ಜನ್ ಔಷಧಿ ಮಳಿಗೆ ಕೇಂದ್ರವನ್ನು ಯಾರು ಬೇಕಾದರೂ ಮಾಡಬಹುದು ಕೇಂದ್ರ ಸರ್ಕಾರದಿಂದ ಹಣ ಸಹಾಯ ಮಾಡಲಾಗುತ್ತದೆ..!

Hit

ಬಡವರಿಗೆ ಹಾಗೂ ಜನ ಸಮಾನ್ಯರಿಗೆ ಔಷಧಿಗಳು ಸಾಮಾನ್ಯ ದರದಲಲ್ಲಿ ಸಿಗುವಂತೆ ಮಾಡಲು ಜನ್ ಔಷಧಿ ಮಳಿಗೆಗಳ ಪುನರ್ ನವೀಕರಣಕ್ಕೆ ಪ್ರಧಾನಿ ಕಾರ್ಯಾಲಯ ಮುಂದಾಗಿದೆ. ಉತ್ತಮ ಗುಣಮಟ್ಟದ ಔಷಧಿಗಳನ್ನು ಜನ ಸಾಮಾನ್ಯರಿಗೆ ತಲುಪಿಸಲು ಮುಂದಾಗಿರುವ ಕೇಂದ್ರದ ಔಷಧ ಇಲಾಖೆ 2008 ರಲ್ಲಿ ಈ ಯೋಜನೆ ಜಾರಿಗೆ ತಂದಿತ್ತು. ದೇಶಾದ್ಯಂತ ಪ್ರತಿ ಜಿಲ್ಲೆಗೆ ಒಂದು ಜನ್ ಔಷಧಿ ಮಳಿಗೆ ತೆರೆಯುವುದು ಇಲಾಖೆಯ ಗುರಿಯಾಗಿತ್ತು. ಆದರೆ ಮಾರ್ಚ್ 2012 ರ ವೇಳೆಗೆ ಕೇವಲ 112 ಅಂಗಡಿಗಳು ಮಾತ್ರ ತೆರೆಯಲಾಗಿತ್ತು. ಅದರಲ್ಲಿ ಕೇವಲ 99 ಜನ್ ಔಷಧಿ ಮಳಿಗೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು.

ಈ ಜನ್ ಔಷಧಿ ಯೋಜನೆಯನ್ನು ಪರಿಣಾಮಕಾರಿಯಾಗಿ ಮತ್ತೆ ಜಾರಿಗೆ ತರಲು ಕೇಂದ್ರ ಔಷಧ ಇಲಾಖೆ ನಿರ್ಧರಿಸಿದೆ. ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಯಕ್ತಿಕವಾಗಿ ಜನ್ ಔಷದಿ ಮಳಿಗೆಗಳನ್ನು ತೆರೆಯಲು ಆಸಕ್ತಿ ಉಳ್ಳವರು ಇದನ್ನು ಪ್ರಾರಂಭಿಸಬಹುದಾಗಿದೆ. ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನ್ ಔಷಧ ಮಳಿಗೆ ತೆರೆಯಲು ಸರ್ಕಾರ ಸುಮಾರು2.5 ಲಕ್ಷ ರುಪಾಯಿ ಧನ ಸಹಾಯ ನೀಡಲಿದೆ.ಜೊತೆಗೆ ಜಾಗವನ್ನು ಸಹ ಉಚಿತವಾಗಿ ನೀಡಲಿದೆ.

ಔಷಧಿ ಅಂಗಡಿ ಪೀಠೋಪಕರಣಕ್ಕಾಗಿ 1 ಲಕ್ಷ, ಕಂಪ್ಯೂಟರ್ ಮತ್ತಿತರ ವಸ್ತುಗಳಿಗಾಗಿ 50 ಸಾವಿರ, ಆರಂಭದಲ್ಲಿ ಉಚಿತವಾಗಿ ಔಷದಿ ನೀಡುವ ಸಲುವಾಗಿ 1 ಲಕ್ಷ ರು. ಹಣವನ್ನು ಸರ್ಕಾರ ನೀಡುತ್ತದೆ. ಇನ್ನು ಔಷಧಿ ಮಾರಾಟದ ಮೇಲೆ ತಿಂಗಳಿಗೆ ಸುಮಾರು 1.5 ಲಕ್ಷ ರು. ಪ್ರೋತ್ಸಾಹ ಧನ ಕೂಡ ನೀಡಲಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅರೋಗ್ಯ ಇಲಾಖೆಯಲ್ಲಿ ವಿಚಾರ ಮಾಡಿ ಹೆಚ್ಚಿನ ಮಾಹಿತಿ ಸಿಗಲಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *