ನೀವು ಹಲವು ದಿನಗಳಿಂದ ಮಂಡಿ ಹಾಗು ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ ಎಂದರೆ ಈ ವಿಧಾನವನ್ನು ಮಾಡಿ ನೋಡಿ ಹಾಗು ಕೀಲು ನೋವು ಮಂಡಿ ನೋವುಗಳಿಂದ ಮುಕ್ತರಾಗಿ. ಪಾರಿಜಾತ ಗಿಡದ ಬಗ್ಗೆ ನೀವು ಕೇಳಿರುತ್ತೀರಾ ಇಲ್ಲ ನೋಡಿರುತ್ತೀರಾ, ಆದರೆ ಹೂ ಬಿಳಿಯ ಬಣ್ಣದಲ್ಲಿರುತ್ತದೆ, ರಾತ್ರಿ ಹೊತ್ತಿನಲ್ಲಿ ಈ ಹೂಗಳು ಬಿಡುತ್ತವೆ, ಸುಮಾರು ದೂರದವರೆಗೂ ಈ ಹೂವಿನ ಪರಿಮಳ ವಿರುತ್ತದೆ.
ದೇವಾಲಯಗಳಲ್ಲಿ ಹೆಚ್ಚಾಗಿ ಈ ಗಿಡಗಳೇ ಕಂಡು ಬರುತ್ತವೆ, ಇದರ ಎಲೆಗಳನ್ನು 6, 7 ರಷ್ಟು ತೆಗೆದುಕೊಂಡು ನುಣ್ಣಗೆ ಫೇಸ್ಟ್ ಮಾಡಿಕೊಳ್ಳಬೇಕು, ಅದನ್ನು ಒಂದು ಗ್ಲಾಸ್ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು, ಆ ನೀರು ಅರ್ಧ ಆಗುವವರೆಗೂ ಕಷಾಯದಂತೆ ಮಾಡಿಕೊಳ್ಳಬೇಕು, ಆ ಕಷಾಯವನ್ನು ರಾತ್ರಿಯೆಲ್ಲ ಹಾಗೆಯೇ ಇಟ್ಟು ಬೆಳಿಗ್ಗೆ ತಣ್ಣಗೆ ಇರುವಾಗಲೇ ಕುಡಿಯಬೇಕು.
ಪಾರಿಜಾತ ಎಲೆಗಳ ಕಷಾಯವು, ರುಮಟಾಯಿಡ್, ಅರ್ಥರೈಟಿಸ್ ನೋವುಗಳಿಗೆ ಉತ್ತಮವಾದ ಔಷಧವಾಗಿ ಕೆಲಸ ಮಾಡುತ್ತದೆ. ಇದನ್ನು ತಯಾರಿಮಾಡಿಕೊಂಡು ಪ್ರತಿದಿನ ತೆಗೆದುಕೊಂಡರೆ ಕೇವಲ 30 ರಿಂದ 40 ದಿನಗಳಲ್ಲೇ ಎಂತಹ ಕೀಲು ನೋವು ವಾಸಿಯಾಗುತ್ತದೆ, ಮೂಳೆಗಳಲ್ಲಿ ಸವೆದುಹೋಗಿರುವ ಕಾರ್ಟಿಲೆಜ್ ಎಂಬ ಅಂಶ ಮತ್ತೆ ಉತ್ಪತ್ತಿಯಾಗುತ್ತದೆ.
ಅವುಗಳಲ್ಲದೆ ಈ ಔಷಧವು ಡೆಂಗಿ ಜ್ವರಕ್ಕೂ ಸಹ ಉಪಯುಕ್ತವಾದದ್ದು, ಡೆಂಗಿ ಕಾರಣವಾಗಿ ಬರುವ ಮೈ ನೋವುಗಳು ಗುಣಮುಖವಾಗಬೇಕೆಂದರೆ ಈ ಔಷಧವನ್ನು ಕುಡಿಯಬೇಕಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.