ಛಲಗಾರ ಅಂದ್ರೆ ಒಮ್ಮೆ ಛಲ ಬಂದ್ರೆ ಏನು ಬೇಕಾದರೂ ಮಾಡುತ್ತಾರೆ ಅನ್ನೋದಕ್ಕೆ ಈ ಮಾಂಜಿಯ ಕಥೆಯೇ ಸಾಕ್ಷಿ. ಒಂದು ಊರಿನ ಜನರಿಗಾಗಿ ಈ ವ್ಯಕ್ತಿ ಮಾಡಿರುವ ಸಾಧನೆ ಅಪಾರವಾದದ್ದು, ಯಾರು ಈ ಮಾಂಜಿ ಯಾವರೀತಿಯಾದ ಸಾಧನೆ ಮಾಡಿದ್ದಾನೆ ಅನ್ನೋದು ಇಲ್ಲಿದೆ ನೋಡಿ.
ಈ ಹಿಂದೆ ಮಾಂಜಿಯ ಕಥೆಯನ್ನು ನೀವು ಒಮ್ಮೆಯಾದರೂ ಕೇಳಿರುತ್ತಿರ ತನ್ನ ಹೆಂಡತಿಗಾಗಿ ಗುಡ್ಡ ಕಡಿದು ರಸ್ತೆಯನ್ನು ನಿರ್ಮಿಸಿದ ಮಾಂಜಿ ಕಥೆ ಹಲವರಿಗೆ ಸ್ಪೋರ್ತಿಯಾಗಿತ್ತು, ಇದೀಗ ಇದೆ ರೀತಿಯಲ್ಲಿ ಕಿನ್ಯ ಮೂಲದ ವ್ಯಕ್ತಿ ಒಬ್ಬ ತನ್ನ ಊರಿನ ಜನರಿಗೆ ಅನುಕೂಲಕ್ಕಾಗಿ ಒಬ್ಬನೇ ಗುಡ್ಡ ಕಡಿದು ಒಂದು ಕಿಲೋ ಮೀಟರ್ ಉದ್ದ ರಸ್ತೆಯನ್ನು ನಿರ್ಮಿಸಿದ್ದಾನೆ.
ಕೀನ್ಯಾದ ಕಗಂಡಾ ಗ್ರಾಮದ ಬಳಿ ದಟ್ಟ ಅರಣ್ಯ ಪ್ರದೇಶವಿದೆ. ಅದರ ಬಳಿ ವಾಸಿಸುವ ಜನರಿಗೆ ಊರಿನ ಸಂಪರ್ಕ ಮಾಡೋಕೆ ಸರಿಯಾದ ರಸ್ತೆಯೇ ಇರಲಿಲ್ಲ, ತನ್ನ ಊರಿಗೆ ಯಾವುದೇ ರಸ್ತೆಗಳಿರುವುದಿಲ್ಲ ಒಂದು ಗುಡ್ಡ ಗಾಡು ಪ್ರದೇಶದಲ್ಲಿರುವಂತ ತನ್ನ ಹಳ್ಳಿಗೆ ಜನರು ಬರಲು ಹೋಗಲು ಯಾವುದೇ ರಸ್ತೆ ಇಲ್ಲದೆ ಪೇಚಾಡಬೇಕಾಗಿತ್ತು, ಹಾಗು ನೇರವಾಗಿ ರಸ್ತೆ ಇಲ್ಲದೆ ತುಂಬಾನೇ ಕಷ್ಟ ಪಡುತ್ತಿದ್ದರು. ಇದನ್ನು ಅಲ್ಲಿಯ ಸರ್ಕಾರಕ್ಕೆ ಈ ಗ್ರಾಮದ ನಿಕೋಲಸ್ ಮುಚಾಮಿ ಹಲವು ಬಾರಿ ಸರ್ಕಾರಕ್ಕೆ ಹಾಗೂ ಸ್ಥಳೀಯ ನಾಯಕರಿಗೆ ಮನವಿ ಮಾಡಿದ್ದರು ಆದರೂ ಯಾವುದೇ ಪ್ರಯೋಜನವಾಗಲಿಲ್ಲ.
ಇದರಿಂದ ಬೇಸತ್ತ ಮುಚಾಮಿ ತಾನೇ ಗುಡ್ಡ ಕಡಿದು ತನ್ನ ಊರಿನ ಜನರಿಗೆ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ, ಇದರಿಂದ ಈಗ ಈ ಊರಿನ ಜನ ಆಸ್ಪತ್ರೆ, ಮಾರುಕಟ್ಟೆಗೆ ಹಾಗು ತಮ್ಮ ಶಾಪಿಂಗ್ ವಸ್ತುಗಳನ್ನು ತರಲು ಅನುಕೂಲತೆ ಆಗಿದೆ. ವಿಶೇಷ ಏನೆಂದರೆ ತಾನು ಯಾರ ಸಹಾಯವಿಲ್ಲ ಬರಿ 6 ದಿನದಲ್ಲಿ 1 ಕಿಲೋಮೀಟರ್ ಉದ್ದ ರಸ್ತೆಯನ್ನು ನಿರ್ಮಿಸಿದ್ದು ತನ್ನ ಹಳ್ಳಿಯ ಮಕ್ಕಳಿಗೆ ವಯಸ್ಸಾದವರಿಗೆ ಅನುಕೂಲತೆಯನ್ನು ಮಾಡಿಕೊಟ್ಟಿದ್ದಾರೆ.
ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.