ಕಡಿಮೆ ದರದಲ್ಲಿ ಸಿಗುವ ಸಬ್ಬಕ್ಕಿ ಇಂದ ಸಿಗುವ ಲಾಭಗಳ ಬಗ್ಗೆ ನಿಮಗೆ ತಿಳಿದರೆ ಸಿಕ್ಕಾಪಟ್ಟೆ ಆಶ್ಚರ್ಯ ಪಡ್ತೀರಾ …!

Hit

ಕಡಿಮೆ ಹಣದಲ್ಲಿ ಸಿಗುವ ಸಬ್ಬಕ್ಕಿ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಚರ್ಮದ ಕಾಂತಿಯನ್ನು ಹೆಚ್ಚು ಮಾಡುವಲ್ಲಿಯೂ ಕೂಡ ಸಬ್ಬಕ್ಕಿ ಹೆಚ್ಚು ಸಹಕಾರಿಯಾಗಿದೆ, ಹೇಗೆ ಎಂಬುದನ್ನು ಈ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ.

ತಪ್ಪದೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಸಬ್ಬಕ್ಕಿ ಬಳಸಿ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚು ಮಾಡಿಕೊಳ್ಳಿ ಜೊತೆಗೆ ನಿಮ್ಮ ಆರೋಗ್ಯವನ್ನು ಕೂಡ ವೃದ್ಧಿ ಮಾಡಿಕೊಳ್ಳಲು ಸಬ್ಬಕ್ಕಿಯನ್ನು ಹೇಗೆಲ್ಲ ಬಳಸಬಹುದು ಎಂಬುದನ್ನು ತಿಳಿಸಿಕೊಳ್ಳೋಣ.

ಇಷ್ಟು ದಿವಸಗಳವರೆಗೂ ಸಬ್ಬಕ್ಕಿಯನ್ನು ಪಾಯಸದ ರೂಪದಲ್ಲಿ ಅಥವಾ ಗಂಜಿ ರೂಪದಲ್ಲಿ ಇನ್ನೂ ಕೆಲವರು ಹಪ್ಪಳ ಮಾಡುವಾಗ ಅದಕ್ಕೆ ಸಬ್ಬಕ್ಕಿ ಬಳಕೆ ಮಾಡುತ್ತಾ ಇದ್ದರು. ಆದರೆ ಸಬ್ಬಕ್ಕಿಯನ್ನು ಹೀಗೂ ಕೂಡ ಬಳಸಬಹುದು ಎಂಬುದು ಮಾತ್ರ ಸಾಕಷ್ಟು ಮಂದಿಗೆ ತಿಳಿದಿರಲು ಸಾಧ್ಯವಿಲ್ಲಾ.

ಸಬ್ಬಕ್ಕಿ ನೋಡಲು ಶ್ವೇತ ಬಣ್ಣದಲ್ಲಿ ಇರುವ ಈ ಸಬ್ಬಕ್ಕಿ ಪ್ರೊಟೀನ್ ಕ್ಯಾಲ್ಸಿಯಮ್ ಐರನ್ ಈ ಪೋಷಕಾಂಶಗಳ ಹೇರಳವಾಗಿ ಹೊಂದಿದೆ ಸಬ್ಬಕ್ಕಿಯನ್ನು ಸಾಬುದಾನಿ ಅಂತ ಕೂಡ ಕರೆಯುತ್ತಾರೆ.

ಬಿಳುಪು ಚರ್ಮಕ್ಕಾಗಿ ಈ ಸಬ್ಬಕ್ಕಿ ಸಹಕಾರಿಯಾಗಿದೆ ಇನ್ನೂ ಕೂದಲ ಬೆಳವಣಿಗೆಯ ಹಾಗಾಗಿ ಕೂದಲು ಕಪ್ಪಾಗಿಸುವಲ್ಲಿ ಕೂಡ ಸಬ್ಬಕ್ಕಿಯನ್ನು ಬಳಕೆ ಮಾಡಬಹುದು. ಈ ಹಬ್ಬಕ್ಕೆ ಉಪವಾಸ ಮಾಡಿದವರಿಗೆ ಉಪಯುಕ್ತ ಹೌದು ಉಪವಾಸ ಮಾಡಿದ ನಂತರ ನಿಶ್ಯಕ್ತಿಗೆ ಒಳಗಾಗುತ್ತವೆ

ನಿಶ್ಶಕ್ತಿಗೆ ಒಳಗಾದವರು ಈ ಸಬ್ಬಕ್ಕಿಯನ್ನು ಯಾವುದಾದರೂ ರೂಪದಲ್ಲಿ ಸೇವಿಸಬಹುದು ಅಂದರೆ ಗಂಜಿ ಅಥವಾ ಪಾಯಸದ ರೂಪದಲ್ಲಿ ಸೇವಿಸಬಹುದು ಇದರಲ್ಲಿರುವ ಪಿಷ್ಟ ಮತ್ತು ಕಾರ್ಬೋಹೈಡ್ರೇಟ್ ಅಂಶ ಸುಸ್ತನ್ನು ಬೇಗ ನಿವಾರಿಸಿ ದೇಹಕ್ಕೆ ಶಕ್ತಿ ಒದಗಿಸಿಕೊಡುತ್ತದೆ.

ಚರ್ಮಕಾಂತಿಯನ್ನು ಹೆಚ್ಚು ಮಾಡುವಲ್ಲಿ ಸಬ್ಬಕ್ಕಿಯನ್ನು ಹೇಗೆ ಬಳಸಿ ಸಬ್ಬಕ್ಕಿಯನ್ನು ನುಣ್ಣಗೆ ಪುಡಿ ಮಾಡಿ ಇದಕ್ಕೆ ನಿಂಬೆಹಣ್ಣಿನ ರಸ ಮತ್ತು ಕಡಲೆ ಹಿಟ್ಟನ್ನು ಮಿಶ್ರಣ ಮಾಡಿ ಅಥವಾ ಕಡಲೆಹಿಟ್ಟು ಮೊಸರು ಮತ್ತು

ಸಬ್ಬಕ್ಕಿಯ ಪುಡಿಯನ್ನು ಮಿಶ್ರಮಾಡಿ ಮುಖವನ್ನು ಒಮ್ಮೆ ತೊಳೆದು ಮುಖಕ್ಕೆ ಲೇಪಿಸಿಕೊಳ್ಳಿ ಇದರಿಂದ ಮುಖದ ಮೇಲಿರುವ ಕಪ್ಪು ಕಲೆಗಳು ನಿವಾರಣೆಯಾಗಿ ಸುಕ್ಕು ಕೂಡ ನಿವಾರಣೆಯಾಗಿ ಮುಖ ಕಾಂತಿಯುತವಾಗಿ ಕಾಣುತ್ತದೆ.

ಮೊಟ್ಟೆಯ ಹಳದಿ ಭಾಗವನ್ನು ಬೇರ್ಪಡಿಸಿ ಇದಕ್ಕೆ ಸಬ್ಬಕ್ಕಿಯ ಪುಡಿಯನ್ನು ಮಿಶ್ರ ಮಾಡಬೇಕು ನಂತರ ಇದನ್ನು ಮುಖಕ್ಕೆ ಲೇಪಿಸಿಕೊಂಡು ಬರುವುದರಿಂದ ಮುಖದ ಮೇಲೆ ಉಂಟಾಗಿರುವ ಸುಕ್ಕು ಕಲೆ ನಿವಾರಣೆಯಾಗುತ್ತದೆ ಮೊಡವೆ ಸಮಸ್ಯೆ ತುಂಬಾ

ಕಾಡುತ್ತಿದ್ದರೆ ಅದಕ್ಕೆ ಹೀಗೆ ಮಾಡಿ ರೋಸ್ ವಾಟರ್ ನೊಂದಿಗೆ ಹಳದಿಯನ್ನು ಮಿಶ್ರಮಾಡಿದ ಸಬಕೇ ಪುಡಿಯನ್ನು ಹಾಕಿ ಪೇಸ್ಟ್ ಮಾಡಿ ಮುಖಕ್ಕೆ ಲೇಪಿಸಿ ಕೊಳ್ಳಬೇಕು ಈ ರೀತಿ ವಾರದಲ್ಲಿ ಮೂರು ದಿನ ಮಾಡಿದರೆ ಮೊಡವೆಗಳು ನಿವಾರಣೆಯಾಗುತ್ತದೆ.

ಸನ್ ಬರ್ನ್ ಮತ್ತು ಟ್ಯಾನ್ ರಿಮೂವಲ್ ಮಾಡುವಲ್ಲಿಯೂ ಸಬ್ಬಕ್ಕಿ ಪ್ರಯೋಜನಕಾರಿ ಸಬ್ಬಕ್ಕಿ ಪುಡಿಗೆ ಹಾಲು ಮತ್ತು ಕಸ್ತೂರಿ ಹಳದಿಯನ್ನು ಮಿಶ್ರ ಮಾಡಿ ಫೇಸ್ ಪ್ಯಾಕ್ ಹಾಕಿಕೊಳ್ಳಬೇಕು.

ಇದರಿಂದ ಟ್ಯಾನ್ ರಿಮೂವ್ ಆಗುತ್ತದೆ. ಕೂದಲು ಉದುರುವ ಸಮಸ್ಯೆಗೆ ಸಬ್ಬಕ್ಕಿ ಪುಡಿಯನ್ನು ಮೊಸರು ಜೇನುತುಪ್ಪ ಮತ್ತು ರೋಸ್ ವಾಟರ್ ನೊಂದಿಗೆ ಮಿಶ್ರ ಮಾಡಿ ಹೇರ್ ಪ್ಯಾಕ್ ಹಾಕಿಕೊಳ್ಳಬೇಕು ಇದರಿಂದ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *