ಕೊನೆಯ ಬೆರಳು ಚಿಕ್ಕದಾಗಿದ್ದರೆ: ನಿಮ್ಮ ಉಂಗುರ ಬೆರಳಿನ ಸುಪೀರಿಯರ್ ಗಂಟಿಗಿಂತ ಚಿಕ್ಕದಾದ ಎತ್ತರವನ್ನು ಕಿರುಬೆರಳು ಹೊಂದಿದ್ದರೆ, ನೀವು ಜನರ ಮಧ್ಯೆ ತುಂಬಾ ರಿಸರ್ವಡ್ ಅಥವಾ ನಾಚಿಕೆ ಸ್ವಭಾವದ ವ್ಯಕ್ತಿ ಎಂದು ಹೇಳುತ್ತದೆ. ಜೊತೆಗೆ ನಿಮಗೆ ದೊಡ್ಡ ದೊಡ್ಡ ಕನಸುಗಳಿವೆ ಮತ್ತು ಆಸೆಗಳಿವೆ. ಆದರೆ ತುಂಬಾ ಅಂಜಿಕೆಯ ಸ್ವಭಾವದಿಂದಾಗಿ ಕೆಲವು ಅವಕಾಶಗಳಿಂದ ದೂರ ಉಳಿಯುವಂತೆ ಮಾಡುತ್ತದೆ. ಆದರೆ ನಿಮ್ಮಲ್ಲಿ ಅಂದುಕೊಂಡಿದ್ದನ್ನು ಸಾಧಿಸುವ ಛಲವಿದೆ.
ಈವನ್ ಫಿಂಗರ್: ಎಂದರೆ ನಿಮ್ಮ ಕಿರುಬೆರಳು ಉಂಗುರದ ಬೆರಳಿನ ಸುಪೀರಿಯರ್ ಗಂಟಿನಷ್ಟಿದ್ದರೆ ನಿಮ್ಮದು ಸಮತೋಲಿತ ವ್ಯಕ್ತಿತ್ವ ಎನ್ನಬಹುದು. ನಿಮ್ಮನ್ನು ಇರಿಟೇಟ್ ಮಾಡಲು ಹೆಚ್ಚು ಶ್ರಮ ಬೇಕಾಗುತ್ತದೆ. ಜೊತೆಗೆ ನೀವು ಬೇಗ ಒತ್ತಡಕ್ಕೆ ಬೀಳುವುದಿಲ್ಲ. ನಿಮ್ಮ ಈ ನಡವಳಿಕೆಯಿಂದ ಜನರು ನಿಮ್ಮನ್ನು ತುಂಬಾ ಕೋಲ್ಡ್ ಪರ್ಸನ್ ಎಂದು ತಿಳಿದುಕೊಳ್ಳುವಂತೆ ಮಾಡುತ್ತದೆ. ಆದರೆ ಜನರು ಅಂದುಕೊಳ್ಳುವುದಕ್ಕಿಂತ ಹೆಚ್ಚಾದ ಚಾರ್ಮ್ ನಿಮ್ಮಲ್ಲಿರುತ್ತದೆ.
ಉದ್ದವಾದ ಕಿರು ಬೆರಳು: ಕಿರುಬೆರಳು ಉಂಗುರದ ಬೆರಳಿನ ಸುಪೀರಿಯರ್ ಗಂಟಿಗಿಂತಲೂ ಎತ್ತರದಲ್ಲಿದ್ದರೆ ನೀವು ತುಂಬಾ ಚಾರ್ಮಿಂಗ್ ಮತ್ತು ವೈಬ್ರೆಂಟ್ ವ್ಯಕ್ತಿತ್ವದವರು. ನಿಮಗೆ ಸೋಷಿಯಲ್ ಅಗಿರುವುದು ಇಷ್ಟವಾಗುತ್ತದೆ. ಆದರೆ ಜನರು ನಿಮ್ಮನ್ನು ನಂಬುವಂತೆ ಮಾಡಲು ಸ್ವಲ್ಪ ಕಷ್ಟಪಡಬೇಕಾಗುತ್ತದೆ.
ಒಂದೇ ಎತ್ತರವನ್ನು ಹೊಂದಿದ್ದರೆ: ಸಾಮಾನ್ಯವಾಗಿ ಕೊನೆ ಬೆರಳು ಉಂಗುರದ ಬೆರಳಿಗಿಂತ ಚಿಕ್ಕದಾಗಿರುತ್ತದೆ. ಆದರೆ ನಿಮ್ಮ ಕಿರುಬೆರಳು ಉಂಗುರದ ಬೆರಳಿನಷ್ಟೆ ಉದ್ದವಿದ್ದರೆ ನೀವು ತುಂಬಾ ಅಪರೂಪದ ವ್ಯಕ್ತಿ. ಇಂತಹ ವ್ಯಕ್ತಿಗಳು ಸ್ವಲ್ಪ ಶ್ರಮದ ಮೂಲಕ ಅತ್ಯುನ್ನತ ಹುದ್ದೆಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.