ಬರಿ 30 ರೂಪಾಯಿಯಲ್ಲಿ ವರ್ಲ್ಡ್‌ ಪೇಮಸ್ ಅಗುವಂತ ಕೆಲಸ ಮಾಡಿದ ಹೆಮ್ಮೆಯ ಕನ್ನಡಿಗ ಈ ನಿರಂಜನ್..!

ಇತರೆ

ಸಾಧನೆ ಮಾಡುವುದಕ್ಕೆ ಯಾವ ಕ್ಷೇತ್ರವಾದರೇನು ಸಾದಿಸುವ ಛಲಬೇಕು ಆಗ ಮಾತ್ರ ಏನಾದರು ಸಾದಿಸಬಹುದು, ನಿಮ್ಮ ಏಕಾಗ್ರತೆ ಮತ್ತು ನಿಮ್ಮ ಕಾಳಜಿ ತುಂಬಾನೇ ಮುಖ್ಯ ಹಾಗಾದ್ರೆ ಈ ನಿರಂಜನ್ ಕೇವಲ ೩೦ ರೂಪಾಯಿಯಲ್ಲಿ ಯಾವ ಕೆಲಸ ಮಾಡಿದ್ದಾನೆ ಅನ್ನೋದು ಇಲ್ಲಿದೆ ನೋಡಿ.

ಹೆಸರು ನಿರಂಜನ್ ಎಂಬುದಾಗಿ ಮೂಲತಃ ಬೆಳಗಾವಿಯವರು ಇವರು ಮಾಡಿರುವಂತ ಪ್ರಾಜೆಕ್ಟ್ ‘ಫ್ರೀ ಫಿಲ್ಟರ್‌” ಹೌದು ನಿರಂಜನ್ ಅವರು ‘ಫ್ರೀ ಫಿಲ್ಟರ್‌” ಸಾಧನವನ್ನು ಎಂಜಿನಿಯರಿಂಗ್ ಅಂತಿಮ ವರ್ಷದ ಪ್ರಾಜೆಕ್ಟ್ ವೇಳೆ ತಯಾರಿಸಲು ಹೋದಾಗ ಅದು ರಿಜೆಕ್ಟ್ ಆಗಿತ್ತು, ಆದ್ರೆ ಈಗ ಈ ಪ್ರಾಜೆಕ್ಟ್ ಗೆ ರಾಜ್ಯ ಸರ್ಕಾರದ ಇಲೆವೆಂಟ್ 100 ಸಮಾವೇಶದಲ್ಲಿ ಪ್ರಶಸ್ತಿ ಕೂಡ ಲಭಿಸಿದೆ.

ಅಷ್ಟೇ ಅಲ್ಲದೆ ಇವರ ಈ ಪ್ರಾಜೆಕ್ಟ್ ಗೆ ಮೋದಿಯವರ ಸರ್ಕಾರದ ಸ್ಟಾರ್ಟ್ ಅಪ್‌ ಸಹಾಯಧನ ಕೊಡ ಮಂಜೂರು ಮಾಡಲಾಗಿದೆ, ಇವರು ಮಾಡಿರುವಂತ ಪ್ರಾಜೆಕ್ಟ್ ಬರಿ ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶ ವಿದೇಶದಲ್ಲೂ ತಲುಪಿದೆ ಭಾರತೀಯ ಸೇನೆ ಈ ಪ್ರತಿಭೆಯನ್ನು ಗುರುತಿಸಿ ಸಾವಿರ ಫಿಲ್ಟರ್‌ ಅನ್ನು ಖರೀದಿಸಿ ಪ್ರೋತ್ಸಾಹಿಸಿದೆ.

ಇವರು ತಯಾರಿಸಿರುವಂತ ಪ್ರಾಜೆಕ್ಟ್ ಅಲ್ಟ್ರಾ ಫಿಲ್ಟರೇಶನ್ ಮೆಮರಿನ್ ತಂತ್ರಜ್ಞಾನದಲ್ಲಿ ಈ ‘ಫ್ರೀ ಫಿಲ್ಟರ್‌’ ತಯಾರಿಸಲಾಗಿದೆ. ಅದು ನೀರು ಶುದ್ಧ ಮಾಡುವ ಜತೆಗೆ ಶೇ. 80 ರಷ್ಟು ಬ್ಯಾಕ್ಟೀರಿಯಾಗಳನ್ನು ತಡೆಯುತ್ತದೆ. ಬೆರಳಿನ ಗಾತ್ರದ ಈ ಸಾಧನವನ್ನು ಸಾಮಾನ್ಯ ನೀರಿನ ಬಾಟಲಿಯ ಬಾಯಿಗೆ ಅಳವಡಿಸಿ ಶುದ್ಧ ನೀರು ಪಡೆಯಬಹುದು ಒಂದು ‘ಫಿಲ್ಟರ್‌’ ಸಾಧನ 100 ಲೀ. ನೀರು ಶುದ್ಧ ಮಾಡುತ್ತದೆ. ಈ ಸಾಧನಕ್ಕೆ ಒಮ್ಮೆ ನೀರು ತಾಗಿಸಿದರೆ ಗರಿಷ್ಠ ಎರಡು ತಿಂಗಳು ಬಳಸಬಹುದಂತೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *