ತಿನ್ನಲು ಕಹಿಯಾದ್ರು ಆರೋಗ್ಯಕ್ಕೆ ಸಿಹಿಯಾದ ಬೇವು ಈ ರಕ್ತ ಶುದ್ದೀಕರಣ ಸೇರಿ ಈ ಹತ್ತು ದೊಡ್ಡ ರೋಗಗಳಿಗೆ ಉತ್ತಮ ಮನೆಮದ್ದು

ಆರೋಗ್ಯ

ಸಿಡುಬು ಅಮ್ಮ ದದ್ದು, ಕಾಲಿನ ಮೊಳೆ ಮೊದಲಾದ ತೊಂದರೆಗಳು ಬೇವಿನಿಂದ ಬೇಗನೇ ನಿವಾರಣೆಯಾಗುತ್ತದೆ. ಸುಲಭವಾಗಿ ಬಗ್ಗದ ಹರ್ಪೆಸ್ ವೈರಸ್ ಕೂಡ ಬೇವು ನಾಶ ಮಾಡುತ್ತದೆ. ಕಹಿ ಬೇವನ್ನು ತಿನ್ನುವುದರ ಲಾಭವೇನು? ಯಾವೆಲ್ಲ ಸಮಸ್ಯೆಗೆ ಇದು ಮದ್ದು ಎನ್ನುವ ಮಾಹಿತಿ ಇಲ್ಲಿದೆ.

ಲಿವರ್ ಸಮಸ್ಯೆಗೆ ಮದ್ದು: ಬೇವಿನ ಎಲೆಗಳನ್ನು ಸೇವಿಸುವುದರಿಂದ ಲೀವರ್ ಕ್ಷಮತೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚುತ್ತದೆ. ಅಲ್ಲದೇ ರಕ್ತದಿಂದ ವಿಷಕಾರಿ ಅಂಶವನ್ನು ಹೊರಹಾಕಲು ನೆರವಾಗುತ್ತದೆ. ಜೊತೆಗೆ ಜೀರ್ಣ ಮತ್ತು ಶ್ವಾಸಕೋಶದ ವ್ಯವಸ್ಥೆಯನ್ನು ಇದು ಉತ್ತಮಗೊಳಿಸುತ್ತದೆ. ಅಲ್ಲದೇ ಬೇವಿನ ಎಣ್ಣೆ ಮತ್ತು ಬೇವಿನ ರಸಗಳನ್ನು ಸೇವಿಸುವುದರಿಂದ ದೇಹದಲ್ಲಿದ್ದ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶವಾಗುತ್ತದೆ.

ಚರ್ಮದ ಸಮಸ್ಯೆಗೆ: ಬೇವಿನ ಎಣ್ಣೆಯನ್ನು ಬಿಸಿ ನೀರಿನಲ್ಲಿ ಸೇರಿಸಿ ಸ್ನಾನ ಮಾಡುವುದರಿಂದ ವಿವಿಧ ಚರ್ಮರೋಗಗಳು, ತುರಿಕೆ, ಹುಳಕಡ್ಡಿ ಮೊದಲಾದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಶೀತ ಮತ್ತು ಎಕ್ಸಿಮಾದಂತಹ ಚರ್ಮರೋಗವೂ ಕೂಡ ಇದರಿಂದ ವಾಸಿಯಾಗುತ್ತದೆ.

ತ್ವಚೆಯ ಕಲೆ ನಿವಾರಿಸುತ್ತದೆ: ಗಾಯ ಮತ್ತು ಮೊಡವೆಗಳು ಮಾಗಿದ ಬಳಿಕ ಚರ್ಮದ ಮೇಲೆ ಕಲೆಗಳು ಉಳಿದು ಬಿಡುತ್ತದೆ. ಈ ಕಲೆಗಳನ್ನು ನಿವಾರಿಸಲು ಬೇವು ಸಹಕಾರಿಯಾಗಿದ್ದು, ಮುಖದಲ್ಲಿ ಮತ್ತೆ ಮೊಡವೆಗಳು ಆಗದಂತೆ ತಡೆಯುತ್ತದೆ.

ಚಿಕ್ಕಪುಟ್ಟ ಗಾಯಗಳಾದರೆ ಬೇವಿನ ಎಲೆಗಳ ರಸ ಅಥವಾ ಎಲೆಗಳನ್ನು ಅರೆದ ಹಚ್ಚಿದರೆ ಗಾಯಗಳು ಬೇಗ ಮಾಗುತ್ತದೆ. ಅಲ್ಲದೆ ಮೊಡವೆಗಳನ್ನು ನಿಯಂತ್ರಿಸಲು ನಿತ್ಯವೂ ಸ್ನಾನ ಮಾಡುವ ನೀರಿಗೆ ಬೇವಿನ ಎಣ್ಣೆಯ ಕೆಲವು ಹನಿಗಳನ್ನು ಸೇರಿಸಿದರೆ ತ್ವಚೆಯ ದುರ್ಗಂಧ, ಸೋಂಕುಗಳು ನಿವಾರಣೆಯಾಗುತ್ತದೆ ಹಾಗೂ ಚರ್ಮದಲ್ಲಿ ದದ್ದು, ಮೊಡವೆಗಳು ಆಗದಂತೆ ಇದು ನೋಡಿಕೊಳ್ಳುತ್ತದೆ.

ಮುಖದ ಕಾಂತಿ ಹೆಚ್ಚಿಸುತ್ತದೆ: ಬೇವಿನ ಎಲೆಗಳನ್ನು ಹಾಕಿ ಕುದಿಸಿದ ನೀರಿನಲ್ಲಿ ಅದ್ದಿದ ಬಟ್ಟೆಯನ್ನು ಇಡೀ ರಾತ್ರಿ ಮುಖದ ಮೇಲೆ ಇಟ್ಟುಕೊಂಡು ಮಲಗಿದರೆ ಮುಖದ ಕಾಂತಿ ಹೆಚ್ಚಾಗುತ್ತೆ. ಹಾಗೆಯೇ ಈ ನೀರನ್ನು ತಲೆಗೆ ಹಚ್ಚಿ ಸ್ನಾನ ಮಾಡಿದರೆ ಕೂಡಲು ಉದುರುವಿಕೆ, ತಲೆಹೊಟ್ಟಿನ ಸಮಸ್ಯೆ ನಿವಾರಣೆ ಆಗುತ್ತದೆ.

ರಕ್ತ ಶುದ್ಧೀಕರಣಗೊಳಿಸುತ್ತೆ: ಬೇವನ್ನು ತಿಂದರೆ ರಕ್ತ ಶುದ್ಧೀಕರಣಗೊಳ್ಳುತ್ತದೆ ಹಾಗೂ ರಕ್ತದೊತ್ತಡ ಕಡಿಮೆಯಾಗುತ್ತದೆ. ರಕ್ತದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರ ಹಾಕಿ, ರಕ್ತಸಂಚಾರ ಉತ್ತಮಗೊಳ್ಳುತ್ತದೆ. ವೃದ್ಧಾಪ್ಯ ಬೇಗನೇ ಆವರಿಸಲು ಕಾರಣವಾಗುವ free radical ಎಂಬ ಕಣಗಳನ್ನು ಬೇವು ಕೊಲ್ಲುವುದರಿಂದ ತಾರುಣ್ಯ ಬಹುಕಾಲ ಉಳಿಯುತ್ತದೆ. ಅಲ್ಲದೇ ಬೇವನ್ನು ಸೇರಿಸಿದರೆ ರಕ್ತನಾಳಗಳಲ್ಲಿ ಸಂಗ್ರಹವಾಗಿದ್ದ ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಯಾಗಿ, ದೇಹದಲ್ಲಿ ರಕ್ತಸಂಚಾರ ಸುಗಮಗೊಳ್ಳುತ್ತದೆ. ಇದರಿಂದ ಹೃದಯದ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ.

ಮಲೇರಿಯಾ ಜ್ವರಕ್ಕೆ: ಬೇವಿನಲ್ಲಿರುವ ಜೆಡ್ಯುನಿನ್ (Gedunin) ಎಂಬ ರಾಸಾಯನಿಕ ಮಲೇರಿಯಾ ಜ್ವರವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಬೇವಿನ ಎಲೆಗಳನ್ನು ಜಜ್ಜಿ ಮನೆಯ ಸುತ್ತ ಮುತ್ತ ಹರಡುವುದರಿಂದ ಆ ವಾಸನೆಗೆ ಸೊಳ್ಳೆಗಳು ಕಡಿಮೆ ಆಗುತ್ತದೆ. ಅಲ್ಲದೆ ಬೇವಿನ ಎಲೆಗಳನ್ನು ತಿಂದರೆ ಅಥವಾ ಅದರ ರಸವನ್ನು ಕುಡಿದರೆ ಮಲೇರಿಯಾ ಜ್ವರ ಕಡಿಮೆ ಆಗುತ್ತದೆ.

ಕ್ಯಾನ್ಸರ್ ನಿಯಂತ್ರಿಸಲು: ನಿಯಮಿತವಾಗಿ ಬೇವಿನ ಎಲೆಗಳನ್ನು ಹಸಿಯಾಗಿ ಸೇವಿಸುವವರಲ್ಲಿ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಳ್ಳು ಸಾಧ್ಯತೆ ಕಡಿಮೆ. ಬೇವಿನ ಮರದ ತೊಗಟೆಯಲ್ಲಿ ಕಂಡುಬರುವ Limonoids ಮತ್ತು polysaccharides ಎಂಬ ರಾಸಾಯನಿಕಗಳು ದೇಹದಲ್ಲಿ ಕ್ಯಾನ್ಸರ್ ಮತ್ತು ಗಡ್ಡೆಯುಂಟಾಗುವುದನ್ನು ತಡೆಯುತ್ತದೆ.

ಸಂಧಿವಾತಕ್ಕೆ: ಸಂಧಿವಾತ ಸಮಸ್ಯೆಗೆ ಬೇವಿನ ಎಲೆ ಮತ್ತು ಬೇವಿನ ತೊಗಟೆಯನ್ನು ಅರೆದು ತಯಾರಿಸಿದ ಲೇಪನ ಉತ್ತಮ ಪರಿಹಾರ ನೀಡುತ್ತದೆ. ಇದರಿಂದ ಸಂದುಗಳಲ್ಲಿ ಬಾವು, ನೋವು ಕೂಡ ಕಡಿಮೆಯಾಗುತ್ತದೆ.

ಬೇವಿನ ಎಣ್ಣೆಯ ಮಸಾಜ್: ಬೇವಿನ ಎಣ್ಣೆ ಚರ್ಮಕ್ಕೆ ಒಳ್ಳೆದು. ಈ ಎಣ್ಣೆಯಲ್ಲಿ ಮೈಯನ್ನು ಮಸಾಜ್ ಮಾಡುವುದರಿಂದ ಕೆಳಬೆನ್ನಿನ ನೋವು, ಸಂಧಿವಾತ, ಸ್ನಾಯುಗಳಲ್ಲಿ ನೋವು ಹೀಗೆ ವಿವಿಧ ನೋವುಗಳು ಕಡಿಮೆಯಾಗುತ್ತವೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *