ಥೈರಾಯ್ಡ್ ಸಮಸ್ಯೆಗೆ ಆಯುರ್ವೇದಲ್ಲಿ ನಮ್ಮ ಹಿರಿಯರು ಕಂಡು ಹಿಡಿದಿರುವ ಸುಲಭ ವಿಧಾನ

ಆರೋಗ್ಯ

ಪುರಾತನ ಕಾಲದಿಂದಲೂ ಆಯುರ್ವೇದ ಪದ್ಧತಿಯಲ್ಲಿ ಹೆಚ್ಚು ಉಪಯೋಗಿಸಲ್ಪಟ್ಟ ಔಷದೀಯ ಸಸ್ಯ. ಈಗ್ಲೂ ಅನೇಕ ಔಷಧಿಗಳಲ್ಲಿ ಅಶ್ವಗಂಧವನ್ನು ಉಪಯೋಗಿಸ್ತಾರೆ. ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕೊರತೆ ಉಂಟಾದ್ರೆ, ನೀವು ನೆನೆಸಿಕೊಳ್ಳಬೇಕಾದ ಮೊದಲ ಸಸ್ಯ ಅಂದ್ರೆ ಅಶ್ವಗಂಧ. ಅನೇಕ ಔಷಧೀಯ ಗುಣಗಳನ್ನು ಹೊಂದಿರೋ ಅಶ್ವಗಂಧದಲ್ಲಿ ಆರೋಗ್ಯಕ್ಕೆ ತುಂಬಾ ಯೂಸ್​ಫೂಲ್​. ಕ್ಯಾನ್ಸರ್​ನಂಥಾ ಅಪಾಯಕಾರಿ ರೋಗಗಳನ್ನು ಕೂಡಾ ಅಶ್ವಗಂಧದಿಂದ ಗುಣಪಡಿಸ್ಬಹುದು.

ಇದರಲ್ಲಿ ಬಹುಮುಖ್ಯವಾಗಿ ವೈಥಾನಿನ್ ಮತ್ತು ಸೊಮ್ನಿಫೆರಿನ್ ಎಂಬ ರಾಸಾಯನಿಕಗಳಿವೆ. ಇದರ ಬೇರುಗಳನ್ನು ಆಯುರ್ವೇದ ಮತ್ತು ಯುನಾನಿ ಔಷಧಿ ತಯಾರಿಸೋಕೆ ಬಳಸ್ತಾರೆ. ಬೇರು, ತೊಗಟೆ, ಎಲೆ, ಹಣ್ಣು ಮತ್ತು ಬೀಜಗಳಿಂದ ತೆಗೆದ ಸಸ್ಯಕ್ಷಾರಗಳನ್ನು ಅನೇಕ ತರಹದ ಬಾಧೆಗಳನ್ನು ವಾಸಿ ಮಾಡೋಕೆ ಅಶ್ವಗಂಧ ರಾಮಬಾಣ. ಬ್ಯಾಕ್ಟಿರಿಯಾ ವಿರುದ್ಧ ಹೋರಾಡೋಕೆ, ಉರಿ ನಿವಾರಕ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ, ನಿದ್ರಾಹೀನತೆ, ಕ್ಯಾನ್ಸರ್, ಸಂಧಿವಾತ, ಮಧುಮೇಹವನ್ನು ಹತೋಟಿಗೆ ತರುತ್ತೆ. ಅಲ್ದೇ ನರಮಂಡಲವನ್ನು ಸಧೃಡವಾಗಿಡುತ್ತೆ. ಥೈರಾಯಿಡ್, ಸ್ತ್ರೀಯರ ಮುಟ್ಟಿನ ಸಮಸ್ಯೆ, ಸಂತಾನಾಭಿವೃದ್ಧಿಗೆ ಸಹಾಯಕ.

ಥೈರಾಯ್ಡ್ ಎಂದರೇನು: ಥೈರಾಯ್ಡ್ ನಿಮ್ಮ ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಒಂದು ಗೃಂಥಿ. ಈ ಗೃಂಥಿಯು ನಿಮ್ಮ ಶರೀರದ ಅನೇಕ ಕಾರ್ಯ ಚಟುವಟಿಕೆಗಳಿಗೆ ಅತ್ಯವಶ್ಯಕವಾದ ಥೈರಾಯ್ಡ್ ಹಾರ್ಮೋನ್‍ಗಳನ್ನು ಉತ್ಪಾದಿಸುತ್ತದೆ.

ಥೈರಾಯ್ಡ್ ತೂಂದರೆಯಿಂದ ಯಾವ ಯಾವ ಕಾಯಿಲೆಗಳು ಉಂಟಾಗಬಹುದು: ಗಂಟಲುವಾಳ ರೋಗ: ಥೈರಾಯ್ಡ್ ಗೃಂಥಿಯು ದೊಡ್ಡದಾಗಿ ಬೆಳೆದರೆ ಗಾಯ್ಟರ್ ಎಂದು ಕರೆಯುತ್ತಾರೆ. ಹೈಪೋಥೈರಾಯ್ಡಿಸಮ್ : ಥೈರಾಯ್ಡ್ ಗೃಂಥಿ ಅಗತ್ಯಕ್ಕಿಂತ ಕಡಿಮೆ ಹಾರ್ಮೋನ್ ಉತ್ಪಾದನೆ ಮಾಡಿದರೆ ಉಂಟಾಗಬಹುದಾದ ರೋಗಕ್ಕೆ ಹೈಪೋಥೈರಾಯ್ಡಿಸಮ್ ಎನ್ನುತ್ತೇವೆ.

ಹೈಪರ್‌ಥೈರಾಯ್ಡಿಸಮ್ : ಥೈರಾಯ್ಡ್ ಗೃಂಥಿ ಅಗತ್ಯಕ್ಕಿಂತ ಹೆಚ್ಚು ಹಾರ್ಮೋನ್ ಉತ್ಪಾದನೆ ಮಾಡಿದರೆ ಉಂಟಾಗಬಹುದಾದ ರೋಗಕ್ಕೆ ಹೈಪರ್‌ಥೈರಾಯ್ಡಿಸಮ್ ಎಂದು ಕರೆಯುತ್ತಾರೆ.

ಥೈರಾಯ್ಡೈಟಿಸ್ : ಥೈರಾಯ್ಡ್ ಗೃಂಥಿಯಲ್ಲಿ ಉರಿ-ಊತ ಉಂಟಾಗಿ ಅದರಲ್ಲಿರುವ ಹಾರ್ಮೋನಿನ ಸಂಗ್ರಹವು ರಕ್ತಕ್ಕೆ ಸೋರಿಕೆಯಾಗಬಹುದು, ಹೀಗಾದಾಗ ರಕ್ತದಲ್ಲಿ ಹಾರ್ಮೋನ್ ಮಟ್ಟದ ಹೆಚ್ಚಳ ಉಂಟಾಗಬಹುದು. ಇದನ್ನು ಥೈರಾಯ್ಡೈಟಿಸ್ ಎಂದು ಕರೆಯುತ್ತಾರೆ.

ಥೈರಾಯ್ಡ್ ಗೃಂಥಿಯ ಗೆಡ್ಡೆಗಳು: ಹೆಚ್ಚಿನ ಸಂಧರ್ಭಗಳಲ್ಲಿ ಇವು ಸಾಮಾನ್ಯ ಗೆಡ್ಡೆಗಳಾಗಿರುತ್ತವೆ. ಅಪರೂಪವಾಗಿ ಕ್ಯಾನ್ಸರ್ ಕೂಡ ಆಗಿರಬಹುದು.

ಥೈರಾಯ್ಟ್​ ಸಮಸ್ಯೆಗೆ ಅಶ್ವಗಂಧ ಹೇಗೆ ಸಹಾಯಕ: ಹೈಪೋಥೈರಾಯ್ಡಿಸಮ್​: ಅಶ್ವಗಂಧ ಟಿ 4ಹಾರ್ಮೋನುಗಳನ್ನು ಉತ್ಪಾದಿಸಲು ಸಹಕಾರಿಯಾಗುತ್ತೆ. ಟಿ3 ಅನ್ನು ಸಕ್ರೀಯವಾಗಿ ಕಾರ್ಯ ನಿರ್ವಹಿಸಲು ಉತ್ತೇಜಿಸುತ್ತೆ. ಅಶ್ವಗಂಧ ಹೈಪೋಥೈರಾಯ್ಡಿಸಮ್​ಗೆ ನೈಸರ್ಗಿಕ ಚಿಕಿತ್ಸೆಯನ್ನು ನೀಡುತ್ತದೆ.

ಹೈಪರ್ ಥೈರಾಯ್ಡಿಸಮ್: ಇಲ್ಲಿ ಅಶ್ವಗಂಧ ಟಿ4, ಟಿ3 ಆಗಿ ಮಾರ್ಪಾಡಾಗುವುದನ್ನು ನಿಯಂತ್ರಿಸುತ್ತದೆ. ಇದು ಅಧ್ಯಾಯನ ನಡೆಸಿದಾಗಲೂ ಸಾಬೀತಾಗಿದೆ. ಎಚ್ಚರಿಕೆ: ಅಶ್ವಗಂಧ ತೆಗೆದುಕೊಳ್ಳುವ ಪ್ರಮಾಣದಲ್ಲಿ ಎಚ್ಚರವಾಗಿರಬೇಕು..

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *