ರಾಜಕಾರಣ ಅಂದ್ರೆ ಸಾಕು ಕಾರು ಬಂಗಲೆ ಬೆಂಬಲಿಗರು ಹಣ ಹೆಂಡ ಇಷ್ಟು ಇದ್ರೆ ಸಾಕು ಒಬ್ಬ ರಾಜಕಾರಣಿ ಆಗಿ ಗೆದ್ದೇ ಗೆಲ್ಲುತ್ತೇನೆ ಅನ್ನೋ ನಂಬಿಕೆ ಈ ನಮ್ಮ ಸೋಕಾಲ್ಡ್ ರಾಜಕಾರಣಿಗಳ ನಂಬಿಕೆ ಆದ್ರೆ ಇದಕ್ಕೆಲ್ಲ ಮೀರಿದ ಒಬ್ಬ ವ್ಯಕ್ತಿ ಮತ್ತು ರಾಜಕಾರಣಿ ನಮ್ಮ ಮುಂದೆ ಇದ್ದಾರೆ ಅವರನ್ನ ನೋಡಿ ನಮ್ಮ ರಾಜಕಾರಣಿಗಳು ತಿಳಿದುಕೊಳ್ಳೋದು ತುಂಬ ಇದೆ ಯಾಕೆ ಗೊತ್ತಾ ಜೀವನ ಶೈಲಿ ಅನ್ನೋದು ಹಾಗೆ ಇದೆ ನೋಡಿ.
ಈ ವ್ಯಕ್ತಿಯ ಹೆಸರು ಗುಮ್ಮಡಿ ನರಸಯ್ಯ, ಇವರು ತೆಲಂಗಾಣ ರಾಜ್ಯದ ಖಮ್ಮಮ್ ಜಿಲ್ಲೆಯ ಎಲ್ಲಂದು ಕ್ಷೇತ್ರದಲ್ಲಿ 5 ಭಾರಿ MLA ಆಗಿ ಜನ ಸೇವೆ ಮಾಡುತ್ತಿರುವ ಮಹಾನ್ ವ್ಯಕ್ತಿ. ಇವರು MLA ಆಗಿದ್ದಾಗ ಕೋಟಿಗಟ್ಟಲೆ ಹಣವನ್ನ ಸಂಪಾದನೆ ಮಾಡುವ ಅವಕಾಶ ಇದ್ದರೂ ಕೂಡ MLA ನರಸಯ್ಯನವರು ನನಗೆ ಹಣ ಬೇಡ ಜನರ ಪ್ರೀತಿ ಬೇಕು ಎಂದು 25 ವರ್ಷ ಅಧಿಕಾರದಲ್ಲಿ ಇದ್ದರೂ ಕೂಡ ಒಂದೇ ಒಂದು ರೂಪಾಯಿಯನ್ನ ಕೆಟ್ಟ ದಾರಿಯಲ್ಲಿ ಸಂಪಾದನೆ ಮಾಡಿದವರಲ್ಲ.
ಇನ್ನು MLA ನರಸಯ್ಯನವರು ಈಗಲೂ ತಮ್ಮ ಹಳೆಯ ಮನೆಯಲ್ಲಿ ವಾಸವಿದ್ದಾರೆ ಮತ್ತು ಅವರು ಎಲ್ಲಾದರೂ ಹೋಗಬೇಕು ಅಂದರೆ ಬಸ್ ಸ್ಟಾಂಡ್ ನಲ್ಲಿ ನಿಂತು ಬಸ್ ಹತ್ತಿಕೊಂಡು ಹೋಗುತ್ತಾರೆ. ಹಾಗೆ ಅಕ್ಕ ಪಕ್ಕದ ಊರಿಗೆ ಹೋಗಲು ಮತ್ತು ತಮ್ಮ ಊರಿನಲ್ಲಿ ಓಡಾಡಲು ತನ್ನ ಸೈಕಲ್ ನಲ್ಲಿ ಹೋಗುತ್ತಾರೆ. ಹೀಗೆ ಒಮ್ಮೆ ಬಸ್ ನಿಲ್ದಾಣಕ್ಕೆ ಹೋದಾಗ ಪಕ್ಕದಲ್ಲಿ ಇದ್ದ ಒಬ್ಬ ಹುಡುಗ ಯೇ ಮುದುಕ ದೂರ ನಿಂತ್ಕೋ ಅಂತ ಹೇಳಿದಾಗ ಅವರು ಸುಮ್ಮನೆ ದೂರ ಸರಿದು ನಿಂತುಕೊಂಡ ಸನ್ನಿವೇಶ ಆಗಿರುವುದು ಬೆಳಕಿಗೆ ಬಂದಿದೆ.
ಗುಮ್ಮಡಿ ನರಸಯ್ಯ ಅವರು ತುಂಬಾ ನ್ಯಾಯ ನೀತಿಗೆ ತುಂಬಾ ಹೆಸರು ಆಗಿದ್ದವರು, ಮತ್ತು ಐದು ಬಾರಿ ಎಂಎಲ್ಎ ಆದರೂ ಸಹ ಯಾವತ್ತೂ ಆಡಂಬರದ ಜೀವನವನ್ನು ಮಾಡಬೇಕು ಎಂದು ಎನ್ನಿಸಿರಲಿಲ್ಲವಂತೆ, ಮತ್ತು ಇಂತಹ ಜನ ನಾಯಕ ಯಾವ ಕ್ಷೇತ್ರದಲ್ಲಿ ಸಿಗುತ್ತಾರೆ ಹೇಳಿ ನೋಡೋಣ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.