ಕೆಮ್ಮುಇದು ದೊಡ್ಡವರು, ಚಿಕ್ಕವ್ರು, ಮಕ್ಕಳು, ಬೇಸಿಗೆ, ಮಳೆಗಾಲ, ಚಳಿಗಾಲ ಹೀಗೆ ಎಲ್ಲ ವಯಸ್ಸಿನವರಿಗೂ ಮತ್ತು ಎಲ್ಲ ಋತುವಿನಲ್ಲೂ ಬರುವ ಸಾಮಾನ್ಯ ಕಾಯಿಲೆಯಾಗಿದೆ. ಕೆಮ್ಮು ಸಾಮಾನ್ಯವಾಗಿ ನಮ್ಮ ಕೇಂದ್ರೀಯ ಸ್ವಶನಾಳವನ್ನು ಸ್ವಚ್ಛ ಮಾಡಲು ನಡೆಯುವ ಪ್ರಕ್ರಿಯೆ. ನಿಮಗೆ ಆಗಾಗ ಕೆಮ್ಮಿನ ಸಮಸ್ಯೆ ಕಾಡುತ್ತಿದೆ ಎಂದರೆ ನಿಮ್ಮ ದೇಹದಲ್ಲಿ ಏನಾದರು ಸಮಸ್ಯೆ ಇದೆ ಎಂದರ್ಥ.
ಈ ಸುಲಭ ಮನೆಮದ್ದನ್ನು ಪಾಲಿಸಿದರೆ ಕೆಮ್ಮು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಬೇಕಾಗಿರುವ ಸಾಮಗ್ರಿಗಳು 400 ಎಂ.ಎಲ್ ನೀರು 2 ದೊಡ್ಡ ಚಮಚೆಯಷ್ಟು ಜೇನು ತುಪ್ಪ 2 ಚೆನ್ನಾಗಿ ಮಾಗಿದ ಬಾಳೆಹಣ್ಣು.
ಮೊದಲು ನೀರನ್ನು ಒಲೆಯ ಮೇಲೆ ಚೆನ್ನಾಗಿ ಕಾಯಿಸಿ. ಒಂದು ದೊಡ್ಡ ಪಾತ್ರೆಯಲ್ಲಿ ಸಿಪ್ಪೆ-ಸುಲಿದ ಬಾಳೆಹಣ್ಣುಗಳನ್ನು ಹಾಕಿ ಕಟ್ಟಿಗೆಯ ಚಮಚೆಯಿಂದ ಚೆನ್ನಾಗಿ ಒತ್ತಿರಿ. ಕಾಯಿಸಿದ ನೀರನ್ನು ಒತ್ತಿದ ಬಾಳೆಹಣ್ಣಿನ ಪಾತ್ರೆಯಲ್ಲಿ ಹಾಕಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಕೊನೆಗೆ 2 ಚಮಚೆ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಕಲಿಸಿರಿ. ಈ ಮಿಶ್ರಣವನ್ನು ಸ್ವಲ್ಪ ಕಾಯಿಸಿ, ದಿನಕ್ಕೆ ನಾಲ್ಕು ಬಾರಿ ಸೇವಿಸಿ ಕೆಮ್ಮಿನಿಂದ ಮುಕ್ತಿ ಹೊಂದಿರಿ. ಇದಲ್ಲದೆ ಈ ಮಿಶ್ರಣದಲ್ಲಿ ಸಿರೊಟೋನಿನ್ ಅಂಶ ಇರುವುದರಿಂದ, ನಿಮ್ಮ ನಿದ್ರೆಯ ಸಮಸ್ಯೆ ಕೂಡ ವಾಸಿಯಾಗಲಿದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.