ಮೂತ್ರ ಜಾಗದಲ್ಲಿ ಇರುವ ಕಲ್ಲು ಕರಗಿಸುವ ಮತ್ತು ದೃಷ್ಟಿ ಹೆಚ್ಚಿಸುವ ಕಲ್ಲು ಸಕ್ಕರೆ ಈ ಎಂಟು ರೋಗಗಳನ್ನು ಹೋಗಲಾಡಿಸುತ್ತೆ..!

ಆರೋಗ್ಯ

ಕಲ್ಲು ಸಕ್ಕರೆ ಆಯುರ್ವೇದಲ್ಲಿ ಬಳಸುತ್ತಾರೆ ಮತ್ತು ಇದೊಂದು ಮನೆ ಮದ್ದು ಸಹ ಇದು ನಿಮ್ಮಲ್ಲಿ ಇರುವ ಹಲವು ಕಾಯಿಲೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತೆ. ಕಣ್ಣುಗಳಲ್ಲಿ ಉರಿ ಮತ್ತು ಕೆಂಪಾಗಿದ್ದರೆ ಕಲ್ಲು ಸಕ್ಕರೆಯನ್ನು ನೀರಲ್ಲಿ ಕಲಸಿ ಆ ನೀರಲ್ಲಿ ಹತ್ತಿ ನೆನೆಸಿ ಕಣ್ಣುಗಳ ಮೇಲೆ ಇಟ್ಟರೆ ಉರಿ ಮತ್ತು ಕೆಂಪಾಗಿರುವುದು ಶಮನವಾಗುತ್ತದೆ. ಈರುಳ್ಳಿ ರಸಕ್ಕೆ ಕಲ್ಲು ಸಕ್ಕರೆ ಬೆರೆಸಿ ಸೇವಿಸಿದರೆ ಮೂತ್ರ ಮಾರ್ಗದಲ್ಲಿ ಕಲ್ಲು ಇದ್ದರೆ ಕರಗುತ್ತದೆ.

50 ಗ್ರಾಂ ಬಾದಾಮಿ, 50 ಗ್ರಾಂ ಕಲ್ಲು ಸಕ್ಕರೆ, 25 ಗ್ರಾಂ ಸೋಂಪು ಮತ್ತು 10 ಗ್ರಾಂ ಕರಿಮೆಣಸಿನ ಕಾಳುಗಳನ್ನು ಹಾಕಿ ಮಾಡಿದ ಒಂದು ಚಮಚ ಪುಡಿಯನ್ನು ಹಾಲಿಗೆ ಸೇರಿಸಿ ಪ್ರತಿ ದಿನ ರಾತ್ರಿ ಮಲಗುವ ಮುನ್ನ ಕುಡಿದರೆ ದೃಷ್ಟಿ ಹೆಚ್ಚುತ್ತದೆ.

ಹೊಟ್ಟೆ ನೋವು ಹೆಚ್ಚಿದ್ದರೆ ಬೇವಿನ ಚಿಗುರನ್ನು ಕಲ್ಲು ಸಕ್ಕರೆ ಜತೆ ತಿಂದರೆ ನೋವು ಬೇಗ ಶಮನವಾಗುತ್ತದೆ. ಕಪ್ಪು ಎಳ್ಳನ್ನು ಪುಡಿ ಮಾಡಿ ಕಲ್ಲು ಸಕ್ಕರೆ ಜತೆ ಬಾಣಂತಿಯರಿಗೆ ಕೊಟ್ಟರೆ ಎದೆ ಹಾಲು ಹೆಚ್ಚುತ್ತದೆ.

ಪದೇ ಪದೆ ಬಾಯಿ ಹುಣ್ಣಾಗುತ್ತಿದ್ದರೆ ಏಲಕ್ಕಿ ಮತ್ತು ಕಲ್ಲು ಸಕ್ಕರೆ ಪೇಸ್ಟ್‌ ಮಾಡಿ ಲೇಪ ಮಾಡಿದರೆ ಹುಣ್ಣು ನಿವಾರಣೆಯಾಗುತ್ತದೆ. ಕಲ್ಲು ಸಕ್ಕರೆಯನ್ನು ಸೋಂಪು ಜತೆ ಬಾಯಿಗೆ ಹಾಕಿ ಅಗಿದರೆ ಬಾಯಿ ವಾಸನೆ ದೂರಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *