ಸಾಮಾನ್ಯವಾಗಿ ಪ್ರತಿಯೊಬ್ಬರೂ ಹೇಳುತ್ತಾರೆ ಈ ಚುಕ್ಕೆ ಬಾಳೆಹಣ್ಣು ತಿನ್ನಿ ಅಂತ ಆದರೆ ಈ ಚುಕ್ಕೆ ಬಾಳೆಹಣ್ಣು ಯಾಕೆ ತಿನ್ನಿ ಅಂತ ಹೇಳುತ್ತಾರೆ ಮತ್ತು ಈ ಚುಕ್ಕೆ ಬಾಳೆಹಣ್ಣು ತಿಂದ್ರೆ ಏನು ಆಗುತ್ತೆ ಅನ್ನೋದು ಇಲ್ಲಿದೆ ನೋಡಿ. ಬಾಳೆ ಹಣ್ಣಿನಲ್ಲಿರುವ ಆಮ್ಲ-ವಿರೋಧಿ ಗುಣ ಆಸಿಡ್ ನ ಪ್ರತಿ ದಾಳಿಯಿಂದ ರಕ್ಷಿಸುತ್ತದೆ , ಕೇವಲ ಒಂದು ಬಾಳೆಹಣ್ಣು ತಿನ್ನದರೆ ತಕ್ಷಣವೇ ಹಿತವಾದ ಅನುಭವವನ್ನು ಉಂಟುಮಾಡುತ್ತದೆ ,ನಿಮ್ಮ ಎದೆಯುರಿ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಬಾಳೆ ಹಣ್ಣು ರಕ್ತದೊತ್ತಡವನ್ನು ಕಡಿಮೆ ಮಾಡಲು , ಸ್ಟ್ರೋಕ್ ಅಥವಾ ಹೃದಯಾಘಾತದಿಂದ ರಕ್ಷಿಸಲು ಸಹಾಯ ಮಾಡುತ್ತದೆ ಏಕೆಂದರೆ ಬಾಳೆ ಹಣ್ಣಿನಲ್ಲಿ ಸೋಡಿಯಂ ಅಂಶ ಕಡಿಮೆಯಾಗಿರುತ್ತವೆ ಮತ್ತು ಪೊಟ್ಯಾಸಿಮ್ ಹೆಚ್ಚಿನ ಪ್ರಮಾಣದಲ್ಲಿರುತ್ತವೆ, ಇದರಿಂದ ಹೃದಯದ ಆರೋಗ್ಯಕರ ಆಹಾರವಾಗಿದೆ.
ಶಕ್ತಿ- ವ್ಯಾಯಾಮದ ಮೊದಲು ಒಂದು ಬಾಳೆ ಅಥವಾ ಎರಡು ಬಾಳೆ ತಿನ್ನುವುದರಿಂದ ಒಂದು ಗಂಟೆಗಿಂತ ಹೆಚ್ಚು ಕಾಲ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಕಡಿಮೆ ಗ್ಲೈಸೆಮಿಕ್ ಕಾರ್ಬೋಹೈಡ್ರೇಟ್ಗಳು, ಜೀವಸತ್ವಗಳು ಮತ್ತು ಖನಿಜಗಳು ನಿಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ, ಪೊಟ್ಯಾಸಿಯಮ್ ಸ್ನಾಯು ಸೆಳೆತವನ್ನು ತಡೆಯಲು ಸಹಾಯ ಮಾಡುತ್ತದೆ. ಹೆಚ್ಚು ಅಗತ್ಯವಿರುವ ಆಹಾರದ ಕಬ್ಬಿಣವನ್ನು ಒದಗಿಸುವುದರ ಮೂಲಕ ರಕ್ತಹೀನತೆ ಹೊಂದಿರುವವರಿಗೆ ಸಹಾಯ ಮಾಡಬಹುದು, ಅದು ಕೆಂಪು ರಕ್ತ ಕಣ ಮತ್ತು ಹಿಮೋಗ್ಲೋಬಿನ್ ಉತ್ಪಾದನೆಯನ್ನು ಪ್ರಚೋದಿಸುತ್ತದೆ ಮತ್ತು ರಕ್ತ ಪೂರೈಕೆಯನ್ನು ಬಲಪಡಿಸುತ್ತದೆ.
ಹುಣ್ಣುಗಳು ನೀವು ಹೊಟ್ಟೆಯ ಹುಣ್ಣುಗಳಿಂದ ಬಳಲುತ್ತಿದ್ದರೆ ನಾಶಕಾರಿ ಆಮ್ಲಗಳು ಮತ್ತು ಅದರ ಕಿರಿಕಿರಿಯನ್ನು ತಡೆಯುತ್ತದೆ. ಖಿನ್ನತೆಯನ್ನು ನಿವಾರಿಸಲು ಸಹಾಯ ಮಾಡಬಹುದು ಏಕೆಂದರೆ ಬಾಳೆ ಹಣ್ಣುಗಳು ಉನ್ನತ ಮಟ್ಟದ ಟ್ರಿಪ್ಟೊಫಾನ್ ಅನ್ನು ಹೊಂದಿರುತ್ತವೆ ಇದು ನಮ್ಮ ದೇಹದಲ್ಲಿ ಸಿರೊಟೋನಿನ್ ಆಗಿ ಮಾರ್ಪಡಾಗುತ್ತದೆ. ಸೆರೊಟೋನಿನ್ ಮೆದುಳಿನ ಉತ್ತೇಜಕವಾಗಿದೆ ಮನಸ್ಥಿತಿಯನ್ನು ಸುಧಾರಿಸುತ್ತದೆ ,ಆರಾಮದಾಯಕ ಅನುಭವ ನೀಡಿ ಖಿನ್ನತೆಯನ್ನು ದೂರ ಮಾಡಲು ಸಹಾಯ ಮಾಡುತ್ತದೆ.
ಮಲಬದ್ಧತೆ ಬಾಳೆಹಣ್ಣುಗಳನ್ನು ತಿನ್ನಿರಿ ಇದರಲ್ಲಿರುವ ನೈಸರ್ಗಿಕ ಫೈಬರ್ ಅಂಶ ಕರುಳಿನ ಚಲನೆಯನ್ನು ಉತ್ತೇಜಿಸಿ ಮಲಬದ್ಧತೆಯನ್ನು ತಡೆಯಲು ನೈಸರ್ಗಿಕ ಪರಿಹಾರವಾಗಿದೆ. ಬಾಳೆ ತಿಂದಾಗ ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಲು ಸಹಾಯ ಮಾಡುತ್ತಾರೆ ಮತ್ತು B ಜೀವಸತ್ವದಿಂದ ಸಮೃದ್ಧವಾಗಿದೆ ಇದು ನೈಸರ್ಗಿಕವಾಗಿ ಮನಸ್ಸನ್ನು ಶಾಂತಗೊಳಿಸುತ್ತದೆ ಇದರಿಂದ ಮೂಡ್ ಉತ್ತಮಗೊಳ್ಳುತ್ತದೆ.
ದೇಹದ ಉಷ್ಣಾಂಶ ನಿಯಂತ್ರಣ- ಬಿಸಿಲಿನ ದಿನದಲ್ಲಿ ಬಾಳೆಹಣ್ಣು ತಿನ್ನುವುದರಿಂದ ದೇಹದ ಉಷ್ಣಾಂಶವನ್ನು ತಗ್ಗಿಸುವುದರ ಮೂಲಕ ನಿಮ್ಮನ್ನು ತಂಪಾಗಿಸುತ್ತದೆ. ಚುಕ್ಕಿ ಬಾಳೆಹಣ್ಣಿನಲ್ಲಿ TNF ಅಂಶವಿದ್ದು ಇದಕ್ಕೆ ಟ್ಯೂಮರ್ ನಿಕ್ರೋಸಿಸ್ ಫ್ಯಾಕ್ಟರ್ ಎಂದು ಕರೆಯುತ್ತಾರೆ ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ರಾಮಬಾಣ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.