32 ವರ್ಷದಿಂದ ಈ ಮಾಲಿ ಆಂಟಿ ಇದುವರೆಗೂ ಊಟ ಮಾಡಿಲ್ಲ ಈ ಆಂಟಿ ಕಥೆ ಏನು ಗೊತ್ತಾ..!

Hit

ನಮ್ಮ ದಿನನಿತ್ಯದ ಬಳಕೆಯ ಪಾನೀಯಗಳಲ್ಲಿ ಚಹಾ ಕೂಡ ಒಂದು. ಇದನ್ನು ದಿನನಿತ್ಯ ಕುಡಿಯುವ ರೂಢಿ ಇದ್ದರೆ ಒಂದು ದಿನ ಕುಡಿಯದೇ ಇದ್ದರೆ ತಲೆನೋವು ಬರುವ ಸಾಧ್ಯತೆ ಇರುತ್ತದೆ. ಚಹಾದಲ್ಲಿ ಹಲವಾರು ಬಗೆಗಳಿವೆ. ಹಾಗೆಯೇ ಕೆಲವರು ಚಹಾಪುಡಿಯನ್ನು ಹಾಕಿ ಹಾಲು ಹಾಕದೇ ಸಹ ಕುಡಿಯುತ್ತಾರೆ. ಆದರೆ ನಾವು ಇಲ್ಲಿ ಸುಮಾರು ವರ್ಷಗಳಿಂದ ಚಹಾವನ್ನೇ ಕುಡಿದು ಬದುಕುತ್ತಿರುವ ಒಬ್ಬ ಮಹಿಳೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಚಹಾವು 10ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿತು. ಇದು ಮೂಲತಃ ಚೀನಾದಿಂದ ಬಂದಿದೆ ಎಂದು ಹೇಳಬಹುದು. ಚಹಾವು ಕೆಮೆಲಿಯಾ ಸೈನೆನ್ಸಿಸ್‌‌‌‌‌‌‌‌‌‌‌ ಸಸ್ಯದ ಎಲೆಗಳು, ಎಲೆಯ ಮೊಗ್ಗುಗಳು, ಹಾಗೂ ಅಂತರಗೆಣ್ಣುಗಳ ವ್ಯಾವಸಾಯಿಕ ಉತ್ಪನ್ನವಾಗಿದ್ದು ಹಲವಾರು ವಿಧಾನಗಳಿಂದ ಇದು ತಯಾರಿಸಲ್ಪಡುತ್ತದೆ ಮತ್ತು ಹದಗೊಳಿಸಲ್ಪಡುತ್ತದೆ. ಬಿಸಿಯಾಗಿರುವ ಅಥವಾ ಕುದಿಯುತ್ತಿರುವ ನೀರಿಗೆ ಹದಗೊಳಿಸಲಾದ ಅಥವಾ ಸಂಸ್ಕರಿಸಲಾದ ಎಲೆಗಳನ್ನು ಮಿಶ್ರಗೊಳಿಸಿ ತಯಾರಿಸಲಾಗುವ ಪರಿಮಳದ ಪಾನೀಯಕ್ಕೆ ಚಹಾ ಎಂದು ಕರೆಯಲಾಗುತ್ತದೆ.

ಇದು ಸ್ವತಃ ಕೆಮೆಲಿಯಾ ಸೈನೆನ್ಸಿಸ್‌‌‌‌‌‌‌‌‌‌‌ ಸಸ್ಯಕ್ಕಿರುವ ಸಾಮಾನ್ಯ ಹೆಸರಾಗಿದೆ. ನಂತರ ಚಹಾವು ವಿಶ್ವದಲ್ಲಿ ಅತ್ಯಂತ ವ್ಯಾಪಕವಾಗಿ ಬಳಸಲಾಗುತ್ತಿರುವ ಪಾನೀಯವಾಗಿದೆ ಎಂದು ಹೇಳಬಹುದು. ಇದು ಒಂದು ರೀತಿಯ ತಂಪುಕಾರಕ ಮತ್ತು ಕೊಂಚವೇ ಕಹಿಯಾದ ಒಗರು ಪರಿಮಳವನ್ನು ಹೊಂದಿದ್ದು ಅನೇಕರು ಅದರ ಆನಂದವನ್ನು ಪಡೆಯುತ್ತಾರೆ. ಆದರೆ ಒಂದು ಗ್ರಾಮದ ನಿವಾಸಿಯಾದ ಪಲ್ಲಿದೇವಿ ಅವರು ಕೇವಲ ಚಹಾವೊಂದನ್ನೇ ಕುಡಿದು ದಿನ ಕಳೆಯುತ್ತಿದ್ದಾರೆ. ಇವರಿಗೆ 44ವರ್ಷ ಆಗಿದೆ. ಚಹಾ ಕುಡಿಯುವುದರಿಂದ ಇವರಿಗೆ ಹಸಿವು ಆಗುವುದೇ ಇಲ್ಲ.

ಇವರು ಮತ್ತೆ ಯಾವುದೇ ರೀತಿಯ ಆಹಾರವನ್ನು ಸೇವನೆ ಮಾಡುವುದಿಲ್ಲ. ಸುಮಾರು ವರ್ಷಗಳಿಂದ ಕೇವಲ ಚಹಾವನ್ನು ಮಾತ್ರ ಕುಡಿದು ದಿನಕಳೆಯುತ್ತಿದ್ದಾರೆ. ಇದರಲ್ಲಿ ವಿಶೇಷದ ಸಂಗತಿ ಎಂದರೆ ಇವರು ಬಹಳ ಆರೋಗ್ಯವಾಗಿ ಇದ್ದಾರೆ. ಇವರನ್ನು ಪರೀಕ್ಷೆ ಮಾಡಿದ ವೈದ್ಯರು ಸಹ ಬಹಳ ಆಶ್ಚರ್ಯಪಟ್ಟಿದ್ದಾರೆ. ಇವರು 6ವರ್ಷದಲ್ಲಿ ಇರುವಾಗ ಚಹಾದ ಜೊತೆ ಬಿಸ್ಕತ್ ನ್ನು ತಿನ್ನುತ್ತಿದ್ದರು. ನಂತರದಲ್ಲಿ ಅದನ್ನು ಬಿಟ್ಟರು. ಸುತ್ತಮುತ್ತಲು ಇರುವವರು ಇವರನ್ನು ಚಾಯ್ ಮಾಲಿ ಆಂಟಿ ಎಂದು ಕರೆಯುತ್ತಾರೆ. ಸಂಗ್ರಹ ಮಾಹಿತಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *