ಪ್ರತಿಯೊಬ್ಬರ ಜೀವನದಲ್ಲೂ ಕನಸು ಅನ್ನುವ ಪದ ಬಹುಮುಖ್ಯವಾಗಿದೆ. ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ಕನಸು ಕಾಣುತ್ತಲೇ ಇರುತ್ತಾನೆ. ಆದರೆ ನಮ್ಮ ವ್ಯಾಪ್ತಿ ಎಷ್ಟೇ ಚಿಕ್ಕದಿದ್ದರೂ ನಮ್ಮ ಕನಸಿನ ವ್ಯಾಪ್ತಿ ಮಾತ್ರ ಯಾವಾಗಲು ದೊಡ್ಡದಿರುತ್ತದೆ. ನಮ್ಮ ದೇಶದ ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿಗಳಾದ ಅಬ್ದುಲ್ ಕಲಾಂ ಅವರು ಹೇಳಿರುವಂತೆ. ಎಲ್ಲರು ಕನಸು ಕಾಣಬೇಕು,ನಮ್ಮ ಕನಸು ನಮ್ಮ ನಿದ್ರೆಗೆಡಿಸುವಂತಹ ಕನಸಾಗಿರಬೇಕೆಂದು. ಎಲ್ಲರು ಕನಸು ಕಾಣುವುದು ಸಹಜ.ಆದರೆ ಅದು ನನಸಾಗುವುದು ಕೆಲವರ ಜೀವನದಲ್ಲಿ ಮಾತ್ರ.
ಇದೆ ರೀತಿ ದೊಡ್ಡ ಕನಸನ್ನ ಕಂಡು,ನನಸು ಮಾಡಿಕೊಂಡ 14 ವರ್ಷದ ಒಬ್ಬ ಪುಟ್ಟ ಬಾಲಕಿಯ ಯಶೋಗಾಥೆ ಇಲ್ಲಿದೆ. ಮಲಿಶಾ ಕುರುವ ಎನ್ನುವಾ ಈ ಬಾಲಕಿ ಹುಟ್ಟಿದ್ದು ಬಾಂಬೆಯ ಒಂದು ಸ್ಲಮ್ ಏರಿಯಾದಲ್ಲಿ. ಇವಳ ತಂದೆ ಮಖೇಶ್. ಇವರು ಕೂಡ ಅವಿದ್ಯಾವಂತರೆ. ಇವರಿಗೆ ಇಬ್ಬರು ಮಕ್ಕಳು. ಇವರ ಅವಿದ್ಯಾವಂತ ಕುಟುಂಬದಲ್ಲಿ ಶಾಲೆಯ ಮೆಟ್ಟಿಲು ಹತ್ತಿದ ಮೊದಲನೆಯವಳೆ ಮಲೀಶಾ. ಓದಿನಲ್ಲಿ ಮುಂದೆ ಇದ್ದ ಮಲೀಶಾ ಮಾತೃ ಮಾಷೆಯ ಜೊತೆಗೆ ಆಂಗ್ಲ ಭಾಷೆಯನ್ನ ಸಹ ತುಸು ಕಲಿತುಕೊಂಡಿದ್ದಳು.
ತನ್ನ ಜೀವನ್ನದಲ್ಲಿ ಈಕೆ ಕಂಡಿದ್ದು ಕೇವಲ ಹಸಿವು ಮತ್ತು ಕಷ್ಟದಜೀವನ.ಮಲಿಶಾ ತನ್ನ 5ನೆ ವಯಸ್ಸಿನಲ್ಲಿ ಕಂಡ ಕನಸು ಅವಳ 13ನೆಯ ವಯಸ್ಸಿನಲ್ಲಿ ನನಸುಗೊಂಡಿದ್ದೆ ಒಂದು ರೋಚಕ ಅಧ್ಯಾಯ. ಮಲೀಶಾ ತನ್ನ 5ನೇ ವಯಸ್ಸಿನಲ್ಲಿ ಯೂಟ್ಯುಬ್ನಲ್ಲಿ ವಿಡಿಯೊ ನೋಡುತ್ತಿರುವಾಗ, ಬಾಲಿವುಡ್ ನ ಖ್ಯಾತ ನಟಿ, ಪ್ರಿಯಾಂಕ ಛೋಪ್ರ ಅವರ ರ್ಯಾಂಪ್ ವಾಕ್ ನ ಮಾಡೆಲಿಂಗ್ ವಿಡಿಯೋವನ್ನು ನೋಡಿದ ಮಲೀಶ ತಾನು ಜೀವನದಲ್ಲಿ ಮುಂದೆ ಮಾಡಲಿಂಗ್ ಮತ್ತು ಡ್ಯಾನ್ಸರ್ ಆಗುವ ಆಸೆಯನ್ನು ವ್ಯಕ್ತಪಡಿಸುತ್ತಾಳೆ. ಕೆಲವು ವರ್ಷಗ ನಂತರ ಮಲೀಶಾ ಜೀವನದ ಒಳ್ಳೆಯ ದಿನಗಳು ಪ್ರಾರಂಭವಾಗ ತೊಡಗಿದವು.
ಹಾಲಿವುಡ್ ನ ಸ್ಟೆಪ್ ಅಪ್-೨ ಎಂಬ ಸಿನಿಮಾದ ನಟ ರಾಬರ್ಟ್ ಹಾಪ್ ಮನ್ ತನ್ನ ಹೊಸ ಮ್ಯುಸಿಕ್ ವಿಡಿಯೋ ಶೂಟ್ ಗಾಗಿ ಭಾರತಕ್ಕೆ ಬಂದಿದ್ದರು. ಬಾಂಬೆಯ ಕಡಲ ತೀರದಲ್ಲಿ ರಾಬರ್ಟ್ ಅಡ್ಡಾಡುವಾಗ, ಅಲ್ಲೆ ಹತ್ತಿರದಲ್ಲಿ ಮಲೀಶಾ ವಾಸಿಸುತ್ತಿದ್ದ ಸ್ಲಮ್ ಗೆ ಭೇಟಿ ನೀಡುತ್ತಾರೆ. ಆ ಸಂಧರ್ಭದಲ್ಲಿ ಅವರಿಗೆ ಅಲ್ಲಿ ಆಟವಾಡುತ್ತಿದ್ದ ಮಲೀಶಾಳ ಸ್ನೇಹಿತೆಯ ಪರಿಚಯವಾಗತ್ತೆ. ಅವಳಿಂದ ರಾಬರ್ಟ್ ಗೆ ಮಲೀಶಾಳ ಪರಿಚಯವಾಗುತ್ತದೆ. ಮಲೀಶಾ ರಾಬರ್ಟ್ ರೊಂದಿಗೆ ಇಂಗ್ಲೀಷ್ ನಲ್ಲಿ ಅಲ್ಲಿನ ಪರಿಸ್ಥಿತಿ,ತನ್ನ ಕನಸು ಮತ್ತು ತನ್ನ ಜೀವನದ ಪರಿಚಯ ಮಾಡಿಕೊಡುತ್ತಾಳೆ.
ಮಲೀಶಾಳ ಆ ಮುಗ್ದ ಮಾತುಗಳು, ಅವಳ ಕಣ್ಣಿನಲ್ಲಿನ ಹೊಳಪು ಕಂಡ ರಾಬರ್ಟ್ ಗೆ ತನ್ನ ಪ್ರಾಜೆಕ್ಟ್ ನಲ್ಲಿ ಇವಳಿಗೆ ಅವಕಾಶ ನೀಡಬೇಕೆಂದು ಅಂದು ಕೊಳ್ಳುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ಹಿಂದಿರುಗಿದ ರಾಬರ್ಟ್ ಗೆ, ಮಲೀಶಾಳಿಗೆ ಹೇಗಾದರು ಸಹಾಯ ಮಾಡಬೇಕೆಂದು ಅನಿಸಿ, ಮಲೀಶಾ ಹೆಸರಿನಲ್ಲಿ ಒಂದು ಇನ್ಸ್ಟಾಗ್ರಾಮ್ ಶಾಖೆಯನ್ನ ತೆರೆದು, ಅದರಲ್ಲಿ ತಾನು ಅಲ್ಲಿ ಮಲೀಶಾ ಮತ್ತು ಅಲ್ಲಿನ ಮಕ್ಕಳೊಂದಿಗೆ ಕಳೆದ ಸಮಯದ ಫೋಟೋ ಮತ್ತು ವೀಡಿಯೋಗಳನ್ನ ಅಪ್ಲೋಡ್ ಮಾಡುತ್ತಾರೆ,ಇದೆ ಮಲೀಶಾ ಬದುಕಿನ ಟರ್ನಿಂಗ್ ಪಾಯಿಂಟ್.
ನಂತರ ರಾಬರ್ಟ್ ಜೊತೆಗೆ ಇದ್ದ ಮಲೀಶಾಳ ಫೋಟೊ ಕಂಡ ನೆಟ್ಟಿಗರು,ಆ ಖಾತೆಯ ಒಳ ಹೊಕ್ಕಿ ನೋಡ ತೊಡಗಿದರು. ಆ ಫೋಟೊಗಳು ಹೆಚ್ಚು ವೈರಲ್ ಆದವು. ಮಲೀಶಾಳಾಳ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಲಕ್ಷದ ಮೂವತ್ತೈದು ಸಾವಿರ ಫಾಲೋವರ್ಸ್ ಸಂಖ್ಯೆ ಹೆಚ್ಚಿದವು. ಇದನ್ನ ಕಂಡ ಶೇನ್ ಮತ್ತು ಫಲ್ಗುಣಿ ಪಿಕಾಕ್ ಎಂಬುವ ಗ್ಲೋಬಲ್ ಸಂಸ್ಥೆ ಮಲೀಶಾಳ ಚಿತ್ರವನ್ನ ತನ್ನ ಮ್ಯಾಗಜೀನ್ ನ ಮುಖಪುಟವಾಗಿಸುವ ಚಿಂತನೆ ಮಾಡುತ್ತಾರೆ.
ಇದಾದ ನಂತರ ಭಾರತಕ್ಕೆ ಭೇಟಿ ನೀಡಿ, ಮಲೀಶಾಳ ಫೋಟೊ ಶೂಟಿಂಗ್ ಮುಗಿಸಿ ಕೊಂಡು ಹಿಂತಿರುಗಿದರು. ಮುಂದೆ 2020 ಅಕ್ಟೋಬರ್ ನಲ್ಲಿ ಪಿಕಾಕ್ ಮ್ಯಾಗಜೀನ್ ತನ್ನ ಮುಖ ಪುಟದಲ್ಲಿ ಮಲೀಶಾಳ ಚಿತ್ರವನ್ನ ಪ್ರಕಟಿಸಿತು. ಈ ಸುದ್ದಿ ಭಾರತಿಯರು ಧಿಗ್ಭ್ರಮೆಗೊಂಡು, ಹೆಮ್ಮೆ ಪಡುವಂತಾಯಿತು. ಇಂದು ಇಂಡಿಯಾದ ಮಾಡಲಿಂಗ್ ಮತ್ತು ಫ್ಯಾಶನ್ ಕಂಪೆನಿಗಳು ಮಲೀಶಾಳ ಕಾಲ್ ಶೀಟ್ ಪಡೆಯಲು ಮುಗಿಬಿದ್ದಿವೆ.
ಮಲೀಶಾ ಇಂದು ತನ್ನ ಕನಸನ್ನ ನನಸು ಮಾಡಿಕೊಂಡು ತನ್ನ ಕಾಲ ಮೇಲೆ ತಾನು ನಿಂತಿದ್ದಾಳೆ. ಮುಂದೆ ಮಲೀಶಾ ಭಾರತದ ಮಾಡ್ಲಿಂಗ್ ಮತ್ತು ಡ್ಯಾನ್ಸಿಂಗ್ ಕ್ಷೇತ್ರದಲ್ಲಿ ತನ್ನ ಛಾಪನ್ನ ಮೂಡಿಸಲಿ ಎಂದು ಹಾರೈಸೋಣ. ಮಲೀಶಾಳ ಬದುಕು,ಕನಸು ಕಾಣುವ ಎಲ್ಲಾ ಮಕ್ಕಳಿಗು ಸ್ಪೂರ್ತಿಯಾಗಿದೆ.