ಅಂಚೆ ಇಲಾಖೆಯಲ್ಲಿ ಹೊಸ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಬಹದು..!

Hit

ಕೆಲವು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಒಟ್ಟೂ ಖಾಲಿ ಇರುವ ಹುದ್ದೆಗಳ ಸಂಖ್ಯೆ ಎಷ್ಟು? ಯಾರೆಲ್ಲಾ ಹೇಗೆ ಅರ್ಜಿ ಹಾಕಬಹುದು ಎನ್ನುವ ಮುಂತಾದ ವಿವರಗಳನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಅಂಚೆ ಇಲಾಖೆಯ ಈ ನೇಮಕಾತಿಯ ಕೇಂದ್ರ ಸರ್ಕಾರದ ಕಡೆಯಿಂದ ನಡೆಯುತ್ತಿದ್ದು ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ನೇಮಕಾತಿಗಾಗಿ ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ. ಈಗ ಖಾಲಿ ಇರುವ , ಅರ್ಜಿ ಆಹ್ವಾನ ಮಾಡಿರುವ ಇಲಾಖೆಯ ಹೆಸರು ಭಾರತೀಯ ಅಂಚೆ ಇಲಾಖೆಯ Mail Motor service ಎಂಬ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಇಲ್ಲಿ ಖಾಲಿ ಇರುವ ಹುದ್ದೆಯ ಹೆಸರು ಸ್ಟಾಫ್ ಕಾರ್ ಡ್ರೈವರ್. ಇಡೀ ಭಾರತದಾದ್ಯಂತ ನೇಮಕಾತಿ ಮಾಡಿಕೊಳ್ಳುವ ಈ ಹುದ್ದೆಗೆ ಕೇವಲ ಒಂಭತ್ತು ಹುದ್ದೆಗಳು ಖಾಲಿ ಇವೆ.

ಇನ್ನೂ ಇಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಇದಕ್ಕೆ ಕನಿಷ್ಠ ಎಂದರೆ ಹದಿನೆಂಟು ವರ್ಷ ಆಗಿರಬೇಕು ಹಾಗೂ ಗರಿಷ್ಠ ವಯಸ್ಸು ಇಪ್ಪತ್ತೇಳು ವರ್ಷದ ಒಳಗೆ ಇರಬೇಕು. ಅಭ್ಯರ್ಥಿಗಳು ಒಬಿಸಿ , 2A, 3A ಹಾಗೂ 3B ಅಭ್ಯರ್ಥಿಗಳು ಆಗಿದ್ದಲ್ಲಿ ವಯಸ್ಸಿನಲ್ಲಿ ಮೂರು ವರ್ಷಗಳು ಹಾಗೂ SC ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು PWD ಅಂಗವೈಕಲ್ಯ ಅಭ್ಯರ್ಥಿಗಳಿಗೆ ಹತ್ತು ವರ್ಷಗಳ ವಯಸ್ಸಿನಲ್ಲಿ ಸಡಿಲಿಕೆ ನೀಡಲಾಗುವುದು. ಹಾಗೂ ಇಲ್ಲಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಪ್ರತೀ ತಿಂಗಳು ೧೯,೯೦೦ ರೂಪಾಯಿ ಇಂದ ೬೩,೨೦೦ ರುಪಾಯಿಯವರೆಗೆ ವೇತನ ನೀಡಲಾಗುವುದು.

ಇಲ್ಲಿನ ಪ್ರಮುಖ ದಿನಾಂಕಗಳನ್ನು ನೋಡುವುದಾದರೆ ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ ೨೦ ಫೆಬ್ರವರಿ ೨೦೨೧ ಆಗಿರುತ್ತದೆ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5 ಏಪ್ರಿಲ್ ೨೦೨೧ ಕೊನೆಯ ದಿನಾಂಕ ಆಗಿರುತ್ತದೆ. ಅಷ್ಟರಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇನ್ನು ಅಭ್ಯರ್ಥಿಗಳಿಗೆ ಇರಬೇಕಾದ ವಿದ್ಯಾರ್ಹತೆಗಳು ಏನು ಎಂದು ನೋಡುವುದಾದರೆ , ಅಭ್ಯರ್ಥಿಗಳು ಹತ್ತನೆತರಗತಿ ಪಾಸ್ ಆಗಿರಬೇಕು. ಹಾಗೂ light and heavy valid driving licence ಹೊಂದಿರಬೇಕು ಹಾಗೂ ಮೂರು ವರ್ಷ light and heavy motor vehicle driving ಅನುಭವ ಕೂಡಾ ಹೊಂದಿರಬೇಕು.

ಇನ್ನು ಆಯ್ಕೆಯ ಪ್ರಕ್ರಿಯೆ ನೋಡುವುದಾದರೆ , ಯಾವುದೇ ಪರೀಕ್ಷೆಗಳನ್ನು ಇಲ್ಲಿ ನಡೆಸಲಾಗುವುದಿಲ್ಲ. ಕೇಂದ್ರ ಸರ್ಕಾರದ ಈ ಹುದ್ದೆಗೆ ಅಭ್ಯರ್ಥಿಗಳಿಗೆ ಕೇವಲ ಅವರನ್ನು ಡ್ರೈವಿಂಗ್ ಟೆಸ್ಟ್ ಮೂಲಕ ನೇಮಕ ಮಾಡಿಕೊಳ್ಳಲಾಗುವುದು. ಇನ್ನು ಅರ್ಜಿ ಶುಲ್ಕ ಎಷ್ಟು ಎಂದು ನೋಡುವುದಾದರೆ , ಯಾವುದೇ ರೀತಿಯ ಅರ್ಜಿ ಶುಲ್ಕಗಳನ್ನು ಇಲ್ಲಿ ಪಾವತಿಸಬೇಕಾದ ಅಗತ್ಯತೆ ಇರುವುದಿಲ್ಲ. ಇನ್ನು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎಂದು ನೋಡುವುದಾದರೆ, WWW.indiapost.gov.in ಈ ವೆಬ್ಸೈಟ್ ಗೆ ಭೇಟಿ ನೀಡಿ ಅಪ್ಲಿಕೇಶನ್ ಫಾರ್ಮ್ ಪಡೆದು ಅದನ್ನು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಬೇಕು. ಅರ್ಜಿ ಕಳುಹಿಸುವ ವಿಳಾಸ :- The Senior manager, mail motor service, C-121, Naraina Industrial Area phase – I, Naraina New Delhi 110028 ಈ ವಿಳಾಸಕ್ಕೆ ಅರ್ಜಿ ಕಳುಹಿಸಬೇಕು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *