ಎಷ್ಟೇ ದುಡಿದರು ಕೆಲವರಿಗೆ ಕೈಯಲ್ಲಿ ದುಡ್ಡು ನಿಲ್ಲೋಲ್ಲ. ಆದರೆ, ಇದೊಂದು ಚಕ್ರವನ್ನು ಮನೆಯಲ್ಲಿಟ್ಟುಕೊಂಡರೆ ಎಲ್ಲ ಆರ್ಥಿಕ ಸಮಸ್ಯೆಗಳೂ ಮಾಯವಾಗುತ್ತದೆ..!

ಆರೋಗ್ಯ

ಗೋಮತಿ ನದಿಯಲ್ಲಿ ಮಾತ್ರ ಸಿಗುವ ಗೋಮತಿ ಚಕ್ರದ ಮಹತ್ವ ಅಪಾರ. ಹಿಂದೂ ಸಂಪ್ರದಾಯದ ಪ್ರಕಾರ ಗೋಮತಿ ನದಿ ಋಷಿ ಮಹರ್ಷಿ ವಶಿಷ್ಟನ ಪುತ್ರಿ. ಈ ನದಿಯಲ್ಲಿ ಏಕಾದಶಿ ದಿನದಂದು ಸ್ನಾನ ಮಾಡಿದರೆ ಮಾಡಿದ ಪಾಪವೆಲ್ಲವೂ ನಾಶವಾಗುತ್ತದೆ ಎಂಬ ನಂಬಿಕೆ ಇದೆ.

ಇನ್ನು ಗೋಮತಿ ಚಕ್ರ ನೋಡಲು ಸಣ್ಣದೊಂದು ಕಲ್ಲಿನಂತಿದ್ದು, ಒಂದು ಕಡೆ ಬೆಳಗುತ್ತದೆ, ಇನ್ನೊಂದು ಕಡೆ ವೃತ್ತಾಕಾರದಲ್ಲಿರುತ್ತದೆ. ಗೋಮತಿ ಚಕ್ರವನ್ನು ಸದಾ ಕಿಸೆಯಲ್ಲುಟ್ಟುಕೊಂಡರೆ ಸುಖ, ಸಮೃದ್ಧಿ ಹಾಗೂ ನೆಮ್ಮದಿ ಹೆಚ್ಚುತ್ತದೆ.

ಹ್ಯಾಂಡ್ ಬ್ಯಾಗ್ ಅಥವಾ ಪರ್ಸ್‌ನಲ್ಲಿ ಗೋಮತಿ ಚಕ್ರವಿದ್ದರೆ ಹಣ ಹೆಚ್ಚತ್ತದೆ. ಇನ್ನು ಮನೆ ನಿರ್ಮಿಸುವಾಗ ಪಾಯ ತೆಗೆಯುವ ಸಮಯದಲ್ಲಿ 11 ಗೋಮತಿ ಚಕ್ರವನ್ನು ಹೂತು ಹಾಕಿದರೆ, ಯಾವದೇ ಅಡೆ-ತಡೆ ಇಲ್ಲದೇ ನಿರ್ಮಾಣ ಕಾರ್ಯ ಮುಗಿಯುತ್ತದೆ. 11 ರುದ್ರರನ್ನು ಈ ಚಕ್ರ ಪ್ರತಿನಿಧಿಸುತ್ತದೆ.

ಸಾಲ ಬಾಧೆಯಿಂದ ನರಳುವವರು 11 ಗೋಮತಿ ಚಕ್ರಗಳಿಗೆ ಅರಿಶಿಣ ಹಚ್ಚಿ ಶಿವಲಿಂಗದ ಮುಂದಿಟ್ಟು, ಶಿವ ನಾಮ ಜಪಿಸಬೇಕು. ನಂತರ 11 ಚಕ್ರಗಳನ್ನು ಹಳದಿ ಬಟ್ಟೆಯಿಂದ ಕಟ್ಟಿ ಮನೆಯ ಎಲ್ಲಾ ಮೂಲೆಗಳಲ್ಲಿ ಕಟ್ಟಬೇಕು. ಆಮೇಲೆ ಹರಿಯೋ ನೀರಲ್ಲಿ ಹಾಕಬೇಕು.

11 ಗೋಮತಿ ಚಕ್ರವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿಟ್ಟಿ ಬ್ಯಾಗಿನಲ್ಲಿ ಇಟ್ಟಿಕೊಂಡರೆ ಹಣ ಹರಿದು ಬರುತ್ತದೆ. ಕೆಟ್ಟ ಕಣ್ಣು ಅಥವಾ ಕೆಟ್ಟ ದೃಷ್ಟಿಯಿಂದ ದೂರವಿರಲು ಏಳು ಸಲ ಈ ಚಕ್ರವನ್ನು ತಲೆಗೆ ಸುತ್ತು ಬರಿಸಿ, ಹಿಂದಕ್ಕೆ ಬಿಸಾಕಬೇಕು. ನಂತರ ಅದನ್ನು ನೋಡದೆ ಮನೆಗೆ ಹೋಗಬೇಕು.

ಅಡುಗೆ ಮನೆಯಲ್ಲಿ ಸಾಮಾನು ಖಾಲಿಯಾಗಬಾರದೆಂದರೆ ಅಕ್ಕಿ ಡಬ್ಬ ಅಥವಾ ಗೋಧಿ ಹಿಟ್ಟಿನ ಡಬ್ಬದಲ್ಲಿ ಇದನ್ನು ಇಡಬೇಕು. 11 ಗೋಮತಿ ಚಕ್ರವನ್ನು ಕೆಂಪು ಕುಂಕುಮದೊಂದಿಗೆ ಇಟ್ಟಿಕೊಂಡರೆ ಮದುವೆ ಬೇಗ ಆಗುತ್ತದೆ ಎಂಬ ನಂಬಿಕೆಯೂ ಜನರಲ್ಲಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *