ರೈತ ಮನಸು ಮಾಡಿದರೆ ಏನು ಬೇಕಾದರೂ ಮಾಡಬಹದು ಅನ್ನೋದಕ್ಕೆ ಈ ರೈತನೇ ಸಾಕ್ಷಿ ಹೇಗೆ ಈ ರೈತ ಇಂತಹ ಸಾಧನೆ ಮಾಡಿದ ಮತ್ತು ಯಾವ ರೀತಿಯಾಗಿ ಯಾವುದೇ ಖರ್ಚಿಲ್ಲದೆ ಬತ್ತಿ ಹೋದ ಬೋರ್‌ವೆಲ್ ನಲ್ಲಿ ಮತ್ತೆ ನೀರು ಭರಿಸವುದನ್ನು ಕಂಡುಹಿಡಿದ ಅನ್ನೋದು ಇಲ್ಲಿದೆ ನೋಡಿ.
ಇಲ್ಲೊಂದು ಹೊಸ ವಿಧಾನವನ್ನು ಕೃಷಿಕರೊಬ್ಬರು ಕಂಡುಹಿಡಿದಿದ್ದಾರೆ. ಈ ವಿಧಾನದಿಂದ ಒಂದು ರುಪಾಯಿ ಕೂಡ ಖರ್ಚಿಲ್ಲದೆ ಅತ್ಯಂತ ಸುಲಭ ವಿಧಾನದಲ್ಲಿ ಬೋರ್‌ವೆಲ್ ರೀಚಾರ್ಜ್ ಮಾಡಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಂತಹ ಸಾಹಸ ಮಾಡಿದ ಬಂಟ್ವಾಳದ ಬಳ್ಳಮಜಲು ನಿವಾಸಿ ಬಿ.ಟಿ.ನಾರಾಯಣ ಭಟ್ ರೈತ ತಮ್ಮ ಕೃಷಿ ತೋಟದಲ್ಲಿ ಕೊಳವೆಬಾವಿಗಳಿಗೆ ಈ ಜಲಮರುಪೂರಣ ವಿಧಾನವನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರದೇ ಕಲ್ಪನೆಯಲ್ಲಿ ಈ ನೂತನ ವಿಧಾನವನ್ನು ಕಂಡುಕೊಂಡಿದ್ದಾರೆ.
ನಿಮ್ಮ ಬೋರ್‌ವೆಲ್‌ನ ಮೇಲ್ಭಾಗದಲ್ಲಿ ಒಂದು ಬಟ್ಟೆಯನ್ನು ನಾಲ್ಕು ಮೂಲೆಗೆ ಕಟ್ಟಬೇಕು. ಬಳಿಕ ಮಳೆನೀರು ಬಟ್ಟೆಯ ಮಧ್ಯಭಾಗದಲ್ಲಿ ಸಂಗ್ರಹಿಸಿ ನೇರವಾಗಿ ಬೋರ್ ವೆಲ್ ಕೊಳವೆಗೆ ಬೀಳುವಂತೆ ಮಾಡಬೇಕು. ಬಟ್ಟೆ ದೊಡ್ದದಾದಷ್ಟು ನೀರು ಸಂಗ್ರಹದ ಪ್ರಮಾಣ ಜಾಸ್ತಿಯಾಗುತ್ತದೆ. ಬಟ್ಟೆಯ ಮಧ್ಯಭಾಗಕ್ಕೆ ಭಾರದ ವಸ್ತುವನ್ನು ಇರಿಸಿದರೆ, ನೀರು ಸುಲಭದಲ್ಲಿ ಕೊಳವೆಬಾವಿಗೆ ಬೀಳುತ್ತದೆ. ಈ ವಿಧಾನದಲ್ಲಿ ಮಳೆ ನೀರನ್ನು ಸೋಸುವ ಅಗತ್ಯ ಇರುವುದಿಲ್ಲ. ಬಟ್ಟೆಯಿಂದಲೇ ನೀರು ಸೋಸಿಕೊಂಡು ಕೊಳವೆಬಾವಿಯನ್ನು ಸೇರುತ್ತದೆ. ಈ ಪ್ರಯೋಗಕ್ಕೆ ಮನೆಯಲ್ಲಿರುವ ಯಾವುದೇ ಬಟ್ಟೆಯನ್ನು ಉಪಯೋಗಿಸಬಹುದು.
ಬಟ್ಟೆಯ ನಾಲ್ಕು ಮೂಲೆಗಳನ್ನು ಹಗ್ಗ ಅಥವಾ ಅಡಕೆ ತೋಟದಲ್ಲಾದರೆ ಮರಗಳಿಗೆ ಹಗ್ಗದಿಂದ ಎಳೆದು ಕಟ್ಟಿದರೆ ಸಾಕಾಗುತ್ತದೆ. ಅತ್ಯಂತ ಸುಲಭದಲ್ಲಿ, ಹೆಚ್ಚಿನ ಶ್ರಮ ಇಲ್ಲದೆ ಮಳೆನೀರನ್ನು ಬೋರ್‌ವೆಲ್ ಗೆ ರೀಚಾರ್ಜ್ ಮಾಡಲು ಸಾಧ್ಯವಿದೆ. ಈ ವಿಧಾನದಲ್ಲಿ ಮಳೆನೀರು ಇಳಿದುಹೋಗಲು ಬೋರ್‌ವೆಲ್ ಕ್ಯಾಪ್ ತೆಗೆಯಬಹುದು. ಇಲ್ಲವೇ ಸಣ್ಣ ರಂಧ್ರ ಇರುವ ಕ್ಯಾಪ್‌ನ್ನು ಹಾಕಿಕೊಳ್ಳಬಹುದು ಎಂದು ನಾರಾಯಣ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ ಮನೆ ಬಳಕೆಗೆ ಕನಿಷ್ಠ 500 ಲೀಟರ್ ನೀರು ಬೇಕಾಗುತ್ತದೆ.
ಈ ವಿಧಾನದಲ್ಲಿ ಬೋರ್‌ವೆಲ್‌ನಲ್ಲಿ ನೀರು ಹಿಡಿದಿಟ್ಟುಕೊಂಡರೆ ದಿನದಲ್ಲಿ ಮಳೆಯನ್ನು ಅವಲಂಬಿಸಿಕೊಂಡು ಕನಿಷ್ಠ 60 ಲೀಟರ್, ಜಾಸ್ತಿ ಮಳೆಯಾದರೆ ಮಾಸಿಕ 30 ಸಾವಿರ ಲೀಟರ್‌ಗೂ ಅಧಿಕ ನೀರನ್ನು ಇಂಗಿಸಲು ಸಾಧ್ಯವಿದೆ. ಮತ್ತು ಪ್ರತಿ ವರ್ಷ ಜೂನ್‌ನಿಂದ ಸೆಪ್ಟೆಂಬರ್ ವರೆಗೆ ನಾಲ್ಕು ತಿಂಗಳ ಕಾಲ ಮಳೆಗಾಲದ ನೀರನ್ನು ಈ ರೀತಿ ಹಿಡಿದಿಟ್ಟುಕೊಂಡರೆ, ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕುಸಿತ ತಡೆಗಟ್ಟಲು ಸಾಧ್ಯವಿದೆ ಎನ್ನುತ್ತಾರೆ ಪ್ರಗತಿಪರ ಕೃಷಿಕ ಕೈಂತಜೆ ರಮೇಶ್ ಭಟ್ ಹೇಳಿದ್ದಾರೆ. ಸಂಗ್ರಹ ಮಾಹಿತಿ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.