ಈ ರೀತಿಯ ಆಹಾರ ಸೇವಿಸಿದರೆ ದೇಹದಲ್ಲಿ ಆಕ್ಸಿಜನ್ ಕೊರತೆಯೇ ಆಗಲ್ಲ, ವೈದ್ಯರ ಮಾಹಿತಿ

ಆರೋಗ್ಯ

ನೀವು ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಸರಿಯಾಗಿ ಇಟ್ಟುಕೊಳ್ಳಲು ಬಯಸುವಿರಾ? ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅಥವಾ ಯಾರಾದರೂ ಸಾಮಾನ್ಯ ಉಸಿರಾಟವನ್ನು ತೆಗೆದುಕೊಳ್ಳಲು ಕಷ್ಟಪಡುತ್ತಿದ್ದರೆ, ಆಮ್ಲಜನಕ ಮಟ್ಟವನ್ನು ಸುಧಾರಿಸಲು ನೆರವಾಗುವ ಆಹಾರ ಪದಾರ್ಥಗಳ ವಿವರಗಳು ಇಲ್ಲಿದೆ. ನಿಂಬೆ ಹಣ್ಣು – ವಿಟಮಿನ್ ಸಿ ಯಿಂದ ತುಂಬಿರುವ ನಿಂಬೆ ಹಣ್ಣುಗಳು ವರ್ಷಪೂರ್ತಿ ಸುಲಭವಾಗಿ ಸಿಗುತ್ತವೆ. ಅಪಾರ ಪ್ರಮಾಣದ ವಿಟಮಿನ್​ ಸಿ ಅಂಶ ಅಡಕವಾಗಿರುವ ಯಾವುದೇ ಹಣ್ಣು / ತರಕಾರಿ ನಿಮ್ಮ ದೇಹದಲ್ಲಿ ಆಮ್ಲಜನಕ ಮಟ್ಟವನ್ನು ಸುಧಾರಿಸುವ ಕೆಲಸ ಮಾಡುತ್ತದೆ.

ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆಹಣ್ಣು ಮತ್ತು ದ್ರಾಕ್ಷಿಹಣ್ಣು ಫ್ಲೇವೊನೈಡ್ಗಳು ಸೇರಿದಂತೆ ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ. ಬೆಳ್ಳುಳ್ಳಿ – ಬೆಳ್ಳುಳ್ಳಿ, ಸಲ್ಫರ್ ಸಂಯುಕ್ತಗಳು, ಆಲಿಸಿನ್ ಒಳಗೊಂಡಿರುತ್ತದೆ. ಇವು ನಿಮ್ಮ ರಕ್ತನಾಳಗಳಿಗೆ ವಿಶ್ರಾಂತಿ ನೀಡುವ ಮೂಲಕ ಅಂಗಾಂಶಗಳ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ವಾಸ್ತವವಾಗಿ, ಬೆಳ್ಳುಳ್ಳಿಯಲ್ಲಿ ಸಾಕಷ್ಟು ಔಷಧೀಯ ಅಂಶಗಳಿದ್ದು, ದೇಹದ ಆಮ್ಲಜನಕ ಮಟ್ಟವನ್ನು ಸುಧಾರಿಸುವ ಜೊತೆಗೆ ‌ದೇಹದ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಕಿವಿ ಹಣ್ಣು: ಕಿವಿ ಹಣ್ಣು ವಿಟಮಿನ್ ಎ, ಇ, ಮತ್ತು ಸಿ ಸೇರಿದಂತೆ ಕೆಲವು ಜೀವಸತ್ವಗಳು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಉತ್ಕರ್ಷಣ ನಿರೋಧಕ ಭರಿತ ಗುಣ ಹೊಂದಿರುವ ಕಿವಿ ಹಣ್ಣು ಆಮ್ಲಜನಕವನ್ನು ಹೆಚ್ಚು ಪರಿಣಾಮಕಾರಿಯಾಗಿ ರಕ್ತಕ್ಕೆ ತಲುಪಿಸುತ್ತವೆ.ಬಾಳೆ ಹಣ್ಣು – ಮಾಗಿದ ಬಾಳೆಹಣ್ಣು, ಕ್ಯಾರೆಟ್, ಖರ್ಜೂರ, ಬೆರ್ರಿಯಂತಹ‌ ಆಹಾರಗಳಲ್ಲಿ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶವಿದೆ ಮತ್ತು ಅವು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಅವುಗಳ ಪಿಹೆಚ್ ಮೌಲ್ಯ 8 ಆಗಿದ್ದು, ದೇಹದಲ್ಲಿ ಆಮ್ಲಜನಕ ಮಟ್ಟವನ್ನು ಹೆಚ್ಚಿಸುವ ‌ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವ ಗುಣಗಳನ್ನು ಹೊಂದಿವೆ.

ಮೊಸರು: ಮೊಸರಿನಲ್ಲಿ ವಿಟಮಿನ್, ಪ್ರೋಟಿನ್,​ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಸೇರಿದಂತೆ ಹಲವಾರು ಜೀವಸತ್ವಗಳು ಮತ್ತು ಖನಿಜಗಳು ಅಗಾಧ ಪ್ರಮಾಣದಲ್ಲಿದೆ. ಮೊಸರಿನ ಸೇವನೆ ಕೂಡ ದೇಹದಲ್ಲಿ ಆಮ್ಲಜನಕ ಮಟ್ಟವನ್ನ ಸುಧಾರಿಸಲು ನೆರವಾಗುತ್ತದೆ. ಇನ್ನು ಖ್ಯಾತ ವೈದ್ಯರು ಆದಂತಹ ಡಾಕ್ಟರ್ ಗಿರಿಧರ್ ಕಜೆಯವರು ಕೂಡ ಕೊರೊನಗೆ ಉತ್ತಮ ಆ ಮನೆಮದ್ದನ್ನೇ ನಮ್ಮ ಆಹಾರದಲ್ಲೇ ಸೂಚಿಸುತ್ತಾರೆ. ಹೀಗಾಗಿ ಉತ್ತಮ ಆಹಾರ ಸೇವನೆ ಇಮ್ಯೂನಿಟಿ ಹೆಚ್ಚಿಸುದು ಬಹಳ ಮುಖ್ಯ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *