ನೀವು ಹುಟ್ಟಿದ ದಿನಾಂಕದ ಮೇಲೆ ಗೊತ್ತಾಗುತ್ತೆ ನಿಮ್ಮದು ಲವ್‌ ಮ್ಯಾರೇಜಾ ಅಥವಾ ಅರೆಂಜ್ಡ್‌‌ ಮ್ಯಾರೇಜಾ ಅಂತ..!

Hit

ಜೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕದ ಆಧಾರದ ಮೇಲೆ ಜೀವನದ ಗುಟ್ಟನ್ನು ಕಂಡು ಹಿಡಿಯಬಹುದು . ವ್ಯಕ್ತಿಗಳ ಜನ್ಮ ದಿನಾಂಕ ಆಧರಿಸಿ ಅವರು ಲವ್‌ ಮ್ಯಾರೇಜ್‌ ಆಗುತ್ತಾರಾ, ಅರೆಂಜ್ ಮ್ಯಾರೇಜ್ ಆಗ್ತಾರೋ ಅನ್ನೋದನ್ನು ತಿಳಿಯಬಹುದು. ನಿಮ್ಮ ಹುಟ್ಟಿದ ದಿನಾಂಕ 7 ಆಗಿದ್ದರೆ ನಿಮ್ಮ ಸಂಖ್ಯೆ 7, ನಿಮ್ಮ ಹುಟ್ಟಿದ ದಿನಾಂಕ 12 ಆಗಿದ್ದರೆ 1+2 = 3. ಹಾಗಿದ್ದರೆ ನಿಮ್ಮ ಮೂಲಂಕ 3 ಆಗುತ್ತದೆ. ಅದೇ ರೀತಿ ನಿಮ್ಮ ಹುಟ್ಟಿದ ದಿನಾಂಕ 27 ಆಗಿದ್ದರೆ 2+7=9. ನಿಮ್ಮ ಸಂಖ್ಯೆ 9 ಆಗಿರುತ್ತದೆ. ಈಗ ನೋಡಿ ನಿಮ್ಮದು ಲವ್‌ ಅಥವಾ ಅರೇಂಜ್‌ ಆಗುವುದೇ ಎಂದು…

ಸಂಖ್ಯೆ 1 : ಸಂಖ್ಯೆ 1ನ್ನು ಸೂರ್ಯ ಎಂದು ಹೇಳಲಾಗುತ್ತದೆ. ಒಂದು ನಂಬರ್‌ನವರು ತುಂಬಾ ನಾಚಿಕೆ ಸ್ವಭಾವದವರಾಗಿರುತ್ತಾರೆ. ಇವರು ಯಾವತ್ತೂ ಪ್ರೀತಿಯನ್ನು ತಿಳಿಸುವುದಿಲ್ಲ. ಇದರಿಂದಾಗಿ ಲವ್‌ ಮ್ಯಾರೇಜ್‌ನಿಂದ ಇವರು ದೂರ ಇರುತ್ತಾರೆ.

ಸಂಖ್ಯೆ 2 : ಸಂಖ್ಯೆ 2ನ್ನು ಚಂದ್ರ ಎಂದು ಹೇಳಲಾಗುತ್ತದೆ. ಇವರಿಗೆ ತುಂಬಾ ನಿಧಾನವಾಗಿ ಪ್ರೀತಿ ಉಂಟಾಗುತ್ತದೆ. ಒಂದು ವೇಳೆ ಪ್ರೀತಿಯಲ್ಲಿ ಗಂಭೀರವಾಗಿ ಬಿದ್ದರೆ ಲವ್‌ ಮ್ಯಾರೇಜ್‌ ಆಗುವುದು ಖಂಡಿತಾ.

ಸಂಖ್ಯೆ 3 : ಗುರು ಸಂಖ್ಯೆ ಮೂರರ ದೇವರು. ಈ ಸಂಖ್ಯೆಯವರು ಲವ್‌ ಮ್ಯಾರೇಜ್‌ನಲ್ಲಿ ಹೆಚ್ಚಾಗಿ ಸಫಲರಾಗುತ್ತಾರೆ. ಆದರೆ ಇವರಿಗೆ ಸ್ವಲ್ಪ ಸಹಾಯದ ಅವಶ್ಯಕತೆಯಿದೆ. ನಂತರ ಅವರು ತಮ್ಮ ಪ್ರೀತಿಯನ್ನು ಮದುವೆಯವರೆಗೂ ತೆಗೆದುಕೊಂಡು ಹೋಗುತ್ತಾರೆ. ಇವರ ವೈವಾಹಿಕ ಜೀವನವೂ ಸಫಲವಾಗಿರುತ್ತದೆ.

ಸಂಖ್ಯೆ 4 : ಇದನ್ನು ರಾಹು ಎಂದು ಹೇಳಲಾಗುತ್ತದೆ. ಇವರು ಒಬ್ಬರಿಗಿಂತ ಹೆಚ್ಚು ಜನರನ್ನು ಪ್ರೀತಿ ಮಾಡುತ್ತಾರೆ. ಅಂದರೆ ಇವರು ಯಾವತ್ತೂ ಪ್ರೇಮ ವಿವಾಹದ ಬಗ್ಗೆ ಗಂಭೀರವಾಗಿ ಯೋಚನೆ ಮಾಡುವುದಿಲ್ಲ. ಆದರೆ ತಮ್ಮ ಸ್ವಭಾವ ಬದಲಾವಣೆ ಮಾಡಿದರೆ ಉತ್ತಮ ಪ್ರೇಮಿ ಆಗಬಹುದು.

ಸಂಖ್ಯೆ 5 : ಇದನ್ನು ಬುಧ ಎಂದು ಹೇಳಲಾಗುತ್ತದೆ. ಇವರು ಪಾರಂಪರಿಕ ಸಂಬಂಧವನ್ನು ಸರಿದೂಗಿಸಿಕೊಂಡು ಹೋಗಲು ನೋಡುತ್ತಾರೆ. ಇವರು ಮನೆಯವರ ಒಪ್ಪಿಗೆ ಪಡೆದು ವಿವಾಹವಾಗುತ್ತಾರೆ. ಇವರ ಕುಂಡಲಿಯಲ್ಲಿ ಯಶಸ್ವಿ ವೈವಾಹಿಕ ಜೀವನ ಅಥವಾ ಪ್ರೇಮ ವಿವಾಹದ ಯೋಗ ಇದೆ.

ಸಂಖ್ಯೆ 6 : 6 ಸಂಖ್ಯೆಯನ್ನು ಶುಕ್ರ ಎಂದು ಹೇಳಲಾಗುತ್ತದೆ. ಇವರು ಪ್ರೇಮ ವಿವಾಹವಾಗುತ್ತಾರೆ. ಇವರು ಒಂದಕ್ಕಿಂತ ಹೆಚ್ಚು ಪ್ರೇಮ ಸಂಬಂಧ ಹೊಂದಿರುತ್ತಾರೆ. ಆದುದರಿಂದ ಕೆಲವೊಮ್ಮೆ ಸೂಕ್ತ ಸಂಗಾತಿಯನ್ನು ಕಳೆದುಕೊಳ್ಳುತ್ತಾರೆ. ಈ ಸಂಖ್ಯೆಯವರಲ್ಲಿ 80 ಶೇಕಡಾ ಜನರದ್ದು ಪ್ರೇಮ ವಿವಾಹವಾಗುತ್ತದೆ.

ಸಂಖ್ಯೆ 7 : 7 ನಂಬರ್‌ ಕೇತು ಎಂದು ಹೇಳಲಾಗುತ್ತದೆ. ಇವರು ಸಂಕುಚಿತ ಸ್ವಭಾವ ಹೊಂದಿರುತ್ತಾರೆ. ಇವರು ತಮ್ಮ ಸ್ಟೇಟಸ್‌ಗೆ ಅನುಗುಣವಾಗಿ ಪ್ರೇಮ ವಿವಾಹವಾಗಲು ಬಯಸುತ್ತಾರೆ.

ಸಂಖ್ಯೆ 8 : ಶನಿಯ ಸಂಖ್ಯೆ ಇದಾಗಿದೆ. ಈ ಸಂಖ್ಯೆಯವರು ಕಡಿಮೆ ಪ್ರೇಮ ಸಂಬಂಧ ಹೊಂದುತ್ತಾರೆ. ಆದರೆ ಒಂದು ವೇಳೆ ಪ್ರೀತಿ ಮಾಡಿದರೆ ಸಾಯುವವರೆಗೂ ತಮ್ಮ ಪ್ರೀತಿಯನ್ನು ನಿಭಾಯಿಸುತ್ತಾರೆ.

ಸಂಖ್ಯೆ 9 : ಇದನ್ನು ಮಂಗಳ ಎಂದು ಹೇಳಾಗುತ್ತದೆ. ಮಂಗಳಪ್ರಧಾನವಾದ ಈ ವ್ಯಕ್ತಿ ಯಾವುದೇ ರೀತಿಯ ವಿವಾದದಲ್ಲಿ ಬೀಳಲು ಇಷ್ಟಪಡೋದಿಲ್ಲ. ಪ್ರೇಮದಲ್ಲಿ ವಿವಾದಗಳು ಇರುತ್ತವೆ, ಆದರೆ ಈ ಜನರು ಪ್ರೀತಿಗೆ ಸಂಬಂಧಿಸಿದಂತೆ ಉದಾಸೀನರಾಗುತ್ತಾರೆ. ಹೃದಯದಲ್ಲಿ ತುಂಬಾ ಇಚ್ಛೆ ಇರುತ್ತದೆ, ಆದರೆ ಹೆಚ್ಚು ಭಯ ಪಡುತ್ತಾರೆ. ಇವರ ಪ್ರೇಮ ವಿವಾಹ ನಡೆಯುವುದು ಕಷ್ಟ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *