ನಮ್ಮ ಭಾರತದಲ್ಲಿ ಮಸಾಲೆ ಪದಾರ್ಥಗಳಿಗೆ ತನ್ನದೇ ಆದ ವಿಶೇಷತೆ ಇದೆ ದೇಶ ವಿದೇಶಗಲ್ಲಿ ಸಹ ನಮ್ಮ ಭಾರತೀಯ ಮಸಾಲೆಗೆ ವಿಶೇಷ ಬೇಡಿಕೆ ಇದೆ, ಪುರಾತನ ಕಾಲದಿಂದಲೂ ಮಸಾಲೆ ಹೆಚ್ಚು ಬಳಕೆಯಲ್ಲಿದೆ ಯಾವುದೇ ಒಂದು ಅಡುಗೆಗೆ ಮುಖ್ಯವಾಗಿ ಬೇಕಾಗಿರುವುದು ಮಸಾಲೆ.
ಇಂತಹ ಒಂದು ಮಸಾಲೆ ಕಂಪನಿ ಮಾಡುವುದರ ಮೂಲಕ ಒಬ್ಬ ವ್ಯಕ್ತಿ ಇಂದು ಕೋಟ್ಯಧಿಪತಿಯಾಗಿದ್ದಾನೆ ಯಾರು ಮತ್ತು ಯಾವ ಕಂಪನಿ ಅನ್ನೋದು ಇಲ್ಲಿದೆ ನೋಡಿ. ತೇಜು ಮಸಾಲ ಕಂಪನಿಯು ಶ್ರೀ ಎ.ಎಸ್. ಜಯರಾಮ್ ಮತ್ತು ಎಮ್ಆರ್ ವಿ ಸುಬ್ರಮಣ್ಯ ಅವರು 1999 ರಲ್ಲಿ ಸ್ಥಾಪಿಸಿದರು, ಜೆಎಸ್ ಫಾಸ್ಟ್ ಫುಡ್ ಹೆಸರಿನಲ್ಲಿ ತೇಜು ಬ್ರಾಂಡ್ ಆಗಿದೆ, ಇದು ಕರ್ನಾಟಕ ಮತ್ತು ದಕ್ಷಿಣ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ಒಂದಾಗಿದೆ.
ವ್ಯಾಪಾರ ಕಾರ್ಯಾಚರಣೆಯೊಂದಿಗೆ ರೆಡಿ ಮಿಕ್ಸ್ ಮಸಾಲಾ ಪುಡಿಗಳು ಮತ್ತು ತೇಜು ಚಿಕನ್ ಕಬಾಬ್ ಪೌಡರ್, ತೇಜು ಫಿಶ್ ಕಬಾಬ್ ಪೌಡರ್, ತೇಜು ಚಿಕನ್ ಮಸಾಲಾ ಪೌಡರ್, ತೇಜು ಮಟನ್ ಮಸಾಲ ಪುಡಿ, ತೇಜ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮುಂತಾದ ಆಹಾರ ಉತ್ಪನ್ನಗಳು. ಕಂಪನಿಯ ರಚನೆಯ ಮುಖ್ಯ ಉದ್ದೇಶ ಅಡುಗೆ ಮಾಡಲು ಸುಲಭ. ಈ ಕಂಪನಿಯ ಸಂಸ್ಥಾಪಕರಾದ ಜಯರಾಮುರವರು ರಾಜಕಾರಣಿಯಾದರು ಸಹ ಜನರ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಜನಸಾಮಾನ್ಯರ ಅವಶ್ಯಕತೆಗಳನ್ನು ಪೂರೈಸಲು ತಮ್ಮದೇ ಆದ ಫ್ಯಾಕ್ಟರಿ ತೆರೆದು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಅಲ್ಲಿ ಕೆಲಸ ನಿರ್ವಹಿಸುವ ಕೆಲಸಗಾರರ ಕುಟುಂಬ ಹಿತಾಸಕ್ತಿಯನ್ನು ಮತ್ತು ಅವರ ಮಕ್ಕಳ ವಿದ್ಯಾಭ್ಯಾಸವನ್ನು ನಿರ್ವಹಿಸುವ ಕಾರ್ಯವನ್ನು ಸಹ ಅದೇ ಜವಾಬ್ದಾರಿಯಿಂದ ನೋಡಿಕೊಳ್ಳುತ್ತಿದ್ದಾರೆ.
ಈ ಮಸಾಲವು ತುಂಬಾ ಉಪಕಾರಿ ಆಗಿದೆ ಜನರಿಗೆ. ಎಲ್ಲ ಹೆಣ್ಣು ಮಕ್ಕಳು ಮನೆಯಲ್ಲೀಯೇ ಎಲ್ಲ ರೀತಿಯ ಮಸಾಲ ಪದಾರ್ಥಗಳನ್ನು ತಯಾರಿಸಿಕೊಳ್ಳುವುದು ಕಷ್ಟ ಸಾಧ್ಯ , ಹಾಗೆಯೇ ವಿದ್ಯಾವಂತರು ಹಾಗೂ ಅವಿದ್ಯಾವಂತರುಗಳಿಗೂ ಕೆಲಸಗಳ ಅವಶ್ಯಕತೆ ಇರುವುದರಿಂದ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿದೆ ಹೀಗಿದ್ದ ಸಮಯದಲ್ಲಿ ತಮ್ಮ ಮಕ್ಕಳ ಚಿಂತೆ ಇರುವ ಪೋಷಕರಿಗೆ ಈ ಕಂಪನಿಯು ಸಹಾಯಕರಾಗಿ ನಿಂತಿದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.