ಈ ರಿಂಗ್ ಬಳಸಿದರೆ ಒಂದು ವರ್ಷ ಮಕ್ಕಳು ಆಗಲ್ಲ ಪ್ಯಾಮಿಲಿ ಪ್ಲಾನಿಂಗ್ ಮಾಡುವವರಿಗೆ ಬೆಸ್ಟ್ ಏನಿದು ಅಂತೀರಾ ಇಲ್ಲಿ ನೋಡಿ..!

Hit

ಹೌದು ಈ ರಿಂಗ್ ಬಳಸಿದರೆ ಒಂದು ವರ್ಷ ಮಕ್ಕಳು ಆಗಲ್ಲ ಏನಿದು ಅಂತೀರಾ ಇಲ್ಲಿದೆ ನೋಡಿ ಇದರ ಸಂಪೂರ್ಣ ಮಾಹಿತಿ. ಬೇಡವಾದ ಗರ್ಭಧಾರಣೆ ತಡೆಗಟ್ಟುವುದಕ್ಕೆ ಕಾಲಾನುಕ್ರಮದಲ್ಲಿ ಹತ್ತು ಹಲವು ಸುಧಾರಿತ ಕ್ರಮಗಳನ್ನು ಕಂಡುಹಿಡಿಯಲಾಗಿದ್ದು, ಈಗ ಸಂಶೋಧಕರು ಮತ್ತೊಂದು ಸುಧಾರಿತ ಕ್ರಮವನ್ನು ಕಂಡು ಹಿಡಿದಿದ್ದಾರೆ. ಗರ್ಭಧಾರಣೆ ತಡೆಗಟ್ಟುವುದಕ್ಕಾಗಿಯೇ ರಿಂಗ್ ನ್ನು ತಯಾರಿಸಲಾಗಿದ್ದು, ಇದನ್ನು ಧರಿಸಿದರೆ 1 ವರ್ಷ ಗರ್ಭಧಾರಣೆಯನ್ನು ತಡೆಗಟ್ಟಬಹುದಾಗಿದೆ. ಅನ್ನೋವೆರ ಎಂಬ ಗರ್ಭ ನಿರೋಧಕ ರಿಂಗ್ (vaginal ring) ನ್ನು 1 ವರ್ಷಗಳ ಕಾಲ ಬಳಕೆ ಮಾಡಲು ಸಾಧ್ಯವಾಗುವಂತೆ ತಯಾರಿಸಲಾದೆ.

ಗರ್ಭನಿರೋಧಕ ಔಷಧವನ್ನು ಬಿಡುಗಡೆ ಮಾಡುವ ರೀತಿಯಲ್ಲಿ ಈ ರಿಂಗ್ ನ್ನು ತಯಾರಿಸಲಾಗಿದೆ. ಶೇ.2.98 ರಷ್ಟು ಮಾತ್ರ ವೈಫಲ್ಯದ ಪ್ರಮಾಣ ಇದೆ ಎಂದು ಎಂಡೋಕ್ರೈನ್ ಸೊಸೈಟಿಯಲ್ಲಿ ನೀಡಲಾದ ಪ್ರಸ್ತುತಿ ವೇಳೆ ತಿಳಿಸಲಾಗಿದೆ.

ಗರ್ಭಧಾರಣೆ ತಡೆಗಟ್ಟುವುದಕ್ಕೆ ತೆಗೆದುಕೊಳ್ಳುವ ಉಳಿದ ಕ್ರಮಗಳಿಗಿಂತ ಈ ಹೊಸ ಕ್ರಮ ಶೇ.97 ರಷ್ಟು ಯಶಸ್ವಿಯಾಗಿರಲಿದೆ ಎಂದು ಸಂಶೋಧಕ ಡೇವಿಡ್ ಎಫ್ ಆರ್ಚರ್ ಹೇಳಿದ್ದಾರೆ. ಗರ್ಭ ನಿರೋಧಕ ರಿಂಗ್ ಶೀಘ್ರವೇ ಮಾರುಕಟ್ಟೆಗೆ ಬರಲಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *