ಮನುಷ್ಯನಿಗೆ ಹಲವು ಖಾಯಿಲೆಗಳು ಬರುವುದು ಸಹಜ. ಅದರಲ್ಲಿ ಸಕ್ಕರೆ ಖಾಯಿಲೆಯೂ ಒಂದು. ಒಬ್ಬ ವ್ಯಕ್ತಿಗೆ ಸಕ್ಕರೆ ಖಾಯಿಲೆ ಇದೆಯೇ ಎಂದು ಪರೀಕ್ಷಿಸುವುದು ಹೇಗೆ? ಇಲ್ಲಿದೆ ನೋಡಿ ಒಂದು ಸುಲಭ ಮಾರ್ಗ. ಅಧಿಕ ಮೂತ್ರ ಮತ್ತು ಬಾಯಾರಿಕೆ: ಆಗಾಗ ಮೂತ್ರಿಸಬೇಕೆಂದೆನಿಸುವುದು ಮತ್ತು ವಿಪರೀತ ಬಾಯಾರಿಕೆ ಆಗುವುದು ಇದರ ಒಂದು ಪ್ರಮುಖ ಲಕ್ಷಣವಾಗಿದೆ. ತೂಕ ಕಡಿಮೆಯಾಗುವುದು : ಇದ್ದಕ್ಕಿದ್ದಂತೆ ತೂಕ ಕಳೆದುಕೊಂಡು ವಿಪರೀತ ತೆಳ್ಳಗಾಗುವುದು. ರಕ್ತದಲ್ಲಿ ಸೇರುವ ಅಧಿಕ ಸಕ್ಕರೆ ಅಂಶ ತೂಕ ಕಳೆದುಕೊಳ್ಳುವಂತೆ ಮಾಡುವುದು. ಹಸಿವು: ಶರೀರದಲ್ಲಿ ಸಕ್ಕರೆ ಅಂಶ ಹೆಚ್ಚು ಕಮ್ಮಿ ಆಗುವುದರಿಂದ ವಿಪರೀತ ಹಸಿವಾದ ಅನುಭವವಾಗುತ್ತದೆ.
ಚರ್ಮದ ಸಮಸ್ಯೆ: ಒಣಗಿದ ಚರ್ಮ ಅಥವಾ ತುರಿಕೆ ಇದ್ದರೆ, ಅದು ಸಕ್ಕರೆ ಕಾಯಿಲೆಯ ಒಂದು ಲಕ್ಷಣವಾಗಿದೆ. ಹಾಗೆ ಶರೀರದ ಯಾವುದೇ ಭಾಗದಲ್ಲಾದರೂ, ಸಣ್ಣ ಗಾಯವಾದರೂ, ಬೇಗನೇ ಗುಣವಾಗದೇ ವಾರಗಟ್ಟಲೆ ಕೀವು ತುಂಬಿದಂತಿರುವುದು. ಸುಸ್ತು: ಮಧುಮೇಹ ಅಂಟಿಕೊಂಡರೆ ಬೇಗನೇ ಸುಸ್ತಾಗುತ್ತೀರಿ. ಅಲ್ಲದೆ ಬೇಗನೇ ಸಿಟ್ಟಿಗೇಳುತ್ತೀರಿ. ಮತ್ತು ಕಣ್ಣಿನ ಭಾಗದಲ್ಲಿ ಸಕ್ಕರೆ ಅಂಶ ಸೇರಿಕೊಳ್ಳುವುದರಿಂದ ಆರಂಭದ ಹಂತದಲ್ಲಿ ಮಂದ ದೃಷ್ಟಿ ಸಮಸ್ಯೆ ಕಾಡಬಹುದು.
ಎಕ್ಕದ ಎಲೆಗಳನ್ನು ತೆಗೆದುಕೊಂಡು ಪಾದಗಳಿಗೆ ಸ್ಪರ್ಶಿಸಬೇಕು. ಇದಕ್ಕಾಗಿ ಎರಡು ಎಕ್ಕದ ಎಲೆಗಳಿದ್ದರೆ ಸಾಕು. ಅವನ್ನು ಕಟ್ ಮಾಡಿ ಪಾದಗಳ ಕೆಳಗೆ ಸುತ್ತಿ ಇಟ್ಟುಕೊಳ್ಳಬೇಕು. ಈ ಎಲೆಗಳನ್ನು ಶೂ ಅಥವಾ ಸಾಕ್ಸ್‌ಗಳಿಂದ ಸುತ್ತಿದರೆ ಉತ್ತಮ. ಈ ರೀತಿ ಎರಡೂ ಕಾಲುಗಳ ಕೆಳಗೆ ಇಟ್ಟುಕೊಂಡು ಬೆಳಗ್ಗಿನಿಂದ ಸಂಜೆತನಕ ಇಟ್ಟುಕೊಳ್ಳಬೇಕು. ಬಳಿಕ ಅದನ್ನು ತೆಗೆದು ಪಾದಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
ಈ ರೀತಿ ಒಂದು ವಾರದ ಕಾಲ ಮಾಡಬೇಕು. ಪ್ರತಿ ಬಾರಿಯೂ ಹೊಸ ಎಲೆಗಳನ್ನೇ ಬಳಸಬೇಕು. ಒಂದು ವಾರದ ಬಳಿಕ ಬ್ಲಡ್ ಶುಗರ್ ಪರೀಕ್ಷಿಸಿಕೊಂಡರೆ ಅಚ್ಚರಿಯ ಪಲಿತಾಂಶವನ್ನ ಕಾಣಬಹುದು. ಆದರೆ ನಿಮ್ಮ ಶುಗರ್ ಲೆವೆಲ್ಸ್ ಕಡಿಮೆಯಾಗುವ ತನಕ ಇದನ್ನು ಮುಂದುವರೆಸುವುದು ಉತ್ತಮ.
ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.