ಈಶ್ವರನ ಪೊಜೆಗೆ ಶ್ರೇಷ್ಠವಾದ ಹೂವು, ಹಾವು ಕಚ್ಚಿದಾಗ, ರಕ್ತ ಬೇಧಿಗೆ, ಹಲ್ಲು ನೋವಿಗೆ ನಂದಿಬಟ್ಟಲು ಹೂವನ್ನು ಹೀಗೆ ಬಳಸಿ ಬೇಗ ಗುಣವಾಗುತ್ತದೆ

ಆರೋಗ್ಯ

ಹಿಮಾಲಯದಲ್ಲಿ ಹೆಚ್ಚಿನದಾಗಿ ಕಂಡುಬರುವ ನಂದಿ ಬಟ್ಟಲು ಈಶ್ವರನ ಪೊಜೆಗೆ ಶ್ರೇಷ್ಠವಾದ ಹೂವು. ಹೌದು, ಈ ಹೂವನ್ನು ದೇವಸ್ಥಾನಗಳಲ್ಲಿ ಪೂಜೆಗೆ ಇರಲೆಂಬ ಉದ್ದೇಶದಿಂದ ಇದನ್ನು ಬೆಳೆಸಲಾಗುತ್ತದೆ. ಕಡು ಹಸಿರು ಬಣ್ಣದ ಎಲೆಗಳನ್ನು ಹೊಂದಿರುವ ಬಿಳಿಯ ಬಣ್ಣದ ಹೂಗಳನ್ನು ಮೈ ತುಂಬ ಹೊತ್ತು ಕೊಂಡು ನಳನಳಿಸುವ ಹೂವು ತುಂಬಿದ ಗಿಡ ನಂದಿಬಟ್ಟಲು. ಐದು ಎಸಳಿನ ಮಲ್ಲಿಗೆ ಹೂವನ್ನು ಹೋಲುವ ನಂದಿಬಟ್ಟಲು ಹೆಚ್ಚು ಔಷದಿ ಗುಣ ಹೊಂದಿರುವಂತದ್ದು. ಈ ಗಿಡದ ಹೂವು, ಬೇರು, ಎಲೆ ಔಷಧೀಯ ಗುಣ ಹೊಂದಿದೆ. ಬೇರು ಶಾಮಕ ಗುಣ ಹೊಂದಿದೆ.

ನೇತ್ರ ರೋಗಗಳಲ್ಲಿ ಇದು ಅತ್ಯಂತ ಬಹಳ ಪರಿಣಾಮಕಾರಿಯಾಗಿದೆ. ಬಹಳ ರಕ್ತ ಬೇಧಿಯಾಗುತ್ತಿದ್ದಲ್ಲಿ, ನಂದಿಬಟ್ಟಲು ಹೂವನ್ನು ಜೀರಿಗೆ ಮತ್ತು ಕಲ್ಲು ಸಕ್ಕರೆಯ ಜೊತೆಗೆ ಅರೆದು ಹಾಲಿನೊಂದಿಗೆ ಸೇವಿಸಬೇಕು. ಗಾಯಗಳಾಗಿದ್ದಲ್ಲಿ ನಂದಿಬಟ್ಟಲು ಎಲೆಯನ್ನು ಕರ್ಪೂರದೊಡನೆ ಅರೆದು ಕಲ್ಕ ಮಾಡಿ ಲೇಪಿಸಬೇಕು.

ಜಂತುಗಳಾಗಿದ್ದಲ್ಲಿ ನಂದಿಬಟ್ಟಲು ಎಳೆಗಳ ರಸಕ್ಕೆ ಸ್ವಲ್ಪ ಹಿಂಗುವಿನ ಪುಡಿ ಬೆರೆಸಿ ಸೇವಿಸಬೇಕು. ಕಣ್ಣಿನ ತೊಂದರೆ ಅಂದರೆ ಕೆಂಪಾಗಿದ್ದರೆ ನಂದಿಬಟ್ಟಲು ಮೊಗ್ಗನ್ನು ಬಟ್ಟೆಯಲ್ಲಿ ಕಟ್ಟಿ ಎದೆಹಾಲಿನಲ್ಲಿ ಮುಳುಗಿಸಿ ನಂತರ ನೀವು ಹಾನಿಯನ್ನು ಕಣ್ಣಿಗೆ ಹಿಂಡುವುದರಿಂದ ಗುಣವಾಗುತ್ತದೆ. ಎದೆಹಾಲಿನ ಬದಲಾಗಿ ಎಳನೀರನ್ನು ಸಹ ನೀವು ಉಪಯೋಗಿಸಬಹುದು.

ಹಲ್ಲು ನೋವಿನಿಂದ ಬಳಲುವವರು ನಂದಿಬಟ್ಟಲು ಗಿಡದ ಬೇರು ಇಲ್ಲವೇ ಬೇರಿನ ತೊಗಟೆಯನ್ನು ಬಾಯಲ್ಲಿರಿಸಿಕೊಂಡು ಚಪ್ಪರಿಸುವುದರಿಂದ ನೋವು ಬಹಳ ಬೇಗ ಶಮನವಾಗುತ್ತದೆ. ಇಸುಬು, ದದ್ದು ಹೀಗೆ ಅನೇಕ ಮುಂತಾದ ಚರ್ಮ ರೋಗಗಳಲ್ಲಿ ನಂದಿಬಟ್ಟಲು ಹೂವಿನ ರಸ ಲೇಪಿಸಬೇಕು.

ಕಣ್ಣಿನಲ್ಲಿ ಪೊರೆ ಆರಂಭವಾದ ಹಂತದಲ್ಲಿರುವಾಗ ಹೂವಿನ ರಸವನ್ನು ಇಲ್ಲವೇ ಬೇರನ್ನು ತೇಯ್ದು ಲೇಪಿಸುವುದರಿಂದ ಉತ್ತಮ. ಆದರೆ ಈ ಚಿಕಿತ್ಸೆ ಆರಂಭಿಸುವ ಮುನ್ನ ಒಂದು ಸಲ ಆಯುರ್ವೇದ ವೈದ್ಯರ ಸಲಹೆ ಪಡೆಯಬೇಕಾದುದು ಅವಶ್ಯಕ. ಸ್ತ್ರೀಯರಲ್ಲಿ ಮುಟ್ಟು ನಿಲ್ಲುವ ಸಮಯದಲ್ಲಿ ಉಂಟಾಗುವ ಅನೇಕ ಸಮಸ್ಯೆಗಳಿಗೆ ನಂದಿಬಟ್ಟಲು ಉಪಯುಕ್ತವಾದುದು.

ನಿದ್ರಾಹೀನತೆ ತೊಂದರೆಯುಳ್ಳವರು ನಂದಿಬಟ್ಟಲನ್ನು ಸೇವನೆ ಮಾಡುವುದರಿಂದ ಮತ್ತು ಮುಡಿಯುವುದರಿಂದ ನಿದ್ರೆ ಬರುತ್ತದೆ. ಕೆಲವು ಸ್ತ್ರೀಯರಲ್ಲಿ ಗರ್ಭ ಕೋಶದ ತೊಂದರೆಗಳಿಂದ ಪದೇ ಪದೇ ಗರ್ಭಪಾತವಾಗುವುದು ಇಲ್ಲವೇ ಗರ್ಭದಾರಣೆ ತಡವಾಗುತ್ತಿದ್ದಲ್ಲಿ ಅಂತವರು ಋತುಸ್ರಾವದ ನಾಲ್ಕನೇ ದಿನದಿಂದ ಏಳನೇ ದಿನಗಳವರೆಗೆ ಐದು ತಾಜಾ ನಂದಿಬಟ್ಟಲು ಎಲೆಗಳನ್ನು ಎರಡು ಚಮಚೆ ಕೆಂಪು ಅಕ್ಕಿಯೊಂದಿಗೆ ನುಣ್ಣಗೆ ಅರೆದು ತುಪ್ಪ ಮತ್ತು ಜೇನು ತುಪ್ಪ ಬೆರೆಸಿ ಸೇವಿಸಬೇಕು. ಇದೆ ರೀತಿ ಮೂರು ತಿಂಗಳು ಮುಟ್ಟಾದ ನಾಲ್ಕನೇ ದಿನದಿಂದ ಏಳನೇ ದಿನಗಳವರೆಗೆ ಸೇವಿಸಬೇಕು.

ಹಾವುಕಚ್ಚಿದಾಗ ನಂದಿಬಟ್ಟಲು ಬೇರನ್ನು ಸ್ವಚ್ಛವಾಗಿ ತೊಳೆದು ನೀರಿನಲ್ಲಿ ತೇಯ್ದು ರಸವನ್ನು ಮೋಜಿನಲ್ಲಿ ಹಾಕಬೇಕು. ಅಲ್ಲದೆ ಜೇನುತುಪ್ಪದೊಂದಿಗೆ ಬೆರೆಸಿ ಸಹ ತಿನ್ನಿಸಬೇಕು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *