ಅಂಗಡಿ ಮತ್ತು ಮನೆಗಳಲ್ಲಿ ಧನಲಕ್ಷ್ಮೀ ನೆಲಸಬೇಕು ಅಂದ್ರೆ ಜಸ್ಟ್ ಈ ರೀತಿ ಮಾಡಿ ಲಕ್ಷಿ ಒಲಿಯುತ್ತಾಳೆ..!

Hit

ಮನೆಯಲ್ಲಿ ಮತ್ತು ವ್ಯಾಪಾರದ ಸ್ಥಳಗಳಲ್ಲಿ ಲಕ್ಷ್ಮೀ ನೆಲೆಸಬೇಕೆಂದರೆ ಪ್ರತಿದಿನ ಸಂಜೆ ಮನೆಯನ್ನು ಅಂಗಡಿಯನ್ನು ಶುದ್ಧಗೊಳಿಸಿ ಲಕ್ಷ್ಮೀದೇವಿಯನ್ನು ಸ್ಥಾಪಿಸಿ ರಂಗವಲ್ಲಿಯನ್ನು ಹಾಕಿ ಹೊಸ್ತಿಲು ಪೂಜೆ ಮಾಡಿ ಮನೆಯ ಒಳಗೆ ಪ್ರವೇಶಿಸುವ ಲಕ್ಷ್ಮಿಯನ್ನು ಭಕ್ತಿಯಿಂದ ಅಷ್ಟೋತ್ತರ ಪೋಡಷೋಪಚಾರದಿಂದ ಪೂಜೆ ಮಾಡಿ ಸ್ವಾಗತಿಸಬೇಕು ಸಾಮಾನ್ಯವಾಗಿ ಅಂಗಡಿಯಲ್ಲಿ ಲಕ್ಷ್ಮೀ ಪೋಟೋ ಇದ್ದೆ ಇರುತ್ತದೆ ಜೊತೆಗೆ ಒಂದು ಬೆಳ್ಳಿ ಸುವರ್ಣ ಲಕ್ಷ್ಮೀ ವಿಗ್ರಹ ಮತ್ತು ನಾಣ್ಯಗಳನ್ನು ಇಟ್ಟು ಪೂಜಿಸುತ್ತ ಬಂದರೆ ವ್ಯಾಪಾರದಲ್ಲಿ ಲಾಭಕಂಡು ಬರುತ್ತದೆ.

ಗ್ರಾಹಕರು ಬಂದಾಗ ವಿನಯವಾಗಿ ಅವರೊಂದಿ ನಡೆದುಕೊಂಡು ಪೂಜೆ ಆದ ನಂತರ ಸಿಹಿತಿಂಡಿ ವಿತರಿಸುವ ಸಂಪ್ರದಾಯವನ್ನು ಬೆಳೆಸಿಕೊಳ್ಳಬೇಕು ಅವರಿಂದ ಒಂದೊಳ್ಳೆ ನುಡಿಗಳನ್ನು ಕೇಳಿಸಿಕೊಂಡರೆ ಶುಭವಾಗುವುದು

ಅಂಗಡಿಯಲ್ಲಿ ದೀಪಗಳು ಪ್ರತಿದಿನ ಹಚ್ಚಬೇಕು ಮಧ್ಯಾಹ್ನಕಿಂತಲೂ ಮುಂಚಿತವಾಗಿ ರಾತ್ರಿಗಿತಲೂ ಮುಂಚಿತವಾಗಿ ಪೂಜೆ ಮಾಡಬೇಕು ದೀಪವು ನಂದದಂತೆ ಸಾಕಷ್ಟು ಎಣ್ಣೆ ಅಥವಾ ತುಪ್ಪ ಹಾಕಿರಬೇಕು

ಕೋಪ ಕದನ ಕಾಲಹರಟೆ ಅನವಶ್ಯಕ ಮಾತುಗಳನ್ನು ಪೂಜಾ ಕಾಲದಲ್ಲಿ ಆಡಬಾರದು ಪೂಜೆಗೆ ಅಗತ್ಯವಾದ ಪಂಚಪಾತ್ರೆ ಉದ್ಧರಣೆ ಮುಂತಾದವುಗಳನ್ನು ಸಿದ್ಧಮಾಡಿಕೊಂಡಿರಬೇಕು. ಲಕ್ಷ್ಮೀ ಪೂಜೆ ಸಮಯದಲ್ಲಿ ಎಲ್ಲಕ್ಕಿಂತಲೂ ಮುಖ್ಯವಾದದ್ದು ಭಕ್ತಿ ಶ್ರದ್ಧೆ ಮನಸ್ಸಿನ ಏಕಾಗ್ರತೆ ಎಂಬುದನ್ನು ಮರೆಯಬಾರದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *