ಬಾಳೆಹಣ್ಣು ಪ್ರತಿಯೊಬ್ಬರಿಗೂ ಗೊತ್ತಿರುವ ಹಣ್ಣು. ಸಾಮಾನ್ಯವಾಗಿ ಬಾಳೆಹಣ್ಣು ಆರೋಗ್ಯಕರವಾದದ್ದು ಅನ್ನೋದು ತಿಳಿದಿರುವ ವಿಚಾರವೇ. ಆರೋಗ್ಯದ ಜೊತೆಗೆ ತ್ವಚೆಗೂ ಈ ಹಣ್ಣು ಉತ್ತಮವಾದದ್ದು. ಬಾಳೆ ಹಣ್ಣುಗಳಲ್ಲೂ ಹಲವಾರು ವಿಧಗಳಿವೆ. ಸಾಮಾನ್ಯವಾಗಿ ಪೂಜೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಬಾಳೆ ಹಣ್ಣು. ಹಾಗಾದರೆ ಬಾಳೆ ಹಣ್ಣಿನ ಪ್ರಯೋಜನಗಳು ಏನು ಅಂತೀರಾ ಮುಂದೆ ನೋಡಿ. ಸಾಮಾನ್ಯವಾಗಿ ಬಾಳೆಹಣ್ಣನ್ನು ಎರಡು ತಿಂದು ಒಂದು ಲೋಟ ನೀರು ಕುಡಿದರೆ ಸಾಕು ಊಟ ಮಾಡಿದಷ್ಟು ಪೋಷಕಾಂಶ ಆಗುತ್ತದೆ ಅನ್ನೋದು ಹಲವರ ಮಾತು. ಹೀಗೆ ಬಾಳೆಹಣ್ಣು ಸಾಕಷ್ಟು ಪೋಷಕಾಂಶಗಳುನ್ನು ಹೊಂದಿವೆ.
ಸಾಮನ್ಯವಾಗಿ ಜಿಮ್ ಮಾಡುವವರು ಅಥವಾ ವ್ಯಾಯಾಮ ಮಾಡುವವರು ಬಾಳೆಹಣ್ಣನ್ನು ಹೆಚ್ಚಾಗಿ ತಿನ್ನಬೇಕು. ಬಾಳೆಹಣ್ಣು ತಿನ್ನೋದರಿಂದ ಹೆಚ್ಚಿನ ಆಯಾಸವಾಗುವುದಿಲ್ಲ. ಯಾಕಂದರೆ ಬಾಳೆಹಣ್ಣಿನಲ್ಲಿರುವ ಸಕ್ಕರೆ ರಕ್ತದಲ್ಲಿ ನಿಧಾನವಾಗಿ ಮಿಳಿತಗೊಂಡು ಸೂಕ್ತ ಪ್ರಮಾಣದಲ್ಲಿ ಸ್ನಾಯುಗಳಿಗೆ ಪೂರೈಸುತ್ತದೆ. ಸದ್ಯ ಜಿಮ್ ಮಾಡುವವರಿಗೆ ಟ್ರೈನರ್ ಗಳು ಕೂಡ ಈ ಮಾತನ್ನು ಹೇಳುತ್ತಿರುತ್ತಾರೆ.
ಇನ್ನು ಮನಸ್ಸನ್ನು ಶಾಂತಗೊಳಿಸಲು ಬಾಳೆಹಣ್ಣನ್ನು ತಿನ್ನುತ್ತಾರೆ. ಅಷ್ಟೆ ಅಲ್ಲ ಖಿನ್ನತೆಗೆ ಒಳಗಾದವರು ಬಾಳೆಹಣ್ಣನ್ನು ತಿನ್ನೋದರಿಂದ ಮನಸ್ಸು ಶಾಂತಗೊಳ್ಳುತ್ತದೆ. ಇನ್ನು ಆರೋಗ್ಯಕ್ಕೆ ಬಾಳೆಹಣ್ಣು ಎಷ್ಟು ಮುಖ್ಯವೋ ತ್ವಚೆಗೂ ಅಷ್ಟೇ ಮುಖ್ಯವಾಗಿದೆ. ಬಾಳೆಹಣ್ಣು ನೈಸರ್ಗಿಕ ಮಾಸ್ಚರೈಸರ್ ಆಗಿದೆ. ಹಾಗಾಗಿ ಇದನ್ನು ಬಳಸುವುದರಿಂದ ನೈಸರ್ಗಿಕ ತ್ವಚೆ ಹೊಂದಬಹುದು. ಬಾಳೆಹಣ್ಣಿನ ಮಾಸ್ಕ್ ಬಳಸುವುದರಿಂದ ತ್ವಚೆ ಕಾಂತಿಯುತವಾಗುತ್ತದೆ. ಮತ್ತು ಮೃದುವಾಗುತ್ತದೆ. ಒಣಗಿದ ಚರ್ಮ ಹೊಂದಿದವರಿಗೆ ಮೋಶ್ಚರೈಸರ್ ಆಗಿ ಬಾಳೆಹಣ್ಣು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.