ಬಿಳಿ ಮಚ್ಚೆ ಆಗಿದೆ ಅಂತ ಕೊರಗಬೇಡಿ ಈ ಮನೆಮದ್ದುಗಳಿಂದ ಬಹುತೇಕ ಬಿಳಿ ಮಚ್ಚೆಗಳು ಮಾಯವಾಗುತ್ತವೆ

ಆರೋಗ್ಯ

ವೈಟ್ ಪ್ಯಾಚ್ ಅಥವಾ ಬಿಳಿ ಮಚ್ಚೆ ಹೆಚ್ಚಿನವರ ಸಮಸ್ಯೆಯಾಗಿದೆ. ದೇಹದಲ್ಲಿ ಮೆಲಾನಿನ್ ನಲ್ಲಿ ವ್ಯತ್ಯಾಸ ಉಂಟಾದಾಗ ವೈಟ್ ಪ್ಯಾಚ್ ಉಂಟಾಗುತ್ತದೆ ಆದರಿಂದ ಮೈಮೇಲೆ ಕಾಣುವ ಬಿಳಿ ಮಚ್ಚೆಗಳು ಎಲ್ಲರಲ್ಲೂ ಒಂದೆತರಹ ಮೂಡುವುದಿಲ್ಲ ಇವುಗಳಲ್ಲಿ ವ್ಯತ್ಯಾಸ ಕಂಡು ಬರುತ್ತೇವೆ ಸಾಮಾನ್ಯವಾಗಿ ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಕಾಣಿಸಿಕೊಳ್ಳುವ ಬಿಳಿ ಮಚ್ಚೆಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಮಕ್ಕಳಲ್ಲಿ ಅಗಲವಾಗಿ ಇಲ್ಲವೇ ಪ್ರತ್ಯೇಕ ಬೇರೆಯಾಗಿ ಕಾಣಿಸಿಕೊಳ್ಳುತ್ತವೆ.

ಗಂಡು ಮಕ್ಕಳಿಗೆ ಹೋಲಿಸಿದರೆ ಹೆಣ್ಣು ಮಕ್ಕಳಲ್ಲಿ ಬಾಲ್ಯದಲ್ಲಿ ಬಿಳಿ ಮಚ್ಚೆ ಹೆಚ್ಚು ಕಂಡುಬರುತ್ತೇವೆ. ಅದರಲ್ಲೂ ಮುಖ್ಯವಾಗಿ ಕೊಯೆಬ್ನೆರೈಝೇಶನ್ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಇದು ಕಂಡು ಬರುವುದು ಗಾಯ ಅಥವಾ ಏಟು ಬಿದ್ದ ಜಾಗದಲ್ಲಿ ಕಾಣಿಸಿಕೊಳ್ಳುವ ಬಿಳಿ ಮಚ್ಚೆಗೆ ಕೊಯೆಬ್ನೆರೈಝೇಶನ್ ಎಂದು ಹೆಸರು. ಮಕ್ಕಳು ಆಟವಾಡುವಾಗ ದೇಹದ ಮೇಲೆ ಗಾಯವಾಗುವುದು ಸಾಮಾನ್ಯವಾಗಿದೆ.

ಇನ್ನೊಂದು ಮುಖ್ಯವಾಗಿ ಕಂಡು ಬರುವುದು ಹೇಗೆಂದರೆ ಆಟೋ ಇಮ್ಯೂನ್ ಕಾಯಿಲೆಗಳಾದ ಹೈಪೋಥೈರಾಯ್ಡಿಸಂ, ಮಧುಮೇಹ ಮತ್ತು ಒಂದು ರೀತಿಯ ಬೊಕ್ಕತಲೆಯಿಂದ ಬಳಲುತ್ತಿರುವ ವಯಸ್ಕರಲ್ಲಿ ಸಾಮಾನ್ಯವಾಗಿ ಬಿಳಿ ಮಚ್ಚೆ ಕಾಣಿಸಿಕೊಳ್ಳುತ್ತದೆ. ಇದರ ಬದಲಾಗಿ ಮಕ್ಕಳಲ್ಲಿ ಸಾಮಾನ್ಯವಾಗಿ ಇದು ಆರೋಗ್ಯಕರವಾಗಿದ್ದು, ಹೆಚ್ಚು ಸಮಸ್ಯೆಯಾಗುವುದಿಲ್ಲ. ಇದಕ್ಕೆ ಆನುವಂಶಿಕವಾಗಿ ಶೇ. 8ರಷ್ಟು ವಯಸ್ಕರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಈ ರೀತಿ ವಂಶಪಾರಂಪರ್ಯವಾಗಿ ಬರಬಹುದು ಅಥವಾ ಸೂರ್ಯನ ಕಿರಣಗಳು ತಾಗಿ ಕೆಲವರಲ್ಲಿ ಬಿಳಿ ಮಚ್ಚೆ ಉಂಟಾಗಬಹುದು ಇದರಿಂದ ಸೌಂದರ್ಯಕ್ಕೆ ಕುತ್ತು ಬರುತ್ತೆ ಇಂತಹ ಮಚ್ಚೆಗಳಿಗೆ ಸುಲಭವಾದ ಮನೆಮದ್ದು ಇಲ್ಲಿದೆ ನೋಡಿ.

ಬಿಳಿ ಮಚ್ಚೆಗೆ ಮನೆಮದ್ದು: ಆಹಾರದಲ್ಲಿ ಸೊಪ್ಪು, ತರಕಾರಿ, ಹಣ್ಣುಗಳ ಸೇವನೆ ಹೆಚ್ಚಾಗಿರಲಿ. ನೀರನ್ನು ಕುದಿಸಿ, ಆರಿಸಿ ಕುಡಿಯಿರಿ. ಕಡಿಮೆಯಾಗುತ್ತದೆ. ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ ಅದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಬಿಳಿ ಮಚ್ಚೆ ಕಡಿಮೆಯಾಗುವುದು. ದಾಳಿಂಬೆ ಗಿಡದ ಎಲೆಯನ್ನು ಒಣಗಿಸಿ ಅದನ್ನು ಸ್ವಲ್ಪ ಪುಡಿಯನ್ನು ನೀರಿನಲ್ಲಿ ಹಾಕಿಟ್ಟು ಸ್ವಲ್ಪ ಹೊತ್ತಿನ ಬಳಿಕ ಸೋಸಿ ಆ ನೀರನ್ನು ಕುಡಿಯಬೇಕು. ಈ ರೀತಿ ಪ್ರತಿದಿನ ಮಾಡುತ್ತಾ ಬಂದರೆ ಬಿಳಿಮಚ್ಚೆಯ ಸಮಸ್ಯೆಯನ್ನು ಹೋಗಲಾಡಿಸಬಹುದು.

ಶುಂಠಿಯ ರಸವನ್ನು ಬಿಳಿ ಮಚ್ಚೆಯ ಮೇಲೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ತೊಳೆಯಬೇಕು. ಈ ರೀತಿ ಮಾಡುತ್ತಾ ಇದ್ದರೆ ಬಿಳಿಮಚ್ಚೆ ಬೇಗನೆ ಗುಣಮುಖವಾಗುತ್ತದೆ. ಅಧಿಕ ರಾಸಾಯನಿಕವಿರುವ ಸೋಪನ್ನು ಬಳಸದೆ ಇರುವುದು ಒಳ್ಳೆಯದು ಮತ್ತು ಅತೀಯಾದ ಬಿಸಿಲಿನಲ್ಲಿ ಬಿಸಿನೀರಿನಿಂದ ಸ್ಥಾನ ಮಾಡುವುದು, ಇಲ್ಲ ತಣ್ಣನೆಯ ವಾತಾವರಣದಲ್ಲಿ ಅತೀಯಾದ ತಣ್ಣನೆಯ ನೀರಿನಿಂದ ಸ್ಥಾನ ಮಾಡುವುದು ತಪ್ಪಿಸಿ.
ಬಿಳಿಯಾಗಿರುವ ಭಾಗಕ್ಕೆ ಬಾವಂಚಿ ತೈಲವನ್ನು ಹಚ್ಚಿ ಲೇಪಿಸಿದ ನಂತರ ಬೆಳಗಿನ ಸೂರ್ಯನ ಕಿರಣಗಳಿಗೆ, ಸ್ವಲ್ಪ ಹೊತ್ತು ಎಳೆ ಬಿಸಿಲಿಗೆ ನಿತ್ತುಕೊಳ್ಳಿ.

ಆಹಾರದಲ್ಲಿ ಹುಳಿ ಪದಾರ್ಥಗಳಾದ ಹುಣಸೆಹಣ್ಣು, ಟೊಮೆಟೊ, ನಿಂಬೆಹಣ್ಣು ಮುಂತಾದವುಗಳನ್ನು ಹೆಚ್ಚು ಸೇವಿಸಬಾರದು. ಅಧಿಕ ಬಿಸಿಲಿನಲ್ಲಿ ತಿರುಗಾಡಬಾರದು. ಬಿಸಿಲಿಗೆ ಹೋಗಲೇಬೇಕಾದಲ್ಲಿ ಕೊಡೆ ಉಪಯೋಗಿಸಿ. ಹತ್ತಿ ಬಟ್ಟೆಯನ್ನು ಧರಿಸಿ. ಈ ರೀತಿಯ ಕ್ರಮಗಳನ್ನು ಪಾಲಿಸಿ ನಿಮ್ಮ ತ್ವಚೆಯ ಸಮಸ್ಯೆಯಿಂದ ಹೊರ ಬನ್ನಿ ಇದನ್ನು ನಿಮಗೆ ಗೊತ್ತಿರುವ ಸ್ನೇಹಿತರಿಗೆ ಅಥವಾ ಆಪ್ತರಿಗೆ ತಿಳಿಸಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *