ಮರದ ವುಡ್ ಅನ್ನು ತೆಗೆದುಕೊಂಡು.. ಅದರ ಸಹಾಯದಿಂದ ಸೈಕಲ್ ರೀತಿಯ ಚಕ್ರ ತಯಾರಿಸಿ, ಅದಕ್ಕೆ ವೇಸ್ಟ್ ಎಂದು ಬಿಸಾಕಿದ ನೀರಿನ ಬಾಟಲ್ ಗಳನ್ನ ಚಕ್ರಕ್ಕೆ ಜೋಡಿಸಿದರು. ನಂತರ ತಯಾರಿಸಿದ ನೀರಿನ ಚಕ್ರವನ್ನು ಎರಡು ಕಿಮೀ ದೂರದಲ್ಲಿದೆ ಇದ್ದ ನದಿಯ ಬಳಿ ನಿಲ್ಲಿಸಿದನ್ನು, ನೀರಿನ ಬಾಟಲ್ ಗಳು ನೀರು ಪೂರ್ತಿಯಾಗಿ ತುಂಬಿದ ಬಳಿಕ ಮೇಲಕ್ಕೆ ಹೋಗುತ್ತಿದ್ದವು.

ಇನ್ನು ನೀರಿನ ಬಾಟಲ್ ಗಳು ನೀರಿನ ತೂಕಕ್ಕೆ ಮೇಲೆ ಹೋದಂತೆ ಕೆಳಗೆ ಇರುವ ಕಾಲಿ ಬಾಟಲ್ ಗಳು‌ ನೀರು ತುಂಬಿ ಅವುಗಳು ಕೂಡ ಮೇಲೆ ಹೊಗುತ್ತಿದ್ದವು.. ಆಗ ಮೇಲಕ್ಕೆ ಹೋದ‌ ವಾಟರ್ ಬಾಟಲ್ ನ ನೀರು ಬೀದುರಿನ ಮೇಲೆ ಬೀಳುವಂತೆ ಮಾಡಿ ಆ ನೀರು ತನ್ನ ಜಮೀನಿಗೆ ಬರುವಂತೆ ಮಾಡಿದ್ದಾರೆ.. ಇನ್ನು ದಿನದ 24 ಗಂಟೆ ಸುತ್ತುತ್ತಿದ್ದ, ಈ ನೀರಿನ ಚಕ್ರಕ್ಕೆ ಯಾವುದೇ ಕರೆಂಟ್ ವ್ಯವಸ್ಥೆ ಬೇಕಾಗಿರಲಿಲ್ಲ.. ಇನ್ನು ಈ ರೈತ ಕೇವಲ ತನ್ನ ಜಮೀನಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಜಮೀನಿಗೂ ಕೂಡ ನೀರಿನ ಅನುಕೂಲ ಆಗುವಂತೆ ಈ ನೀರಿನ ಚಕ್ರವನ್ನು ತಯಾರಿಸಿದ್ದಾರೆ. ಈಗ ತಮ್ಮ ಜಮೀನಿನಲ್ಲಿ ಉತ್ತಮವಾದ ಟೊಮ್ಯಾಟೊ, ಆಲೂಗಡ್ಡೆ, ಭತ್ತ, ಈಗೆ ವರ್ಷ ಪೂರ್ತಿ ವಿಭಿನ್ನವಾದ ಬೆಳೆಯನ್ನ‌ ತೆಗೆಯುತ್ತಿದ್ದಾರೆ.‌ ಇವರು ಕೇವಲ ಎರಡನೇ ತರಗತಿ ಓದಿದರು ಕೂಡ ತನ್ನ ವಿಭಿನ್ನ ಐಡಿಯಾದಿಂದ ಬೇರೆ ರೈತರಿಗೂ ಉಪಯೋಗವಾಗವಂತಹ ಕೆಲಸವನ್ನು ಮಾಡಿದ್ದಾರೆ. ಸಂಗ್ರಹ ಬೆಂಗಳೂರು ಟಿವಿ.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *