ಹಳ್ಳಿಗಳಲ್ಲಿ ಎಲ್ಲೇ ನೋಡಿದರೂ ಕೋಳಿಗಳು ಇದ್ದೇ ಇರುತ್ತದೆ. ಅದರಲ್ಲೂ ಸಿಟಿಗಳಲ್ಲಿ ಕೋಳಿಗಳನ್ನು ಬೆಳೆಸುವುದು ತಮ್ಮ ವ್ಯಾಪಾರಕ್ಕಾಗಿ ಮಾತ್ರ. ಆದರೆ ಹಳ್ಳಿಗಳಲ್ಲೂ ಸಹ ಅಷ್ಟೇ ಸಾಕು ಪ್ರಾಣಿಗಳಾಗಿ ಕೋಳಿ ಕುರಿ ಮೇಕೆ ಹಸು ಎಮ್ಮೆಗಳನ್ನು ಸಾಕುತ್ತಾರೆ. ಅದರಲ್ಲೂ ಕೋಳಿ ಕುರಿ ಮೇಕೆಗಳನ್ನು ರೈತರು ತಮ್ಮ ಹಣದ ಸಂಪಾದನೆಗೆ ಸಾಕುತ್ತಾರೆ ಎಂದು ಹೇಳಬಹುದು. ಇದರಲ್ಲಿ ಅಷ್ಟೂ ದುಡಿಮೆ ಏನೂ ಇರುವುದಿಲ್ಲ ಆದರೆ ಇವರಿಗೂ ಲಾಭವಿರುತ್ತದೆ ಮತ್ತೊಬ್ಬರಿಗೂ ಲಾಭ ಇರುತ್ತದೆ ಎಂದು ಹೇಳಬಹುದು.
ಈ ಲಾಭದಿಂದಲೇ ರೈತರು ತಮ್ಮ ಜೀವನವನ್ನು ಹಳ್ಳಿಯಲ್ಲಿ ನಡೆಸುತ್ತಿರುತ್ತಾರೆ. ಆದರೆ ಈ ಒಂದು ಕೋಳಿಯ ಬಗ್ಗೆ ನೀವು ಮಾಹಿತಿಯನ್ನು ಕೇಳಿದರೆ ನಿಜಕ್ಕೂ ಶಾಕ್ ಆಗುತ್ತದೆ. ಹೌದು ಈ ಕೋಳಿ ಇಂಡೋನೇಷ್ಯಾದಲ್ಲಿ ದೊರಕುತ್ತದೆ ಮತ್ತು ಇದರ ಬೆಲೆ ನೋಡಿದರೆ ಮೊತ್ತ 2 ಲಕ್ಷ ರೂ.ಗಳು ಆಗುತ್ತದೆ. ಇಷ್ಟು ಬೆಲೆ ಇರುವ ಕೋಳಿ ಯಾವುದೂ ಇಲ್ಲ. ಆದರೆ ಈ ಕೋಳಿಯು ನೋಡುವುದಕ್ಕೆ ಕಪ್ಪಾಗಿದ್ದು ಇಷ್ಟು ದೊಡ್ಡ ಮೊತ್ತದ ಬೆಲೆಯನ್ನು ಹೊಂದಿದೆ.
ಈ ಕೋಳಿ ನೋಡುವುದಕ್ಕೆ ಕಪ್ಪಾಗಿದ್ದು ಅದರ ಮೊಟ್ಟೆಗಳು ಸಹ ಕಪ್ಪಾಗಿರುತ್ತದೆ ಜೊತೆಗೆ ಅದರ ಕಣ್ಣುಗಳು ರೆಕ್ಕೆ ಮಾಂಸವು ಇಡೀ ದೇಹ ಪೂರ್ತಿ ಕೂಡ ಕಪ್ಪಾಗಿರುತ್ತದೆ. ಹೌದು ಇದನ್ನು ಕೇಳುತ್ತಿದ್ದರೆ ಸಾಕು ಒಂದು ರೀತಿಯ ಶಾಕ್ ಎಂದು ಎನಿಸುತ್ತದೆ. ಈ ರೀತಿಯಾಗಿ ಈ ಕೋಳಿಗೆ ಕಪ್ಪು ಬಣ್ಣ ಇರುವುದು ಫೈಬ್ರೊಮೆನಿಸಿಸ್ ಎನ್ನುವ ಕಾರಣಕ್ಕೆ. ಇದರಲ್ಲಿ ಗಂಡು ಕೋಳಿ ಮತ್ತು ಹೆಣ್ಣು ಕೋಳಿ ಎಂದು ಎರಡು ಇರುತ್ತದೆ. ಅದರಲ್ಲಿ ಗಂಡು ಕೋಳಿಯು 2 ರಿಂದ 3 ಕೆಜಿ ಇದ್ದರೆ ಹೆಣ್ಣು ಕೋಳಿಗಳು 1 ರಿಂದ 2 ಕೆಜಿ ತೂಕವಿರುತ್ತದೆ ಮತ್ತು ಕನಿಷ್ಠ ಎಂದರೆ ಇದರ ಬೆಲೆ 15000 ರೂ.ಗಳು ಇರುತ್ತದೆ.
ಈ ಕಪ್ಪು ಕೋಳಿಯು ಏಕೆ ಇಷ್ಟು ಬೆಲೆ ಹೊಂದಿದೆ ಎಂದರೆ ಇದನ್ನು ತಿಂದರೆ ಮನುಷ್ಯನ ದೇಹಕ್ಕೆ ಸಾಕಷ್ಟು ರೀತಿಯ ಆರೋಗ್ಯದ ಪ್ರಯೋಜನಗಳನ್ನು ಕೊಡುತ್ತದೆ. ಆದರೆ ಮಾಮೂಲಿ ಕೋಳಿಯನ್ನು ತಿಂದರೆ ಇಷ್ಟು ಪ್ರಯೋಜನಗಳು ಸಿಗುವುದಿಲ್ಲ. ಹಾಗಾಗಿ ಇದರ ಆರೋಗ್ಯದ ಲಾಭಗಳೇ ಇಷ್ಟು ಬೆಲೆಗೆ ಕಾರಣವಾಗಿದೆ ಎಂದು ಹೇಳಬಹುದು. ನೀವು ಟರ್ಕಿ ಕೋಳಿ ಎನ್ನುವ ಜಾತಿ ಕೋಳಿಯ ಬಗ್ಗೆ ಕೇಳಿರುತ್ತೀರಾ. ಅದರ ಮೊಟ್ಟೆಗಿಂತ ಇದು ಇನ್ನೂ ದೊಡ್ಡದಾಗಿರುತ್ತದೆ ಎಂದು ಹೇಳಿದ್ದಾರೆ. ಇದು ಅತ್ಯಂತ ದೊಡ್ಡ ಕೋಳಿ ಎಂದು ಹೇಳಬಹುದು. ಆದರೆ ಯು. ಕೆನಲ್ಲಿ ಇರುವ ಒಂದು ಕೋಳಿ ಇಡುವ ಮೊಟ್ಟೆ ಸುಮಾರು 12 ಇಂಚುಗಳು ಇದ್ದು ಜಗತ್ತಿಗೆ ಅದು ದೊಡ್ಡ ಮೊಟ್ಟೆಯಾಗಿ ಗುರುತಿಸಿಕೊಂಡಿದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.