ರಾಬರ್ಟ್ ಸಿನಿಮಾದ `ಕಣ್ಣು ಹೊಡಿಯಾಕ’ ಹಾಡಿನ ತೆಲುಗು ವರ್ಷನ್ `ಕಣ್ಣೇ ಅದಿರಿಂದಿ’ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೈದ್ರಾಬಾದ್‍ನಲ್ಲಿ ರಾಬರ್ಟ್ ಪ್ರೀ ರಿಲೀಸ್ ಇವೆಂಟ್‍ನಲ್ಲಿ ಅಕ್ಷರಶಃ ಮ್ಯಾಜಿಕ್ ಕ್ರಿಯೇಟ್ ಮಾಡಿದ ಧ್ವನಿ ಈಗ ದೇಶವ್ಯಾಪಿ ಕ್ರಶ್ ಆಗಿದೆ. ಆ ಧ್ವನಿಯ ಗಾಯಕಿ ಮಂಗ್ಲಿ ಅವರದ್ದು, ರಾತ್ರೋರಾತ್ರಿ ಕರ್ನಾಟಕದ ಕ್ರಶ್ ಆಗಿರುವ `ಕಣ್ಣೇ ಅದಿರಿಂದಿ’ ಗಾಯಕಿ, ಕಪ್ಪು ಸುಂದರಿ ಮಂಗ್ಲಿಗೆ ಕ್ಲೀನ್‍ಬೋಲ್ಡ್ ಆಗಿದ್ದಾರೆ.
ಇದೇ ಧ್ವನಿ ಈಗ ಕೋಟಿ ಕೋಟಿ ಮೊಬೈಲ್‍ಗಳ ಖಾಯಂ ಸ್ಟೇಟಸ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಶೇರ್ ಆಗುತ್ತಿದೆ. ಈಗಾಗಲೇ ಮಂಗ್ಲಿ ಯಾರು ಎಂದು ತಿಳದುಕೊಳ್ಳಲು ನೆಟ್ಟಿಗರು ಹುಡುಕಾಟ ನಡೆಸಿದ್ದಾರೆ. ಈ ಹಾಡು ಹಾಡಿದ ಗಾಯಕಿ ಹಾಡು, ನಟನೆ, ನೃತ್ಯ ನಿರೂಪಣೆಯಲ್ಲಿ ಮಂಗ್ಲಿ ಆಂಧ್ರದದಲ್ಲಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲೂ ಅನೇಕ ಕಾರ್ಯಕ್ರಮಗಳನ್ನ ಮಾಡಿದ್ದಾರೆ. ಬಂಜಾರಾ ಸಮುದಾಯದ ಮಂಗ್ಲಿ ಶಾಲಾ ದಿನಗಳಲ್ಲೇ ಹಾಡನ್ನು ಹಾಡಿ ಸೈ ಎನಿಸಿಕೊಂಡಿದ್ದರು. ಆರಂಭದಲ್ಲಿ ಆಲ್ಬಂಗಳಲ್ಲಿ ಹಾಡೋಕೆ ಶುರು ಮಾಡಿ ಮುಂದೆ ಲೈವ್ ಪರ್ಫಾಮನ್ಸ್, ಆಂಕರಿಂಗ್, ಡಾನ್ಸ್ ಮಾಡುತ್ತಾ ಫೇಮಸ್ ಆಗಿದ್ದಾರೆ.
ಕೃಷ್ಣವರ್ಣದ ಈ ಸುಂದರಿ ಮುಖದ ಮೇಲೆ ಹೊಳೆಯುವ ಬೊಟ್ಟು, ಎಲ್ಲಾ ಸೇರಿ ಮಂಗ್ಲಿಗೆ ನೆಟ್ಟಿಗರು ಕ್ಲೀನ್ ಬೌಲ್ಡ್ ಆಗಿದ್ದಾರೆ. ಪ್ರತೀ ಸೀಸನ್‍ಲ್ಲಿ ಒಂದೊಂದು ಕ್ರಶ್ ಹುಟ್ಟುಕೊಳ್ಳುತ್ತೆ ಅಂತಾರಲ್ಲ, ಹಾಗೆ ಸದ್ಯಕ್ಕೆ ಭಾರತದ ಕ್ರಶ್ ಆಗಿದ್ದಾರೆ ಗಾಯಕಿ ಮಂಗ್ಲಿ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.