ಪಾದವು ದೇಹದ ವಿವಿಧ ಅಂಗಾಂಗಗಳನ್ನು ಪ್ರತಿನಿಧಿಸುತ್ತದೆ. ದಿನವೂ ೪೦-೪೩ ಡಿಗ್ರಿ ಕೆಲಸಿಯಂ ತಾಪಮಾನವಿರುವ ನೀರಿನಲ್ಲಿ ಪಾದ, ಹಿಮ್ಮಡಿ, ಅರ್ಧದಷ್ಟು ಕಾಲನ್ನು ಅದ್ಧಿ ೧೫ ನಿಮಿಷಗಳ ಕಾಲ ಕುಳಿತಲ್ಲಿನಿಮ್ಮ ದೇಹದಲ್ಲಿ ಅದ್ಭುತವಾದ ಪರಿಣಾಮಗಳು ಉಂಟಾಗುತ್ತದೆ. ದಿನವೂ ಮಲಗುವ ಮುಂಚೆ ಫ್ರೀ ಇದ್ದಾಗ ಟಿವಿ ನೋಡುತ್ತಿರುವಾಗ ಪೇಪರ್ ಓದುತ್ತಿರುವಾಗ ನಿಮ್ಮ ಕಾಲುಗಳನ್ನು ಬಿಸಿ ನೀರಿನಲ್ಲಿ ಅದ್ಧಿಟ್ಟಲ್ಲಿ ಅರೋಗ್ಯ ಉತ್ತಮವಾಗುವುದರಲ್ಲಿ ಸಂಶಯವೇ ಇಲ್ಲ.
ಒತ್ತಡದ ಉಂಟಾದ ತಲೆನೋವು ಕಡಿಮೆಯಾಗುತ್ತದೆ: ಪಾದವನ್ನು ಬಿಸಿ ನೀರಿನಲ್ಲಿ ಅದ್ದಿದಾಗ ಆ ಜಾಗಕ್ಕೆ ರಕ್ತ ಸಂಚಾರ ಅಧಿಕವಾಗುವುದರಿಂದ, ಕತ್ತಿನ ಸ್ನಾಯುಗಳು ಸಡಿಲವಾಗುತ್ತದೆ. ಪರಿಣಾಮ ಒತ್ತಡದಿಂದ ಉಂಟಾದ ತಲೆನೋವು ಮಂಗಮಾಯವಾಗುತ್ತದೆ.
ನಿದ್ರಾಹೀನತೆಗೆ: ರಾತ್ರಿ ಮಲಗುವ ಮುನ್ನ ಪಾದವನ್ನು ಬಿಸಿ ನೀರಿನಲ್ಲಿ ಅದ್ದುವುದರಿಂದ ಅಲ್ಲಿನ ಸ್ನಾಯುಗಳ ಬಿಗಿತ ಕಡಿಮೆಯಾಗಿ, ವಿಶ್ರಾಂತಿ ಕ್ರಿಯೆ ಹೆಚ್ಚಾಗಿ ನಿದ್ದೆ ಚೆನ್ನ್ನಾಗಿ ಬರುತ್ತದೆ.
ನೆಗಡಿ/ ಕಫ ತೊಂದರೆಗೆ: ಮೂಗಿನಿಂದ ನೀರು ಸೋರುತ್ತಿದ್ದರೆ ಅಥವಾ ಎದೆಯಲ್ಲಿ ಕಫ ಕಟ್ಟಿಕೊಂಡತ್ತಿದ್ದರೆ ತಡಮಾಡಬೇಡಿ ಕೂಡಲೇ ನಿಮ್ಮ ಪಾದಗಳನ್ನು ಬಿಸಿ ನೀರಿನಲ್ಲಿ ಅದ್ದಿ ಜೊತೆಗೆ ಮೂಗಿಗೆ ಹಬೆಯನ್ನು ತೆಗೆದುಕೊಳ್ಳಿ. ಹೀಗೆ ಮಾಡುವುದರಿಂದ ನೆಗಡಿ ಹಾಗು ಕಫದ ಸಮಸ್ಯೆಯಿಂದ ತತ್ತಕ್ಷಣ ಪರಿಹಾರ ಕಂಡುಕೊಳ್ಳಬಹುದು.
ನೋವಿನ ಶಮನಕ್ಕೆ: ಜಾಸ್ತಿ ಕೆಲಸ ಮಾಡಿದಾಗ ಸುಸ್ತಾದಾಗ ಸಾಮಾನ್ಯವಾಗಿ ಕಾಲುಗಳು ನೋವಾಗುತ್ತದೆ. ಆಗ ಬಿಸಿ ನೀರಿನ ಜೊತೆ ಸೈನ್ದವ ಲವಣ ಬೆರೆಸಿ ಪಾದವನ್ನು ಅದ್ಧಿಡುವುದರಿಂದ ನೋವು ಕಡಿಮೆಯಾಗುತ್ತದೆ.
ತೂಕ ಕಡಿಮೆ ಮಾಡಲು: ಕಾಲಿಗೂ ತೂಕಕ್ಕೂ ಏನಪ್ಪಾ ಸಂಬಂಧ ಅಂತ ಯೋಚಿಸ್ತಿದೀರಾ ಬಿಸಿನೀರಿನಲ್ಲಿ ಕಾಲುಗಳನ್ನು ಅದ್ಧುವುದರಿಂದ ಮೆಟಾಬಾಲಿಕ್ ರೇಟ್ ಹೆಚ್ಚಾಗಿ ಕ್ಯಾಲೊರಿ ಬರ್ನಿಂಗ್ ಅಧಿಕವಾಗುತ್ತದೆ. ಇದರಿಂದ ತೂಕ ಕ್ರಮೇಣ ಕಡಿಮೆಯಾಗುತ್ತದೆ.
ಮೈಗ್ರೇನ್ ತಲೆನೋವಿಗೆ: ಮೈಗ್ರೇನ್ ತಲೆನೋವಿನಿಂದ ಬಳಲುತ್ತಿರುವವರು ಎರಡು ಕಾಲುಗಳನ್ನು ಬಿಸಿ ನೀರಿನಲ್ಲಿರಿಸಿ ಹೊಟ್ಟೆ ಮತ್ತು ತಲೆಯ ಮೇಲೆ ತಣ್ಣಗಿನ ಬಟ್ಟೆಯನ್ನು ಹಾಕಿಕೊಂಡು ೧೫ ನಿಮಿಷ ಕುಳಿತಲ್ಲಿ ತಲೆನೋವು ಶಮನವಾಗುತ್ತದೆ.
ಮಧುಮೇಹಿಗಳಿಗೆ: ಸಾಮಾನ್ಯವಾಗಿ ಮಧುಮೇಹಿಗಳ ಪಾದಗಳಲ್ಲಿ ಸಂವೇದನಾಶೀಲತೆ ಹಾಗು ರಕ್ತಸಂಚಾರ ಕಡಿಮೆಯಾಗಿರುತ್ತದೆ. ಹೀಗೆ ಉಗುರು ಬೆಚ್ಚಗಿನ ನೀರಿನಲ್ಲಿ ಕಾಲುಗಳನ್ನು ಇರಿಸುವುದರಿಂದ ರಕ್ತ ಸಂಚಾರ ಅಧಿಕವಾಗಿ ಸಂವೇದನೆಯು ಹೆಚ್ಚುತ್ತದೆ. ಗಾಯ ಹಾಗು ಪಾದದ ಉರಿಯಿಂದ ಬಳಲುತ್ತಿರುವವರು ಇದನ್ನು ಮಾಡಬಾರದು.
ಹಿಮ್ಮಡಿ ಒಡೆತ ಪದಗಳ ಸ್ವಚ್ಛತೆ: ಪಾದವನ್ನು ಬಿಸಿ ನೀರಿನಲ್ಲಿ ಇಡುವುದು ಸೌಂದರ್ಯ ಚಿಕಿತ್ಸೆಯು ಸಹ. ಬಿಸಿ ನೀರಿನ ಜೊತೆ ಹೈಡ್ರೋಜನ್ ಪೆರಾಕ್ಸೈಡ್ ಸೊಲ್ಯೂಷನ್ ಅನ್ನು ಬೆರೆಸಿ ಪಾಡ್ವನ್ನು ಅದ್ಧಿ ನಂತರ ಅದಕ್ಕೆ ಪೆಟ್ರೋಲಿಯಂ ಜೆಲ್ಲಿ ಹಚ್ಚುವುದರಿಂದ ಸುಂದರ ಕೋಮಲ ಸ್ವಚ್ಛ ಪಾದಗಳು ನಿಮ್ಮದಾಗುತ್ತವೆ.
ಒತ್ತಡ ನಿರ್ವಹಣೆಗೆ: ಒಂದು ಬಕೆಟ್ ಬಿಸಿನೀರಿಗೆ ಮಲ್ಲಿಗೆ ಅಥವಾ ಇತರ ಸುಗಂಧಯುಕ್ತ ತೈಲವನ್ನು ಬೆರೆಸಿ ಕುಳಿತಲ್ಲಿ ಮಾನಸಿಕ ಉದ್ವೇಗಗಳು ಕಡಿಮೆಯಾಗಿ ವಿಶ್ರಾಂತಿ ಲಭಿಸುತ್ತದೆ.
ಡಿಟಾಕ್ಸಿಫಿಕೇಷನ್: ಬಿಸಿನೀರಿನ ಜೊತೆ ಗ್ರೀನ್ ಟೀ ಬೆರೆಸಿ ಅದ್ಧುವುದರಿಂದ ದೇಹದಲ್ಲಿರುವ ಕಲ್ಮಶಗಳು ಚರ್ಮದ ಮುಖೇನ ಹೊರ ಹೋಗುತ್ತದೆ. ಇದರಿಂದ ಅಂಗಾಂಗಗಳ ಕಾರ್ಯದಕ್ಷತೆ ಹೆಚ್ಚಾಗುತ್ತದೆ ಸಹ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.