ರಜನಿಕಾಂತ್ ಗೆ ಭಿಕ್ಷುಕ ಎಂದು ದೇವಸ್ಥಾನದ ಬಳಿ ಹತ್ತು ರೂಪಾಯಿ ನೀಡಿದ ಮಹಿಳೆ ರಜನಿ ಹಿಂತಿರುಗಿಸಿ ನೀಡಿದ್ದೇನು ಗೊತ್ತಾ

ಇತರೆ

ಸೆಲೆಬ್ರಿಟಿ ಎಲ್ಲರಂತೆ ಕೂಡ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಇರುವುದಿಲ್ಲ. ಕೆಲವರ ವರ್ತನೆಗಳು ನಮಗೆ ಅಸಹ್ಯ ಉಂಟು ಮಾಡುತ್ತವೆ. ಅವರಿಗೆ ತಾವು ನಡೆದು ಬಂದ ಹಾದಿ ನೆನಪಿಗೆ ಇರುವುದಿಲ್ಲ.ಆದರೆ ಇನ್ನೂ ಕೆಲವು ನಟರು ತಾವು ನಡೆದು ಬಂದ, ಸವೆಸಿದ ದಾರಿಯನ್ನು ಮರೆಯುವುದಿಲ್ಲ. ತಮ್ಮನ್ನು ಸಹಾಯ ಮಾಡಿದ ಜನರನ್ನು ಮರೆಯುವುದಿಲ್ಲ. ಇದಕ್ಕೆ ಒಳ್ಳೆಯ ಉದಾಹರಣೆ ಭಾರತದ ನಂಬರ್ ಒನ್ ನಟ ರಜನಿಕಾಂತ್. ಇವರು ಕೋಟಿಗಟ್ಟೆಲೆ ದುಡ್ಡು ಹೊಂದಿದ್ದರೂ ಅತ್ಯಂತ ಸರಳವಾಗಿ ಜೀವನ ನಡೆಸುತ್ತಾರೆ. ಅವರಿಗೆ ದುಡ್ಡಿನ ಮೇಲೆ ವ್ಯಾಮೋಹ ಇಲ್ಲ.

ರಜನಿ ವರ್ಷಕ್ಕೊಮ್ಮೆ ಹಿಮಾಲಯಕ್ಕೆ ಹೊರಡುತ್ತಾರೆ. ತಮ್ಮ ಸ್ನೇಹಿತರ ಜೊತೆ ಸೇರಿ ದೇವಸ್ಥಾನಕ್ಕೆ ಹೋಗುತ್ತಾರೆ. ಒಮ್ಮೊಮ್ಮೆ ಹಳೆಯ ವಸ್ತ್ರ ಧರಿಸಿ, ಕಾಲಿಗೆ ಹವಾಯ್ ಚಪ್ಪಲಿ ಧರಿಸಿ ಸಾಮಾನ್ಯ ಮನುಷ್ಯರ ಹಾಗೆ ಇರುತ್ತಾರೆ. ಬೀದಿ ಬದಿಯ ಹೋಟೆಲ್ ನಲ್ಲಿ ತಿಂಡಿ ತಿನ್ನುತ್ತಾರೆ .ರಜನಿಕಾಂತ್ ಒಮ್ಮೆ ಬೆಂಗಳೂರಿನ ದೇವಸ್ಥಾನಕ್ಕೆ ಹೋಗಬೇಕಿತ್ತು. ಅಲ್ಲಿ ಹೋದರೆ ಜನ ಗುರುತು ಹಿಡಿದು ಟ್ರಾಫಿಕ್ ಸಮಸ್ಯೆ, ದೇವಸ್ಥಾನದವರಿಗೂ ತೊಂದರೆ ಆಗುತ್ತದೆ ಎಂದು ತುಂಬಾ ಹಳೆಯ ಬಟ್ಟೆ ಧರಿಸಿ ಹೋದರು. ಆಗ ಅಲ್ಲಿ ಒಬ್ಬ ಮಹಿಳೆ ಇವರನ್ನು ನೋಡಿ ಬಿಕ್ಷುಕ ಎಂದು ತಿಳಿದು ಅವರಿಗೆ ಹತ್ತು ರೂಪಾಯಿ ನೋಟು ಕೊಡುತ್ತಾರೆ. ರಜನಿ ಯಾವುದೇ ಭಾವನೆ ತೋರಿಸದೆ ಆ ಹತ್ತು ರೂಪಾಯಿಯನ್ನು ತೆಗೆದುಕೊಳ್ಳುತ್ತಾರೆ.

ಅವರು ಭಿಕ್ಷುಕರಲ್ಲ ರಜನಿಕಾಂತ್ ಎಂದು ಹೇಳಿದರು. ರಜನಿಕಾಂತ್ ಇನ್ನೇನು ಕಾರು ಹತ್ತಬೇಕು ಅನ್ನುವಷ್ಟರಲ್ಲಿ ಆ ಮಹಿಳೆ ಓಡಿ ಬಂದು ಅವರ ಬಳಿ ಕ್ಷಮೆ ಕೇಳಿ.. ತಿಳಿಯದೆ ತಪ್ಪು ಮಾಡಿದೆ ನನ್ನ ಹಣ ಬೇಕಾದರೆ ವಾಪಸ್ ಕೊಡಿ ಎಂದು ಕೇಳಿದರು. ಆದರೆ ರಜನಿ ಮಾತ್ರ ಆಕೆಯನ್ನು ಸಮಾಧಾನ ಮಾಡಿ ಇದರಲ್ಲಿ ನಿಮ್ಮ ತಪ್ಪೇನಿಲ್ಲ ನಾನೊಬ್ಬ ಸಾಮಾನ್ಯ ವ್ಯಕ್ತಿ ಎಂದು ನಿಮ್ಮ ಮೂಲಕ ನನಗೆ ದೇವರು ತಿಳಿಸಿಕೊಟ್ಟಿದ್ದಾನೆ ಎಂದು ಹೇಳಿದರು.

ರಜನಿಕಾಂತ್ ದೇವಸ್ಥಾನಕ್ಕೆ ಹೋಗುತ್ತಿದ್ದಂತೆ ಅವರ ವೇಷ ಭೂಷಣ ನೋಡಿ ಭಿಕ್ಷುಕ ಇರಬಹುದು ಎಂದು ಭಾವಿಸಿದ ಒಬ್ಬ ಮಹಿಳೆ ರಜನಿಕಾಂತ್ ಗೆ ಹತ್ತು ರೂಪಾಯಿ ಭಿಕ್ಷೆ ಕೊಟ್ಟರು. ಆಗ ಏನು ಮಾತನಾಡದ ರಜನಿಕಾಂತ್ ವಿನಮ್ರವಾಗಿ ಆ ಮಹಿಳೆ ಕೊಟ್ಟ ಹತ್ತು ರೂಪಾಯಿ ತೆಗೆದುಕೊಂಡು ಮುಂದೆ ಸಾಗಿದರು. ಆದರೆ ನಂತರ ಹುಂಡಿಯಲ್ಲಿ ರಜನಿಕಾಂತ್ ಹಾಕುತ್ತಿದ್ದ ಹಣದ ಮೊತ್ತ ನೋಡಿ ಶಾಕ್ ಆದರು ಆ ಮಹಿಳೆ. ಇದರ ಮಧ್ಯೆ ರಜನಿಕಾಂತ್ ಅವರನ್ನು ಗುರುತು ಹಿಡಿದ ಅಲ್ಲಿನ ಜನ ಆ ಮಹಿಳೆಗೆ ಬೈದು ಅವರು ರಜನೀಕಾಂತ್ ಎಂದು ತಿಳಿಸುತ್ತಾರೆ.

ನಂತರ ರಜನಿ ಆ ದೇವಸ್ಥಾನದ ಹುಂಡಿಗೆ ಬಹಳ ಹಣ ಹಾಕುತ್ತಾರೆ. ಅದನ್ನು ಆ ಮಹಿಳೆ ನೋಡಿ ಶಾಕ್ ಆಗುತ್ತಾರೆ. ನಂತರ ಆಕೆಗೆ ಗೊತ್ತಾಗುತ್ತದೆ ಅವರು ಭಾರತದ ಶ್ರೇಷ್ಠ ನಟ ರಜನಿಕಾಂತ್ ಎಂದು. ನಂತರ ಆ ಮಹಿಳೆ ರಜನಿಕಾಂತ್ ಜೊತೆ ಕ್ಷಮೆ ಕೇಳಿ ಆ ಹತ್ತು ರೂಪಾಯಿ ವಾಪಾಸು ಕೊಡಿ ತಪ್ಪಾಯಿತು ಎಂದು ಕೇಳುತ್ತಾಳೆ.

ಆದರೆ ರಜನಿ ಇಲ್ಲ ಅಮ್ಮ. ನನಗೆ ನೀವು ಕಣ್ತೆರೆಸಿದ್ದೀರಿ. ನಿಮ್ಮದು ತಪ್ಪೇನಿಲ್ಲ ಎಂದು ಹೊರಡುತ್ತಾರೆ. ನಂತರ ಆ ಹತ್ತು ರೂಪಾಯಿ ಸೇರಿಸಿ ಸುಮಾರು ಹತ್ತು ಕೋಟಿಗೂ ಹೆಚ್ಚು ಹಣವನ್ನು ವಿವಿಧ ಅನಾಥಾಶ್ರಮಗಳಿಗೆ ದಾನ ಮಾಡುತ್ತಾರೆ.‌ ಆ ಮಹಿಳೆ ತನ್ನನ್ನು ಭಿಕ್ಷುಕ ಎಂದು ಭಾವಿಸಿದರು ಕೋಪ ಮಾಡಿಕೊಳ್ಳದೇ ಅದರಲ್ಲಿ ಒಳ್ಳೆಯ ಅರ್ಥ ಹುಡುಕಿದ ರಜನಿಕಾಂತ್ ಅವರ ಒಳ್ಳೆಯ ಭಾವನೆಯನ್ನು ಮೆಚ್ಚಲೇ ಬೇಕು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *