ಸಾಮಾನ್ಯವಾಗಿ ಹೃದಯಾಘಾತ ಯಾವ ಕಾಲದಲ್ಲಿ ಸಂಭವಿಸುತ್ತೆ ಅಂತ ನೀವು ತಿಳಿದುಕೊಂಡರೆ ಒಳಿತು..!

Hit

ಸಾಮಾನ್ಯವಾಗಿ ಹೃದಯಾಘಾತ ಯಾವ ಕಾಲದಲ್ಲಿ ಸಂಭವಿಸುತ್ತೆ ಅಂತ ನೀವು ತಿಳಿದುಕೊಂಡರೆ ಒಳಿತು. ಯಾಕೆ ಅಂದ್ರೆ ರೋಗಗಳು ಬರುವುದಕ್ಕೂ ಕಾಲಗಳಿಗೂ ಸಂಬಂಧವಿದೆ ಅನೋದು ಗ್ಯಾರೆಂಟಿ. ಚಳಿಗಾಲದಲ್ಲಿ ಕೆಲವೊಂದು ಕಾಯಿಲೆಗಳು ಬಂದ್ರೆ ಬೇಸಿಗೆ ಕಾಲದಲ್ಲಿ ಕೆಲವೊಂದು ಕಾಯಿಲೆಗಳು ಬರುತ್ತವೆ ಹೀಗೆ ಕಾಲಕ್ಕೆ ತಕ್ಕಂತೆ ಕಾಯಿಲೆಗಳು ಬರುವುದು ಸಾಮಾನ್ಯವಾಗಿದೆ. ಹೃದಯಾಘಾತವಾಗುವ ಸಂದರ್ಭ ಚಳಿಗಾಲದಲ್ಲಿ ಅಧಿಕ ಮತ್ತು ಬೇಸಿಗೆ ಕಾಲದಲ್ಲಿ ಕಡಿಮೆಯಾಗಿರುತ್ತದೆ. ಯಾಕೆಂದರೆ ಜೀವ ಹಾನಿಯುಂಟುಮಾಡುವ ರೋಗಗಳ ಮೇಲೆ ವಾತಾವರಣದಲ್ಲಿರುವ ಉಷ್ಣಾಂಶ ಪ್ರಮುಖವಾಗಿ ಕಾರಣವಾಗುತ್ತದೆ ಎಂದು ವಿಶ್ಲೇಷಣೆ ಹೇಳುತ್ತದೆ.

ಹೃದಯಾಘಾತವಾಗುವ ಪ್ರಮಾಣ ಸರಾಸರಿ ಶೀತದ ಉಷ್ಣತೆ ಇರುವ ಸಮಯದಲ್ಲಿ ಹೆಚ್ಚಾಗಿರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ದಿನನಿತ್ಯದ ಉಷ್ಣತೆ ಶೂನ್ಯ ಡಿಗ್ರಿಗಿಂತ ಕಡಿಮೆ ಮಟ್ಟಕ್ಕೆ ಕುಸಿದರೆ ದಿನಕ್ಕೆ ಸರಾಸರಿ ಹೃದಯಾಘಾತಕ್ಕೀಡಾಗುವವರ ಸಂಖ್ಯೆ ನಾಲ್ಕು ಆಗಿರುತ್ತದೆ. ಅಲ್ಲದೆ, ಹೆಚ್ಚಿನ ಗಾಳಿ ಬೀಸುತ್ತಿದ್ದರೆ ಹಗಲು ಹೊತ್ತಿನಲ್ಲಿ ಸೂರ್ಯನ ಬೆಳಕು ಕಡಿಮೆಯಿದ್ದರೆ ಹೃದಯಾಘಾತಕ್ಕೀಡಾಗುವವರ ಸಂಖ್ಯೆ ಜಾಸ್ತಿಯಾಗಿರುತ್ತದೆ. ಋತುಮಾನಕ್ಕೆ ತಕ್ಕಂತೆ ಹೃದಯಾಘಾತಕ್ಕೀಡಾಗುವವರ ಪ್ರಮಾಣ ಬದಲಾಗುತ್ತಿರುತ್ತದೆ ಎಂದು ಸ್ವೀಡನ್ ನ ಲೂಂಡ್ ವಿಶ್ವವಿದ್ಯಾಲಯದ ಪ್ರಮುಖ ಲೇಖಕ ಮೊಮನ್ ಎ.ಮೊಹಮ್ಮದ್ ತಿಳಿಸುತ್ತಾರೆ.

ಹೊರಗೆ ಶೀತದ ವಾತಾವರಣವಿದ್ದಾಗ ಮಾನವನ ದೇಹದ ರಕ್ತ ನಾಳಗಳು ಕುಗ್ಗುತ್ತವೆ. ಚರ್ಮಕ್ಕೆ ಉಷ್ಣ ವಾಹನವನ್ನು ಕಡಿಮೆ ಮಾಡುತ್ತದೆ. ತರುವಾಯ ಅಪಧಮನಿಯ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇತರ ಪ್ರತಿಕ್ರಿಯೆಗಳು ಹೃದಯ ಬಡಿತವನ್ನು ನಡುಗಿಸುತ್ತದೆ ಮತ್ತು ಹೆಚ್ಚಿಸುತ್ತದೆ, ಇದು ಚಯಾಪಚಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ದೇಹ ತಾಪಮಾನವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *