ತುಂಬೆಯು ಅಸಾಧಾರಣ ಔಷಧೀಯ ಗುಣವುಳ್ಳ ಹಿತ್ತಲ ಗಿಡ. ಈ ಗಿಡದ ಬಿಳಿಯ ಹೂವುಗಳು ಜಗದೀಶ್ವರನಿಗೆ ಹೆಚ್ಚು ಪ್ರಿಯ. ತುಂಬೆಯ ಹಸಿರೆಲೆ ಹಲವಾರು ರೋಗಗಳಿಗೆ ರಾಮಬಾಣ.
ಎರಡು ಟೀ ಚಮಚ ತುಂಬೆಯ ಸೊಪ್ಪಿನ ರಸದೊಂದಿಗೆ ಕಾಲು ಚಮಚ ಕಾಳುಮೆಣಸಿನ ಚೂರ್ಣ ಸೇರಿಸಿ ದಿನಕ್ಕೆ ಮೂರು ಬಾರಿ ಸೇವಿಸಿದ್ದಲ್ಲಿ ನೆಗಡಿ ಸಹಿತವಾದ ಸಾಧಾರಣ ಜ್ವರವಾಗಲಿ, ವಿಷಮ ಶೀತ ಜ್ವರವಾಗಲಿ ಪರಿಹಾರವಾಗುವುದು. ಪಕ್ವವಾದ ತುಂಬೆಯ ಸೊಪ್ಪಿಗೆ ನಾಲ್ಕೈದು ಚಿಟಿಕೆ ಸೈನದವ ಲವಣ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಿದ್ದಲ್ಲಿ ಅಜೀರ್ಣ ನಿವಾರಣೆಯಾಗುವುದು.
ಒಂದು ಟೀ ಚಮಚ ತುಂಬೆ ರಸವನ್ನು ಅಷ್ಟೇ ಪ್ರಮಾಣದ ನಿಂಬೆಯ ರಸದೊಂದಿಗೆ ಬೆರೆಸಿ ಚಿಟಿಕೆ ಉಪ್ಪು ಸೇರಿಸಿ ದಿನಕ್ಕೆ ಎರಡು ಬಾರಿ ಮಹಿಳೆಯರು ಸೇವಿಸಿದ್ದಲ್ಲಿ ಮುತ್ತಿನ ಸಮಯದಲ್ಲಿ ಬರುವ ಹೊಟ್ಟೆನೋವು ಶಮನವಾಗುವುದು.
ಒಂದು ಭಾಗ ತುಂಬೆರಸದೊಂದಿಗೆ ಎರಡು ಭಾಗ ಜೇನುತುಪ್ಪ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಅರಿಶಿನ ಖಾಮಾಲೆ ಗುಣವಾಗುವುದು. ತುಂಬೆ ಸೊಪ್ಪಿನ ರಸದೊಂದಿಗೆ ನಾಲ್ಕೈದು ಕಾಳುಮೆಣಸು ಸೇರಿಸಿ ನುಣ್ಣಗೆ ಅರೆದು ಪ್ರತಿದಿನ ಬೆಳಿಗ್ಗೆ ಸುಮಾರು ಏಳೆಂಟು ಬಾರಿ ಸೇವಿಸಿದ್ದಲ್ಲಿ ಮಧುಮೇಹ ನಿಯಂತ್ರಣಕ್ಕೆ ಬರುವುದು.
ತುಂಬೆಯ ರಸವನ್ನು ಲೇಪಿಸುವುದರಿಂದ ನವೇ, ತುರಿಕೆ, ಇಸುಬು, ಕಜ್ಜಿ, ಗಜಕರ್ಣ ಮೊದಲಾದ ಚರ್ಮರೋಗಗಳು ನಿವಾರಣೆಯಾಗುವುದು. ತುಂಬೆಯ ಸೊಪ್ಪನ್ನು ಅರೆದು ಬಿಸಿ ಮಾಡಿ ತಲೆಗೆ ಲೇಪಿಸಿಕೊಂಡರೆ ಅರ್ಧ ತಲೆನೋವು ಮಾಯವಾಗುವುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.