ಸಂತಾನ ಭಾಗ್ಯ ಇಲ್ಲದೆ ಕೊರಗುವ ಮಂದಿಗೆ ಸೂಕ್ತ ನಾಟಿ ಔಷಧಿ ನೀಡುವ ವಿಜಯಲಕ್ಷ್ಮೀ, ಮಕ್ಕಳಿಲ್ಲದ ದಂಪತಿಗೆ ಇವರ ಔಷದಿ ರಾಮಬಾಣ..!

Hit

ತಮ್ಮ ತಮ್ಮ ದಾಪಂತ್ಯ ಜೀವನ ಚೆನ್ನಾಗಿರಬೇಕೆಂದರೆ ಆ ದಂಪತಿಗಳಿಗೆ ಮಕ್ಕಳಾದರೆ ಆ ಸಂಸಾರ ಆನಂದ ಸಾಗರವಾಗಿರುತ್ತದೆ. ಮದುವೆಯಾದ ಒಂದರಿಂದ ಎರಡು ವರ್ಷದಲ್ಲಿ ಪ್ರತಿಯೊಬ್ಬರು ಮಕ್ಕಳನ್ನು ಪಡೆಯುವ ಹಂಬಲ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದ ಬಂಜೆತನ ಎಷ್ಟೋ ಜನರನ್ನು ಕಾಡುತ್ತಿದೆ. ಹೀಗೆ ಸಂತಾನ ಸಮಸ್ಯೆಯಿಂದ ನಳಲುವವರ ಬಾಳಲ್ಲಿ ಬೆಳಕಾಗಿದ್ದಾರೆ ಇಲ್ಲೋರ್ವ ನಾಟಿ ವೈದ್ಯೆ. ಇವರ ಸಂಪೂರ್ಣ ವಿಳಾಸ ಲೇಖನದ ಕೊನೆಯ ಭಾಗದಲ್ಲಿ ಇದೆ ನೋಡಿ.

ಸ್ತ್ರೀ ಅಥವಾ ಪುರುಷರ ಸಮಸ್ಯೆಗಳಿಂದ ಅಥವಾ ಹಲವು ಕಾರಣಗಳಿಂದ ಕೆಲ ದಂಪತಿಗಳಿಗೆ ಮಕ್ಕಳ ಭಾಗ್ಯ ದೊರೆತಿರುವುದಿಲ್ಲ. ಆ ರೀತಿಯ ದಂಪತಿಗಳು ಅಲೆಯದ ಆಸ್ಫತ್ರೆಗಳಿರುವುದಿಲ್ಲ. ಹೀಗೆ ಮಕ್ಕಳಿಲ್ಲ ಎಂಬ ಕೊರಗುತ್ತಿರುವ ದಂಪತಿಗಳಿಗೆ ಸಂತಾನ ಭಾಗ್ಯ ಕಲ್ಪಿಸುವ ಕಾರ್ಯವನ್ನು ತಾಲೂಕಿನ ವಳಲಂಬೆಯ ವಿಜಯಲಕ್ಷ್ಮೀ ಎಂಬುವರು ಮಾಡುತ್ತಿದ್ದಾರೆ.

ವಿಜಯಲಕ್ಷ್ಮೀ ಅವರು ಮಕ್ಕಳಿಲ್ಲದ ಹಲವಾರು ದಂಪತಿಗಳಿಗೆ ಮಕ್ಕಳನ್ನು ಕರುಣಿಸುವ ಮಹಾತಾಯಿ ಎಂದೇ ಪ್ರಸಿದ್ಧರು. ಚಿಕಿತ್ಸೆ ನೀಡುವ ಮುನ್ನ ಜಾತಕಗಳನ್ನೂ ವಿಮರ್ಶಿಸಿ ಔಷಧಿ ನೀಡುತ್ತಾರೆ. ಹೀಗಾಗಿ ವಿನೂತನ ಮಾದರಿಯ ವೇದ-ವೈದ್ಯ ಚಿಕಿತ್ಸೆಯ ಮೂಲಕ ಎಲ್ಲಾ ಸಮಸ್ಯೆ ದೂರ ಮಾಡಿ ಚಿಕಿತ್ಸೆ ನೀಡುವ ಮೂಲಕ ಯಶಸ್ಸು ಸಾಧಿಸಿದ್ದಾರೆ. ವಳಲಂಬೆಯ ಆಂಗೀರಸ ವೇದಸದನದಲ್ಲಿರುವ ಕರುವಜೆ ಕೇಶವ ಜೋಯಿಸರ ಪತ್ನಿಯಾಗಿರುವ ಇವರು ಕಳೆದ 25 ವರ್ಷಗಳಿಂದ ನಾಟಿ ಔಷಧಿ ನೀಡುತ್ತಿದ್ದಾರೆ. ವಿಜಯಲಕ್ಷ್ಮೀ ಸುಮಾರು ಇನ್ನೂರಕ್ಕೂ ಹೆಚ್ಚು ಗಿಡ ಮೂಲಿಕಾ ಸಸ್ಯಗಳನ್ನು ಗುರುತಿಸಿ ಅದನ್ನು ಚಿಕಿತ್ಸೆಗೆ ಬಳಸಿಕೊಳ್ಳುತ್ತಾರೆ. ವಿವಿಧ ಗಿಡಮೂಲಿಕೆಗಳ ಕುರಿತು ಅವರೇ ಒಂದು ಜ್ಞಾನ ಭಂಡಾರವೆನಿಸಿದ್ದಾರೆ. ಸ್ತ್ರೀಯರ ಎಲ್ಲಾ ಸಮಸ್ಯೆಗಳಿಗೂ ಚಿಕಿತ್ಸೆ ನೀಡುವ ಇವರು, ಋತುಮತಿಯಾದ ನಂತರದ ಸಮಸ್ಯೆಗಳಿಗೂ ಪರಿಹಾರ ತಿಳಿಸುತ್ತಾರೆ.

ಈ ನಾಟಿ ವೈದ್ಯಕೀಯದ ಮೂಲಕ ಪಡೆಯುವಂತೆ ಮಾಡಿದ್ದಾರೆ. ಮೊದಲಾಗಿ ಅವರು ದಂಪತಿಯ ಜಾತಕ ಪರಿಶೀಲನೆಗೆ ಇಡುತ್ತಾರೆ. ಬಹುತೇಕ ದಂಪತಿಗೆ ಪ್ರಜಾರ್ಥಿ ಹೋಮ ನೆರವೇರಿಸಲು ಸೂಚಿಸುತ್ತಾರೆ. ಆ ಬಳಿಕ ಗಿಡ, ಬಳ್ಳಿ, ಬೇರು ನಾರು, ಸೊಪ್ಪುಗಳನ್ನೊಳಗೊಂಡ ಚಿಕಿತ್ಸೆ ಶುರುವಾಗುತ್ತೆ. ಔಷಧಿಗಿಂತ ಮೂರು ಪಟ್ಟು ಹೆಚ್ಚು ಪಥ್ಯ ಕಡ್ಡಾಯ. ಇಷ್ಟು ಮಾಡಿದರೆ ಮಗು ಸಂಸಾರಕ್ಕೆ ಬಂತು ಎಂದೇ ಅರ್ಥ ಎನ್ನುತ್ತಾರೆ ಅವರು. ಸ್ತ್ರೀಯರ ಸಮಸ್ಯೆಯಾದರೆ 3 ತಿಂಗಳು, ಪುರುಷರ ಸಮಸ್ಯೆಯಾದರೆ 11 ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎನ್ನುವ ವಿಜಯಲಕ್ಷ್ಮಿ ಮದುವೆಯಾಗಿ 15 ವರ್ಷಗಳ ಕಾಲ ಮಕ್ಕಳಾಗದೇ ಇರುವವರಿಗೂ ಈ ಚಿಕಿತ್ಸೆ ಫಲ ನೀಡಿದೆ ಎನ್ನುತ್ತಾರೆ. ಮೊದಲ ಮಗುವಿಗೆ ಮಾತ್ರವೇ ಈ ಚಿಕಿತ್ಸೆ, ಆದರೆ ಎರಡನೇ ಮಗುವಿಗೆ ಈ ಚಿಕಿತ್ಸೆ ಅಗತ್ಯವಿರುವುದಿಲ್ಲ.

ವಳಲಂಬೆಯ ಆಂಗೀರಸ ವೇದ ಸದನಕ್ಕೆ ಅನೇಕರು ನಿತ್ಯವೂ ಚಿಕಿತ್ಸೆಗೆ ಬರುತ್ತಾರೆ. ಯಾರಿಂದಲೂ ಯಾವ ಪ್ರತಿಫಲವನ್ನು ಅಪೇಕ್ಷಿಸದೇ ಅವರು ವನಸ್ಪತಿ ಔಷಧಿ ನೀಡುತ್ತಾರೆ. ದೇವರ ಕೆಲಸವೆಂದು ಚಿಕಿತ್ಸೆ ನೀಡುತ್ತಾರೆ. ಕರ್ಮಫಲ ನೀಡುವುದು ದೇವರಿಗೆ ಬಿಟ್ಟದ್ದು ಎಂದು ಎನ್ನುವುದು ವಿಷಯಲಕ್ಷ್ಮೀ ಅವರ ಅಭಿಪ್ರಾಯವಾಗಿದೆ. ಔಷಧಿಗಾಗಿ ಮನೆಯಂಗಳದಲ್ಲೂ ಸಾಕಷ್ಟು ಔಷಧಿ ಗಿಡಗಳಿವೆ. ಮತ್ತಷ್ಟು ಬೇಕಾದರೆ ಕಾಡಿನ ಕಡೆಗೆ ನಡೆಯುತ್ತಾರೆ. ವಿಜಯಲಕ್ಷ್ಮಿಯವರನ್ನು ಸಂಪರ್ಕಿಸಲು ದೂರವಾಣಿ ಸಂಖ್ಯೆ:You can contact Karuvaje Vijayalakshmi Amma, valalambe : gutthigar post sullia taluku DK  Angeerasavedasadana home 8762129003 ;6363362671

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *