ಸಬ್ಬಕ್ಕಿಯಲ್ಲಿ ಪ್ರೊಟೀನ್, ಕ್ಯಾಲ್ಶಿಯಂ ಮತ್ತು ಐರನ್ ಮತ್ತು ಇನ್ನು ಹಲವು ಅಂಶಗಳನ್ನು ಒಳಗೊಂಡಿದೆ. ಹಾಗಾಗಿ ಇದು ನಿಮ್ಮ ಆರೋಗ್ಯಕ್ಕೆ ತುಂಬಾನೇ ಸಹಾಯಕಾರಿಯಾಗಿದೆ. ಈ ಸಬ್ಬಕ್ಕಿಯನ್ನು ಕೆಲವೊಂದು ಆಹಾರಗೊಳೊಂದಿಗೆ ಸೇರಿಸಿಕೊಂಡು ಬಳಸಿದರೆ ನಿಮ್ಮ ಮುಖ ಬಿಳುಪನ್ನು ಕಾಣುತ್ತದೆ ಹಾಗೆಯೆ ಕೂದಲು ಕಪ್ಪಾಗುತ್ತವೆ.
ಇಲ್ಲಿದೆ ನೋಡಿ ಸಬ್ಬಕ್ಕಿಯ ಪ್ರಯೋಜನಗಳು ಹಾಗು ಬಳಸುವ ರೀತಿ: ಸಬ್ಬಕ್ಕಿಯನ್ನು ಪುಡಿ ಮಾಡಿ ಅದರಲ್ಲಿ ಹಾಲನ್ನು ಮಿಕ್ಸ್ ಮಾಡಿ. ಇದನ್ನು ಮುಖದ ಮೇಲೆ ಹಚ್ಚುವುದರಿಂದ ಮುಖದ ಬಣ್ಣ ಬಿಳಿಯಾಗುತ್ತದೆ.
ಸಬ್ಬಕ್ಕಿಯನ್ನು ಜೇನು ಮತ್ತು ನಿಂಬೆಯ ರಸದೊಂದಿಗೆ ಮಿಕ್ಸ್ ಮಾಡಿ ಹಚ್ಚಿದರೆ ಮುಖದ ಮೇಲಿನ ಎಲ್ಲಾ ಕಲೆ ನಿವಾರಣೆಯಾಗುತ್ತದೆ. ಸಬ್ಬಕ್ಕಿಯ ಪುಡಿಯನ್ನು ಮೊಸರಿನೊಂದಿಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಸ್ಕಿನ್ ಹೊಳೆಯುತ್ತದೆ. ಸಬ್ಬಕ್ಕಿಯನ್ನು ಆಲಿವ್ ಆಯಿಲ್‌ನಲ್ಲಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಒಂದು ಗಂಟೆಯ ನಂತರ ವಾಶ್ ಮಾಡಿ. ಇದರಿಂದ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.
ಸಬ್ಬಕ್ಕಿ ಪುಡಿಯನ್ನು ಮೊಸರು, ಜೇನು ಮತ್ತು ರೋಸ್ ವಾಟರ್ ಜೊತೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿದರೆ ಕೂದಲು ಹೊಳೆಯುತ್ತೆ. ಈ ಪುಡಿಯನ್ನು ಹಾಲು ಮತ್ತು ಅರಿಶಿನದ ಜೊತೆ ಸೇರಿಸಿ ಸ್ಕಿನ್‌ಗೆ ಹಚ್ಚುವುದರಿಂದ ಸ್ಕಿನ್ ಟ್ಯಾನಿಂಗ್ ದೂರವಾಗುತ್ತದೆ.
ಸಬ್ಬಕ್ಕಿಯನ್ನು ಪುಡಿ ಮಾಡಿ ಅದಕ್ಕೆ ಮೊಟ್ಟೆಯ ಹಳದಿ ಭಾಗವನ್ನು ಮಿಕ್ಸ್ ಮಾಡಿ ಹಚ್ಚಿದರೆ ಸುಕ್ಕು ನಿವಾರಣೆಯಾಗುತ್ತದೆ. ಮುಖದ ತುಂಬಾ ಪಿಂಪಲ್ ಆಗಿದ್ದರೆ ಸಬ್ಬಕ್ಕಿಯ ಪುಡಿಯ ಜೊತೆಗೆ ಹಳದಿ ಮತ್ತು ರೋಸ್ ವಾಟರ್ ಮಿಕ್ಸ್ ಮಡಿ ಹಚ್ಚಿದರೆ ಪಿಂಪಲ್ ಮಾಯವಾಗುತ್ತದೆ.
ಗೋಧಿ ಬಣ್ಣವನ್ನು ದೂರ ಮಾಡಿ ಫೇರ್ ತ್ವಚೆ ನಿಮ್ಮದಾಗಬೇಕಾದರೆ ಸಬ್ಬಕ್ಕಿಯನ್ನು ಪುಡಿ ಮಾಡಿ ಅದಕ್ಕೆ ಕಡ್ಲೆಹಿಟ್ಟು ಮತ್ತು ಮೊಸರು ಸೇರಿಸಿ ಮುಖಕ್ಕೆ ಹಚ್ಚಿ. ನಿಮ್ಮ ಫೇಸ್ ಹೊಳೆಯಲು ಆರಂಭವಾಗುತ್ತೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.