ಅಂದು ವ್ಯಾಪಾರ ಮಾಡಲು 500 ರೂ ಸಾಲ ಪಡೆದ ಮಹಿಳೆ, ಇಂದು ಕೋಟ್ಟಿಗಟ್ಟಲೇ ಸಂಪಾದನೆ ಮಾಡಿದ್ದಾರೆ

ಇತರೆ

ಕೆಲವರು ಕಷ್ಟಪಟ್ಟು ದುಡಿದರು ಸಹ ಅವರಿಗೆ ಪ್ರತಿಫಲ ಸಿಗಲ್ಲಿಲ್ಲ ಎಂದು ನೋವು ಅನುಭವಿಸುತ್ತಾರೆ. ಕೆಲವರು ದುಡಿಯದೇ ಫಲ ಬಯಸಿ ನೋವು ಅನುಭವಿಸುವರು ಇದ್ದಾರೆ. ಅದರೆ ಕಷ್ಟಪಟ್ಟು ದುಡಿದರೆ ಯಾವತ್ತೋ ಒಂದು ದಿನ ಫಲ ಸಿಗುತ್ತದೆ ಎಂಬುವುದಕ್ಕೆ ಕೆಲವು ಸಂದರ್ಭಗಳು ಸಾಕ್ತಿ.

ಈ ದಿನದ ರೀಯಲ್ ಮಹಿಳಾ ಹೀರೋ ಕೃಷ್ಣ ಯಾದವ್, ಇವರು ಉತ್ತರ ಪ್ರದೇಶದವರು. ಇವರು ತನ್ನ ಸಣ್ಣ ಕುಟುಂಬದ ಬದಕು ಸಾಗಿಸಲು ಗ್ರಾಮದಲ್ಲಿ ಉಪ್ಪಿನ ಕಾಯಿ ಮಾರಾಟ ಮಾಡುತ್ತಾರೆ. ಅದರೆ ಅದು ಸರಿಯಾಗಿ ವ್ಯಾಪಾರವಾಗದೆ ಮನೆಯಲ್ಲಿ ಸಂಸಾರ ನಡೆಸಲು ಸಹ ಕಷ್ಟವಾಗುತ್ತದೆ.

ಅಂತಹ ಸಮಯದಲ್ಲಿ ಕೃಷ್ಣ ಯಾದವ್ ಅವರು ತನ್ನ ಗಂಡನ ಜೊತೆಗೆ ಇರುವ ಇಬ್ಬರು ಮಕ್ಕಳನ್ನು ಕರೆದುಕೊಂಡು ದೆಹಲಿಗೆ ಉದ್ಯೋಗಕ್ಕಾಗಿ ಹೋಗುತ್ತಾರೆ. ಅಲ್ಲಿ ಏನಾದರೂ ಮಾಡಿ ಕುಟುಂಬವನ್ನು ಸಮಸ್ಯೆವಿಲ್ಲದಂತೆ ಸಾಗಿಸಬೇಕೆಂದು ನಿರ್ಧಾರ ಮಾಡುತ್ತಾರೆ.

ಆಗ ಕೃಷ್ಣ ಯಾದವ್ ಅವರು ದೆಹಲಿಯಲ್ಲಿ ಆಡುಗೆ ಮಾಡುವ ತರಭೇತಿಯನ್ನು ಒಂದು ಸಂಸ್ಥೆಯಲ್ಲಿ ಪಡೆದುಕೊಳ್ಳುತ್ತಾರೆ. ನಂತರ ಇವರಿಗೆ ಯಾವುದೇ ರೀತಿಯ ಉದ್ಯೋಗ ಸಿಗದೇ ಮತ್ತೆ ತಾವು ಈ ಹಿಂದೆ ಮಾಡುತ್ತಿದ್ದ ಉಪ್ಪಿನ ಕಾಯಿ ತಯಾರು ಮಾಡಿ ವ್ಯಾಪಾರ ಮಾಡಲು ಆಲೋಚನೆ ಮಾಡುತ್ತಾರೆ.

ಅದರೆ ಉಪ್ಪಿನ ಕಾಯಿ ತಯಾರಿಸಿ ಮಾರಾಟ ಮಾಡಲು ಇವರ ಬಳಿ ಸರಿಯಾಗಿ ಹಣವಿರುವುದಿಲ್ಲ. ಅಂತಹ ಸಮಯದಲ್ಲಿ ಕೃಷ್ಣ ಯಾದವ್ ಅವರು ತನ್ನ ಸ್ನೇಹಿತರ ಬಳಿ ಐದು ನೂರುಗಳನ್ನು ಪಡೆದುಕೊಂಡು ಉಪ್ಪಿನ ಕಾಯಿ ತಯಾರು ಮಾಡಲು ಪ್ರಾರಂಭ ಮಾಡುತ್ತಾರೆ.

ಅವರಿಗೆ ಅ ಹಣವು ಸಹ ಸರಿಯಾಗಿ ಸಾಕಗದೇ ಮತ್ತೆ ಸ್ನೇಹಿತರ ಬಳಿ ಮೂರು ಸಾವಿರ ರೂಪಾಯಿಯನ್ನು ಸಾಲ ಮಾಡಿ ಉಪ್ಪಿನ ಕಾಯಿ ತಯಾರು ಮಾಡಿ ಮಾರಾಟ ಮಾಡುತ್ತಾರೆ. ಆಗ ಐದು ಸಾವಿರದ ಇನ್ನೋರ ಐವತ್ತು ರೂಪಾಯಿ ಲಾಭ ಬರುತ್ತದೆ.

ಹೀಗೆ ಸಣ್ಣದಾಗಿ ಪ್ರಾರಂಭ ಮಾಡಿದ ಕೃಷ್ಣಯಾದವ್ ಉಪ್ಪಿನ ಕಾಯಿ ಮಾರಾಟ ಇಂದು ದೇಶದಲ್ಲಿ ಬಹಳ ಎತ್ತರಕ್ಕೆ ಬೆಳೆದು ನಿಂತಿದೆ. ಈಗಾಗಲೇ ಶ್ರೀ ಕೃಷ್ಣ ಪಿಕಲ್ಸ್ ಎಂಬ ಕಂಪನಿ ಈಗ ಸುಮಾರು 350 ರಿಂದ 400 ಮಹಿಳೆಯರಿಗೆ ಉದ್ಯೋಗವನ್ನು ನೀಡಿದೆ. ಕೃಷ್ಣ ಯಾದವ್ ಮಾಡಿರುವ ಸಾಧನೆಯನ್ನು ನೋಡಿ ಕೆಂದ್ರ ಸರ್ಕಾರ ಪ್ರಶಸ್ತಿಯನ್ನು ಸಹ ನೀಡಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *