ಸಮಾಜಸೇವೆ ಬಡತನದಲ್ಲಿರುವಂತ ಮಕ್ಕಳು ತಮ್ಮ ಹೊಟ್ಟೆ ಪಾಡಿಗಾಗಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಾರೆ, ಇನ್ನು ಕೆಲವರು ರಸ್ತೆ ಬದಿಗಳಲ್ಲಿ ಚಿಂದಿ ಆಯ್ದು ಜೀವನ ನಡೆಸುವವರು ಇದ್ದಾರೆ. ಇವರ ಜೀವನ ಹೀಗೆ ಮುಂದುವರೆಯಬಾರದು ಇವರ ಜೀವನಕ್ಕೆ ಒಂದು ಉತ್ತಮ ದಾರಿ ಸಿಗಬೇಕು ಇದಕ್ಕೆ ಶಿಕ್ಷಣ ಅಗತ್ಯವೆಂದು 200 ಮಕ್ಕಳಿಗೆ ಉಚಿತ ಶಿಕ್ಷಣ ಕೊಡಲು ಈ ಸಂಚಾರಿ ಪೊಲೀಸ್ ಅಧಿಕಾರಿ ಮುಂದಾಗಿದ್ದಾರೆ. ಅಷ್ಟಕ್ಕೂ ಇದು ಇಲ್ಲಿ ಇವರು ಯಾರು ಅನ್ನೋದನ್ನ ಮುಂದೆ ನೋಡಿ.
ಸಂಚಾರಿ ಡಿಸಿಪಿ ಅಂಕಿತ್ ಪಟೇಲ್ ಅಹ್ಮಮದಾಬಾದ್ ಇವರು ಸುದ್ದಿಗಾರರೊಂದಿಗೆ ಮಾತಾಡಿದಾಗ ಈ ವಿಷಯವನ್ನು ತಿಳಿಸಿದ್ದಾರೆ. ಬೀದಿ ಬದಿಯ ಮಕ್ಕಳ ಬದುಕಿನಲ್ಲಿ ಬದಲಾವಣೆ ತರುವ ಗುರಿಯೊಂದಿಗೆ ಒಂದೂವರೆ ವರ್ಷದ ಹಿಂದೆ ಪೊಲೀಸ್ ಪಾಠಶಾಲೆಯನ್ನು ಈ ಪೊಲೀಸ್ ಅಧಿಕಾರಿ ಪ್ರಾರಂಭಿಸಿದ್ದಾರೆ.
ಇದೀಗ ಇಂತಹ ಮೂರು ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇಂತಹ ಇನ್ನೊಂದಿಷ್ಟು ಕೇಂದ್ರಗಳನ್ನು ತೆರೆಯುವ ಯೋಚನೆಯಲ್ಲಿರುವುದಾಗಿ ಅವರು ಹೇಳಿದ್ದಾರೆ. ಈ ಕೇಂದ್ರಗಳಿಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಅವರು ಬರಲು ಉಚಿತ ವಾಹನದ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಮಕ್ಕಳನ್ನು ಈ ಕೇಂದ್ರಗಳಿಗೆ ಕರೆ ತರಲು ಸೈಕಲ್ ರಿಕ್ಷಾವನ್ನು ನಿಯೋಜಿಸಲಾಗುತ್ತಿದೆ. ಅಧ್ಯಯನದ ಅವಧಿಯಲ್ಲಿ ಉಚಿತವಾಗಿ ಊಟವನ್ನು ಸಹ ನೀಡಲಾಗುತ್ತಿದೆ.
ಇದರ ಮುಖ್ಯ ಉದ್ದೇಶ: ಬಿಧಿ ಬದಿಯ ಮಕ್ಕಳ ಭವಿಷ್ಯ ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲಿ ಹಾಗೂ ಬೀದಿ ಬದಿಯ ಮಕ್ಕಳು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೇ ಹೆಚ್ಚು. ಆದ್ದರಿಂದ ಇಂತಹ ಮಕ್ಕಳ ಜೀವನದಲ್ಲಿ ಬದಲಾವಣೆ ತರಲು ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಈ ಕೇಂದ್ರಗಳಲ್ಲಿ ಮೂಲ ಜ್ಞಾನ ನೀಡಿದ ನಂತರ ಅವರನ್ನು ರೆಗ್ಯೂಲರ್ ಶಾಲೆಗಳಿಗೆ ಸೇರಿಸಲಾಗುವುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.