ಮಗುವಿನ ಪ್ರಾಣ ಉಳಿಸಿದ್ದಕ್ಕಾಗಿ ಬಂದ ಹಣವನ್ನು ರೈಲ್ವೆ ಉದ್ಯೋಗಿ ಮಾಡಿದ್ದೇನು ಗೊತ್ತಾ?? ತಿಳಿದರೆ ಸೆಲ್ಯೂಟ್ ಮಾಡುತ್ತೀರಾ..!

Hit

ಮಗುವಿನ ಪ್ರಾಣ ಉಳಿಸಿದ್ದಕ್ಕಾಗಿ ಬಂದ ಹಣವನ್ನು ರೈಲ್ವೆ ಉದ್ಯೋಗಿ ಮಾಡಿದ್ದೇನು ಗೊತ್ತಾ?? ತಿಳಿದರೆ ಸೆಲ್ಯೂಟ್ ಮಾಡುತ್ತೀರಾ ಮುಂಬೈ ರೈಲ್ವೆ ನಿಲ್ದಾಣದಲ್ಲಿ ಮಗುವನ್ನು ಕಾಪಾಡಿದ ರೈಲ್ವೆ ಸಿಬ್ಬಂದಿ ಮಯೂರ್ ಅವರ ಕುರಿತು ಇಡೀ ದೇಶದ ಎಲ್ಲೆಡೆ ಸುದ್ದಿಯಾಗಿದೆ, ಅಮ್ಮನ ಕೈತಪ್ಪಿ ರೈಲ್ವೆ ಹಳಿಯ ಮೇಲೆ ಹೋದ ಪುಟ್ಟ ಮಗುವನ್ನು ತಮ್ಮ ಪ್ರಾಣವನ್ನು ಕೂಡ ಲೆಕ್ಕಿಸದೆ ಮಯೂರ ರಾವರಿ ಹಳ್ಳಿಯ ಮೇಲಿಂದ ಪ್ಲಾಟ್ಫಾರ್ಮ್ ಮೇಲೆ ಹತ್ತಿಸಿ ಮಗುವಿನ ಪ್ರಾಣ ಕಾಪಾಡಿದರು.

ಕೇವಲ ಎರಡು ಅಥವಾ ಮೂರು ಸೆಕೆಂಡ್ಗಳ ಕಾಲ ತಡವಾಗಿದ್ದರೂ ಕೂಡ ಮಗು ಮತ್ತೆ ಕೈಗೆ ಸಿಗುತ್ತಿರಲಿಲ್ಲ. ಹೀಗೆ ತಮ್ಮ ಪ್ರಾಣವನ್ನು ಕೂಡ ಲೆಕ್ಕಿಸದೆ ದೂರದಿಂದ ಓಡಿ ಬಂದು ಮಗುವಿನ ಪ್ರಾಣ ಉಳಿಸಿದ ಮಯೂರ್ ರವರಿಗೆ ದೇಶದ ಎಲ್ಲೆಡೆ ಪ್ರಶಂಸೆಗಳ ಸುರಿಮಳೆ ಆಗಿದೆ.

ಅದೇ ಸಮಯದಲ್ಲಿ ಈ ವೀಡಿಯೋ ನೋಡಿದ ರೈಲ್ವೆ ಇಲಾಖೆ ಪಿಯುಶ್ ಗೋಯಲ್ ರವರು ಆದೇಶದ ಮೇರೆಗೆ 50 ಸಾವಿರ ರೂಪಾಯಿಯನ್ನು ಬಹುಮಾನವಾಗಿ ಘೋಷಣೆ ಮಾಡಿದೆ. ಇದೇ ಸಮಯದಲ್ಲಿ ಮಗುವಿನ ಕುರಿತು ವಿಚಾರಿಸಲು ಹೋದಾಗ, ಮಗುವಿನ ಕುಟುಂಬ ಬಹಳ ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಮಗುವಿನ ಶಿಕ್ಷಣಕ್ಕೆ ಎಂದು ತಮಗೆ ಬಂದ rs.50000 ಗಳಲ್ಲಿ rs.25000 ರೂಪಾಯಿಯನ್ನು ಮಗುವಿನ ಶಿಕ್ಷಣಕ್ಕೆ ಬಳಸಿ ಕೊಳ್ಳಲು ಪೋಷಕರಿಗೆ ನೀಡಿದ್ದಾರೆ ಮಯೂರ್ ರವರು.

ಈ ರೈಲ್ವೆ ಉದ್ಯೋಗಿಯ ಈ ಕಾರ್ಯಕ್ಕೆ ಮತ್ತೊಮ್ಮೆ ದೇಶದ ಎಲ್ಲೆಡೆ ಪ್ರಶಂಸೆಗಳ ಸುರಿಮಳೆ ಯಾಗಿತ್ತು, ಎಲ್ಲರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವು ಎಂತವರನ್ನೂ ಫೇಮಸ್ ಮಾಡುವ ಬದಲು ಇಂತಹ ನಿಜ ಹೀರೋಗಳನ್ನು ಫೇಮಸ್ ಮಾಡಿದರೆ ಒಳ್ಳೆಯದು ಅಲ್ಲವೇ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *