ಏಸ್ ಅಕ್ಷರದವರೇ ಯಾಕೆ ಹಿಂಗೇ ಇವರ ಸ್ವಭಾವ ಎಂತದು ಗೊತ್ತಾ..!

Hit

ಎಸ್ ವರ್ಣಮಾಲೆಯ ಅತ್ಯಂತ ಶಕ್ತಿಶಾಲಿ ಅಕ್ಷರಗಳಲ್ಲಿ ಒಂದಾಗಿದೆ. ಎಸ್ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವವರು ಜನರು ಸಾಮಾನ್ಯವಾಗಿ ನಾಯಕತ್ವದ ಗುಣಗಳನ್ನು ಪ್ರದರ್ಶಿಸುತ್ತಾರೆ ಎಂದು ಹೇಳಲಾಗುತ್ತದೆ. ಎಸ್ ಅಕ್ಷರವನ್ನ ಸಂಖ್ಯಾಶಾಸ್ತ್ರದಲ್ಲಿ ನಂಬರ್ 1 ಗೆ ಸಮ ಎಂದು ನಂಬಲಾಗುತ್ತದೆ ಅಂತಹ ಹೆಸರಿನವರು ನಾಯಕರು ಎನಿಸಿಕೊಳ್ಳುತ್ತಾರೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಅಂತಹ ವ್ಯಕ್ತಿಗಳು ಸಾಕಷ್ಟು ಮಹತ್ವಾಕಾಂಕ್ಷೆ ಹೊಂದಿದ್ದು , ಅವರು ಜೀವನದಲ್ಲಿ ಸಂಬಂಧಗಳನ್ನು ಸಹ ಗೌರವಿಸುತ್ತಾರೆ. ಅವರ ಈ ಗುಣ ಅವರ ವೈಯಕ್ತಿಕ ಮತ್ತು ವೃತ್ತಿಪರ ಸಂಬಂಧಗಳನ್ನು ವಿಸ್ತರಿಸುತ್ತವೆ ಎನ್ನಬಹುದು. ಇವರು ತಾವು ನಂಬುವ ವ್ಯಕ್ತಿಗೆ ಯಾವುದೇ ಸಂದರ್ಭದಲ್ಲಿಯೂ ಬದ್ಧರಾಗಿರುತ್ತಾರೆ.

ಇವರು ತೀವ್ರ ನಿಷ್ಠೆ ಉಳ್ಳವರಾಗಿದ್ದು, ಬಹಿರಂಗ ಸ್ಥಳಗಳಲ್ಲಿ ರೋಮ್ಯಾಂಟಿಕ್ ಆಗಿರುವುದಿಲ್ಲ. ದುಬಾರಿ ಉಡುಗೊರೆಗಳು ಮತ್ತು ಮಾತಿಗಿಂತ ಹೆಚ್ಚಾಗಿ ಮೌನವಾಗಿದ್ದು ಕಾರ್ಯ ಸಾಧನೆ ಮಾಡುವುದನ್ನು ಹೆಚ್ಚು ನಂಬುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಇವರ ನಂಬರ್ 1.ಇಂತಹವರು ಇತರರ ಬಗ್ಗೆ ಪ್ರೀತಿ ಮತ್ತು ಸಹಾನುಭೂತಿ ತೋರಿಸುತ್ತಾರೆ. ಅವರು ತೊಂದರೆಯಲ್ಲಿರುವ ಯಾರಿಗಾದರೂ ಸಹಾಯ ಮಾಡಲು ಧಾವಿಸಿ ಬರುತ್ತಾರೆ.

ಹೆಸರು ಎಸ್ ಅಕ್ಷರದಿಂದ ಪ್ರಾರಂಭವವರು ಸಾಕಷ್ಟು ಮಹತ್ವಾಕಾಂಕ್ಷೆ ಉಳ್ಳವರು, ಆತ್ಮವಿಶ್ವಾಸ, ದೃಢ ನಿರ್ಣಯಿಗಳು, ಸ್ವಾವಲಂಬಿಗಳಾಗಿದ್ದು, ಜೀವನದಲ್ಲಿ ತಮ್ಮ ಎಲ್ಲಾ ಗುರಿಗಳನ್ನು ಸಾಧಿಸಲು ಬಹಳ ಶ್ರಮಿಸಲು ಸಿದ್ಧರಿರುತ್ತಾರೆ. ಧೈರ್ಯದಲ್ಲಿ ವರ್ಣಮಾಲೆಯ ಇತರ ಅಕ್ಷರಗಳಿಗಿಂತ ಎಸ್ ಅಕ್ಷರವು ಭಿನ್ನ ಎನಿಸುತ್ತದೆ. ಅದು ನಿರ್ಣಾಯಕ ಸ್ವಭಾವದಾಗಿದ್ದು, ಅವರ ನಿರ್ಣಯಗಳು ಪ್ರಬಲ ಹೊಡೆತವೇ ಎಂದು ಹೇಳಬಹುದು. ಅವರು ಕಲ್ಪಿಸಿಕೊಳ್ಳುತ್ತಾ ಕಾಲ ಕಳೆಯುವುದಿಲ್ಲ. ಸಮಯ ವ್ಯರ್ಥ ಮಾಡದೆ ಕೆಲಸ ಸಾಧಿಸುತ್ತಾರೆ ಎಂದೇ ಹೇಳಲಾಗುತ್ತದೆ.

ಇಂತಹ ವ್ಯಕ್ತಿಗಳು, ಪ್ರಾಮಾಣಿಕ ಮತ್ತು ವಿಶ್ವಾಸಕ್ಕೆ ಅರ್ಹರಾಗಿದ್ದು, ಕೊಂಚ ಸಿಡಿಯುವ ಸ್ವಭಾವದವಾರಗಿರುತ್ತಾರೆ , ಅಂತಹ ಜನರು ಕೋಪಗೊಂಡಾಗ ಅಥವಾ ಅಸಮಾಧಾನಗೊಂಡಾಗ ಬಹಳ ಹಠಾತ್ತಾಗಿ ವರ್ತಿಸಬಹುದು. ಈ ನಡವಳಿಕೆಯಿಂದ ಅವರನ್ನು ಎದುರಿಸುವುದು ಕಷ್ಟಕರ ಎನಿಸಬಹುದು.

ಎಸ್ ಅಕ್ಷರದಿಂದ ಹೆಸರು ಪ್ರಾರಂಭವಾಗುವ ವ್ಯಕ್ತಿಗಳು, ತಮ್ಮ ಭಾವನೆಗಳನ್ನು ಇತರ ಜನರಿಂದ ಮರೆಮಾಚುವ ವಿಲಕ್ಷಣ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇದರಿಂದ ಆಗಾಗ್ಗೆ ಅವರು ಖಿನ್ನತೆಗೆ ಒಳಗಾಗುತ್ತಾರೆ. ಮತ್ತು ಅವರು ಅಸಮಾಧಾನಗೊಂಡಾಗ ಎಲ್ಲರಿಂದ ದೂರವಿರುತ್ತಾರೆ. ಅವರು ತಮ್ಮ ಭಾವನೆಗಳನ್ನು ಮರೆಮಾಚುವ ಸಾಮರ್ಥ್ಯ ಹೊಂದಿದ್ದರೂ ಸಹ, ಸಂಗಾತಿ ಅಥವಾ ಸ್ನೇಹಿತರಂತಹ ತೀರ ಹತ್ತಿರದವರ ಬಳಿ ಯಾವ ವಿಷಯಗಳನ್ನು ಮುಚ್ಚಿಡದೆ ಹಂಚಿಕೊಳ್ಳುತ್ತಾರೆ.

ಎಸ್ ಅಕ್ಷರವು ಉತ್ಸಾಹ ಮತ್ತು ಆತ್ಮೀಯತೆಯನ್ನು ಸಹ ಸಂಕೇತಿಸುತ್ತದೆ. ಅಂತಹ ವ್ಯಕ್ತಿಗಳು ತಮ್ಮ ಸಂಗಾತಿಯೊಂದಿಗೆ ಆತ್ಮೀಯರಾಗಲು ಇಷ್ಟಪಡುತ್ತಾರೆ ಮತ್ತು ಆದ್ದರಿಂದ, ಅವರ ಸಂಬಂಧವನ್ನು ಹೆಮ್ಮೆಯಿಂದ ಹೆಗಲ ಮೇಲೆ ಹೊತ್ತುಕೊಳ್ಳುತ್ತಾರೆ.

ಇಂತಹ ವ್ಯಕ್ತಿಗಳು, ಜೀವನದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸುತ್ತಾರೆ, ಏಕೆಂದರೆ ಅದು ಅವರ ಮೇಲೆ ಯಾವುದೇ ರೀತಿಯಲ್ಲಿ ಕೆಟ್ಟ ಪರಿಣಾಮ ಬೀರಬಾರದು ಎಂಬುದು ಅವರ ಉದ್ದೇಶವಾಗಿರುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *