ರೈತರನ್ನು ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ, ಕೃಷಿ ಪ್ರಧಾನವಾದ ದೇಶ ನಮ್ಮ ಭಾರತ. ಇಲ್ಲಿಯ ರೈತರು ಹಲವು ಬೆಳೆಗಳನ್ನು ಬೆಳೆದು ಸಾಧನೆ ಮಾಡಿದ್ದಾರೆ. ಕೃಷಿಯಲ್ಲಿ ಸ್ಮಾರ್ಟ್ ಐಡಿಯಾದಿಂದ ಇಳುವರಿ ಹೆಚ್ಚಿಸಿ ಲಾಭ ಗಳಿಸಿದ ರೈತನ ಬಗ್ಗೆ, ಹಾಗೂ ಅವರ ಸ್ಮಾರ್ಟ್ ಐಡಿಯಾ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ನಮ್ಮ ರೈತರು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟದ ಪಟ್ರೇನಹಳ್ಳಿಯ ರೈತ ಗಿರೀಶ್ ಸೇವಂತಿ ಗಿಡವನ್ನು ಬೆಳೆಸಿದ್ದಾರೆ. ಈ ಬೆಳೆಗೆ ಸ್ಮಾರ್ಟ್ ಐಡಿಯಾ ಮಾಡಿದ್ದಾರೆ ಅದೇನೆಂದರೆ ಗಿರೀಶ್ ಅವರು ಜಿಲ್ಲಾಡಳಿತ ಭವನದ ಎದುರಿಗಿರುವ ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಸೇವಂತಿ ಗಿಡಗಳನ್ನು ಬೆಳೆಸಿದ್ದು ಹೂದೋಟಕ್ಕೆ ಜಗಮಗಿಸುವ ಲೈಟಿಂಗ್ ವ್ಯವಸ್ಥೆಯನ್ನು ಮಾಡಿ ನೋಡುಗರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ಅವರು ಸೇವಂತಿ ಹೂವಿನ ಇಳುವರಿಯನ್ನು ಹೆಚ್ಚಿಸಲು ಸಾಲಾಗಿ ವಿದ್ಯುತ್ ದೀಪದ ವ್ಯವಸ್ಥೆಯನ್ನು ಮಾಡಿದ್ದಾರೆ. ಚಳಿಗಾಲದ ಸಮಯದಲ್ಲಿ ಸೂರ್ಯನ ಶಾಖ ಕಡಿಮೆ ಇರುತ್ತದೆ ಇದರಿಂದ ಗಿಡಗಳ ಬೆಳವಣಿಗೆ ಕಡಿಮೆಯಾಗಲಿದ್ದು ಗಿಡಗಳಿಗೆ ಶಾಖ ಒದಗಿಸಲು 500-600 ವಿದ್ಯುತ್ ದೀಪಗಳನ್ನು ಅಳವಡಿಸಿದ್ದಾರೆ.
ಗಿರೀಶ್ ಅವರು ಬೆಳೆದ ಅವರ ಜಮೀನಿನ ಸೇವಂತಿ ಹೂವುಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದ್ದು ಬಂಪರ್ ಬೆಲೆಯು ಸಿಗುತ್ತಿದೆ. ಅಷ್ಟೇ ಅಲ್ಲದೆ ಇವರ ಅಕ್ಕ ಪಕ್ಕದ ರೈತರು ಇವರಂತೆ ತಮ್ಮ ಜಮೀನಿಗೆ ಲೈಟಿಂಗ್ ವ್ಯವಸ್ಥೆ ಮಾಡಲು ಇವರಿಂದ ಪ್ರೇರಣೆ ಪಡೆದಿದ್ದಾರೆ. ಲೈಟಿಂಗ್ ವ್ಯವಸ್ಥೆ ಮಾಡಲು ಪ್ರತ್ಯೇಕ ಪವರ್ ಕನೆಕ್ಷನ್ ಪಡೆದಿದ್ದು ತಿಂಗಳಿಗೆ ಅಂದಾಜು 10,000 ರೂಪಾಯಿ ಕರೆಂಟ್ ಬಿಲ್ ಬರುತ್ತದೆ ಎಂದು ರೈತ ಗಿರೀಶ್ ಹೇಳಿದ್ದಾರೆ. ಕೃಷಿ ಎಂದರೆ ಮೂಗು ಮುರಿಯುವ ಜನರ ಮಧ್ಯೆ ಗಿರೀಶ್ ಅವರ ಸಾಧನೆ ಸ್ಮರಣೀಯ. ಕೆಲಸವಿಲ್ಲದೆ ಮನೆಯಲ್ಲಿ ಇರುವ ಯುವಕರಿಗೆ ಗಿರೀಶ್ ಅವರ ಜೀವನ ಮಾದರಿಯಾಗಿದೆ. ಈ ಮಾಹಿತಿಯನ್ನು ಕೃಷಿಕರಿಗೆ ತಪ್ಪದೆ ತಿಳಿಸಿ
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.