ದೇಹದಲ್ಲಿ ಹೃದಯ ಬಿಟ್ಟಿರೆ ದಿನದ 24 ಗಂಟೆ ಕಾರ್ಯನಿರ್ವಹಿಸುವ ಇನ್ನೊಂದು ಪ್ರಮುಖ ಅಂಗ ಅಂದರೆ ಅದು ಕಿಡ್ನಿ. ಈ ಕಿಡ್ನಿಗೆ ಸ್ವಲ್ಪ ಯಾವುದೇ ಸಮಸ್ಯೆ ಬಂದರು ತಡೆದುಕೊಳ್ಳುವುದಿಲ್ಲ. ಆದ್ದರಿಂದ ಕಿಡ್ನಿಗೆ ಯಾವುದೇ ಸಮಸ್ಯೆಗಳು ಬರದೇ ಇರಲು ಈ ಕೆಳಗಿನ ಸಲಹೆಗಳನ್ನು ಅನುಸರಿಸಿ.
ಅಧಿಕ ದೇಹತೂಕ ಬೇಡ: ದೇಹದ ತೂಕ ಜಾಸ್ತಿಯಾದರೆ ಕಿಡ್ನಿ ಮೇಲೆ ಒತ್ತಡ ಹೇರುತ್ತದೆ. ಇದರಿಂದ ಅಧಿಕ ರಕ್ತದೊತ್ತಡ ಕೂಡ ಉಂಟಾಗಬಹುದು. ಆದ್ದರಿಂದ ಕಡಿಮೆ ಅವಧಿಯಲ್ಲಿ ದೇಹದಲ್ಲಿ ತೂಕ ಹೆಚ್ಚಾದರೆ ಕಿಡ್ನಿ ಸಮಸ್ಯೆ ಏನಾದರೂ ಇದೆಯೇ ಎಂದು ಪರೀಕ್ಷಿಸುವುದು ಉತ್ತಮ.
ನೋವು ನಿವಾರಕಗಳನ್ನು ಹೆಚ್ಚು ಸೇವಿಸಬೇಡಿ: ತಲೆನೋವು, ಸೊಂಟನೋವು, ಬೆನ್ನುನೋವು ಹೀಗೆ ಏನಾದರೂ ಸಮಸ್ಯೆಗಳು ನಿಮಗೆ ಬಂದಾಗ ನೋವು ನಿವಾರಕ ಮಾತ್ರೆಗಳನ್ನು ಅತಿಯಾಗಿ ಸೇವಿಸಿವುದು ಒಳ್ಳೆಯದಲ್ಲ. ಅದು ಕಿಡ್ನಿಗೆ ಹಾನಿಯುಂಟುಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ರಕ್ತದೊತ್ತಡ ನಿಯಂತ್ರಣದಲ್ಲಿರಲಿ: ನಿಮಗೆ ಏನಾದರು ತೀವ್ರ ರಕ್ತದೊತ್ತಡವಿದ್ದರೆ ಕಿಡ್ನಿಗೆ ತೊಂದರೆಯಾಗಿ ಅದು ಹೆಚ್ಚಿನ ಒತ್ತಡ ಹಾಕಿ ಕಾರ್ಯವೈಖರಿಗೆ ಹಾನಿಯುಂಟುಮಾಡುವ ಸಾಧ್ಯತೆ ಇರುತ್ತದೆ.
ಸಕ್ಕರೆ ಮಟ್ಟ ನಿಯಂತ್ರಣದಲ್ಲಿರಲಿ: ಡಯಾಬಿಟಿಸ್ ಸಮಸ್ಯೆಯಿರುವವರಿಗೆ ಕಿಡ್ನಿ ಸಮಸ್ಯೆ ಬರುವುದು ಸಾಮಾನ್ಯ. ದೀರ್ಘಕಾಲಿನ ಕಿಡ್ನಿ ಸಮಸ್ಯೆಗಳಿಗೆ ಡಯಾಬಿಟಿಸ್ ಕಾರಣವಾಗಿರುತ್ತದೆ. ಆದ್ದರಿಂದ ದೇಹದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರಲಿ.
ಮದ್ಯಪಾನ, ಧೂಮಪಾನದಿಂದ ದೂರವಿರಿ: ಮದ್ಯಪಾನ ಮತ್ತು ಧೂಮಪಾನಗಳ ಸೇವನೆಯಿಂದ ಕಿಡ್ನಿಗೆ ಸಮಸ್ಯೆಯಾಗುತ್ತದೆ. ದುರಭ್ಯಾಸಗಳಿಂದ ದೂರವಿರುವುದು ಒಳಿತು.
ಜಂಕ್ ಫುಡ್ ಗಳಿಂದ ದೂರವಿರಿ: ಅಧಿಕ ಮಸಾಲೆಯ, ಉಪ್ಪಿನ ಅಂಶವಿರುವ ಪದಾರ್ಥಗಳನ್ನು ಸೇವಿಸುವುದು ಉತ್ತಮವಲ್ಲ. ಸಂಸ್ಕರಿತ, ಅಧಿಕ ಆಸಿಡ್ ಪದಾರ್ಥಗಳ ಸೇವನೆಯಿಂದ ಕೂಡ ದೇಹದ ತೂಕ ಹೆಚ್ಚಾಗುತ್ತದೆ. ಅದು ಕಿಡ್ನಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ಇಂತಹ ಆಹಾರ ಪದಾರ್ಥಗಳ ಸೇವನೆಯ ಮೇಲೆ ನಿಯಂತ್ರಣವಿರಲಿ.
ಅಧಿಕ ನೀರು ಕುಡಿಯಿರಿ: ಕಡಿಮೆ ನೀರು ಕುಡಿದಷ್ಟು ಕಿಡ್ನಿಯಲ್ಲಿ ಕಲ್ಲುಗಳು ಬೆಳೆಯುವುದು ಹೆಚ್ಚು. ಆದ್ದರಿಂದ ಪ್ರತಿದಿನ 10ರಿಂದ 12 ಗ್ಲಾಸ್ ನೀರು ಕುಡಿಯುತ್ತಿರಿ.
ಶಾರೀರಿಕ ಚಟುವಟಿಕೆಯಿರಲಿ: ದಿನನಿತ್ಯದ ಜೀವನಶೈಲಿ ಉತ್ತಮವಾಗಿರಬೇಕು. ಉತ್ತಮ ಜೀವನಶೈಲಿಯಿಂದ ಶರೀರ ಹೆಚ್ಚು ಚಟುವಟಿಕೆಯಿಂದ ಇದ್ದು ಕಿಡ್ನಿ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ.
ಕಾಲಕಾಲಕ್ಕೆ ಆರೋಗ್ಯ ತಪಾಸಣೆ: 35-40 ವರ್ಷ ಕಳೆದ ನಂತರ ಕಾಲಕಾಲಕ್ಕೆ ಬಿ.ಪಿ. ಸಕ್ಕರೆ ಕಾಯಿಲೆ ಬಗ್ಗೆ ತಪಾಸಣೆ ಮಾಡುತ್ತಿರಬೇಕು. ಕುಟುಂಬದಲ್ಲಿ ಯಾರಿಗಾದರೂ ಕಿಡ್ನಿ ಸಮಸ್ಯೆ ಇದ್ದರೆ ಪ್ರತಿವರ್ಷ ಇಡೀ ಶರೀರದ ಆರೋಗ್ಯ ತಪಾಸಣೆ ಮಾಡಿಸುತ್ತಿರಬೇಕು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.