ರಕ್ತ ಕ್ಯಾನ್ಸರ್,ಸಕ್ಕರೆ ಕಾಯಿಲೆ, ರಕ್ತದೊತ್ತಡ ಹೀಗೆ ಹಲವಾರು ದೊಡ್ಡ ದೊಡ್ಡ ರೋಗಗಳಿಗೆ ರಾಮಬಾಣ ಈ ಹೂವು..!

Hit

ಈ ಸದಾಪುಷ್ಪಾವನ ಗಣೇಶನ ಹೂವು ಸಹ ಎಂದು ಹೇಳಾಗುತ್ತದೆ. ಈ ಹೂವು ನಿಮ್ಮ ಮನೆಯ ಸುತ್ತ ಮುತ್ತ ನೋಡಿರುತ್ತೀರಾ. ಅಷ್ಟೇ ಯಾಕೆ ಪೂಜೆಗೂ ಬಳಸಿರುತ್ತೀರಾ. ಈ ಚಿಕ್ಕ ಹೂವು ಎಂತ ದೊಡ್ಡ ದೊಡ್ಡ ಕಾಯಿಲೆಗಳಿಗೆ ರಾಮಬಾಣವಾಗಿದೆ ಅನ್ನೋದು ಇಲ್ಲಿದೆ ನೋಡಿ. ಸದಾಪುಷ್ಪವು 66 ಬಗೆಯ ಕ್ಷಾರಪದಾರ್ಥಗಳನ್ನು ಹೊಂದಿದೆ. ಸದಾಪುಷ್ಪವನ್ನು ಸಂಸ್ಕರಿಸಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಎಲೆಗಳಲ್ಲಿ ದೊರಕುವ ವಿನ್‍ಕ್ರಿಸ್ಟಿನ್ ಮತ್ತು ವಿನ್‍ಬ್ಲಾಸ್ಟಿನ್‍‍ನನ್ನು ರಕ್ತದ ಕ್ಯಾನ್ಸರ್ ನ ನಿವಾರಣೆಯಲ್ಲಿ ಬಳಸುತ್ತಾರೆ. ಮಧುಮೇಹ ರೋಗದ ನಿಯಂತ್ರಕವಾಗಿ ಬಳಸುತ್ತಾರೆ. ಎಳೆ ಮಗುವಿನ ಹೊಟ್ಟೆನೋವು ನಿವಾರಣೆಗೆ ಎಲೆಗಳ ರಸವನ್ನು ಉಪಯೋಗಿಸುತ್ತಾರೆ. ರಕ್ತದ ಒತ್ತಡದ ಸಮಸ್ಯೆಯಲ್ಲೂ ಸದಪುಷ್ಪದ ಕ್ಷಾರವನ್ನು ಬಳಸುತ್ತಾರೆ.

ರಕ್ತದ ಕ್ಯಾನ್ಸರ್ ವ್ಯಾದಿಯಲ್ಲಿ: ಒಂದು ಹಿಡಿ ಎಲೆಗಳನ್ನು ತಂದು ನೆರಳಿನಲ್ಲಿ ಚೆನ್ನಾಗಿ ಒಣಗಿಸಿ ಚೂರ್ಣ ಅಡುವುದು. ಅರ್ಧ ಟೀ ಚಮಚ ಚೂರ್ಣವನ್ನು ಒಂದು ಚೆಂಬು ನೀರಿಗೆ ಹಾಕಿ ಕಾಯಿಸಿ ಆರಿಸಿ ಕುಡಿಯುವುದು. 3ಟೀ ಚಮಚ ದಿವಸಕ್ಕೆ 2ವೇಳೆ ಬೆಳಿಗ್ಗೆ ಮತ್ತು ಸಾಯಂಕಾಲ. ಇಡೀ ಮಾನವಕೋಟಿಯನ್ನು ರಕ್ತದ ಕ್ಯಾನ್ಸರ್‍ನಿಂದ ಉಳಿಸುವ ಸಾಮಾಥ್ಯ ಈ ಗಿಡಕ್ಕಿದೆ ಅಂದರೆ ಅತಿಶಯೋಕ್ತಿಯಾಗಲಾರದು.

ಸಕ್ಕರೆ ಕಾಯಿಲೆಯಲ್ಲಿ: ಈ ಗಿಡದ ನಾಲ್ಕೈದು ಹಸಿರೆಲೆಗಳನ್ನು ತಂದು ಚೆನ್ನಾಗಿ ತೊಳೆದು ಪ್ರತಿನಿತ್ಯ ಬೆಳಗ್ಗೆ ತಿನ್ನುವುದು. ಅಥವಾ ಬರಿಹೊಟ್ಟೆಯಲ್ಲಿ ನಿತ್ಯ ಪುಷ್ಟಿ ಹೂಗಳನ್ನು ಅಗೆದು ತಿನುವುದಿ. ನಾಲ್ಕು ಬಿಳೀ ಪುಷ್ಪವನ್ನು ಅರ್ಧ ಬಟ್ಟಲು ನೀರಿಗೆ ಹಾಕಿ ಕಾಯಿಸಿ ಕಾಲು ಬಟ್ಟಲು ಕಷಾಯವನ್ನು ತಣ್ಣಗೆ ಮಾಡಿ ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಸೇವಿಸುವುದು.

ಅಧಿಕ ರಕ್ತ ಒತ್ತಡದಲ್ಲಿ: ನಿತ್ಯಪುಷ್ಟಿ ಎಲೆಗಳನ್ನು ತಂದು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿಕೊಳ್ಳುವುದು. ಒಂದು ಟೀ ಚಮಚ ಚೂರ್ಣವನ್ನು ಒಂದು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಕಷಾಯ ಮಾಡುವುದು. ತಣ್ಣಗಾದ ಮೇಲೆ 1/8 ಬಟ್ಟಲು ಕಷಾಯವನ್ನು ಸೇವಿಸುವುದು.

ಸುಟ್ಟ ಗಾಯ ಮತ್ತು ಬೊಬ್ಬಗಳಿಗೆ: ನಿತ್ಯಪುಷ್ಟಿಯ ಒಂದು ಹಿಡಿ ಹಸಿ ಎಲೆಗಳನ್ನು ತಂದು ಚೆನ್ನಾಗಿ ರಸ ತೆಗೆಯುವುದು ಈ ರಸದಲ್ಲಿ ಸ್ವಲ್ಪ ಹಸಿ ಅಕ್ಕಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಮಡಿ ಗಾಯದ ಮೇಲೆ ಮಂದವಾಗಿ ಲೇಪಿಸುವುದು.

ಬೇಧಿ ಮತ್ತು ರಕ್ತ ಭೇಧಿಯಲ್ಲಿ: 10ಗ್ರಾಂ ನಿತ್ಯಪುಷ್ಟೀಯ ಹಸಿರೆಲೆಗಳನ್ನು ತಂದು ಚೆನ್ನಾಗಿ ಕಾಯಿಸಿ ಕಷಾಯ ಮಾಡುವುದು. ತಣ್ಣಗಾದ ಮೇಲೆ ಈ ಕಷಾಯವನ್ನು ಎರಡು ಭಾಗ ಮಾಡಿ ಬೆಳಿಗ್ಗೆ ಮತ್ತು ಸಾಯಂಕಾಲ ಸೇವಿಸುವುದು. ಹೀಗೆ 5 ರಿಂದ 7 ದಿವಸ ಉಪಚಾರವನ್ನು ಮುಂದುವರೆಸುವುದು. ಮಲಬದ್ದತೆಯನ್ನು ಸಹ ನಿವಾರಿಸಬಲ್ಲ ಗುಣ ಈ ಮೂಲಿಕೆಗೆ ಇದೆ ಎಂದುತಿಳಿದು ಬಂದಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *